ಆದರೆ, ಈ ವರ್ಷ ಪರಿಸ್ಥಿತಿ ಕೊಡಗಿನಲ್ಲಿ ಭಿನ್ನವಾಗಿದೆ. ಈ ವರ್ಷದ ಮೊದಲ ಅರ್ಧ ಭಾಗ ಸ್ವಲ್ಪವೂ ಮಳೆಯಾಗಲಿಲ್ಲ. ಜುಲೈ ಮೊದಲ ವಾರದಲ್ಲಿ ಬಿರುಸಿನ ಮಳೆ ಕಂಡುಬAದರೂ 2ನೇ ವಾರಕ್ಕೆ ರಭಸ ಕಳೆದುಕೊಂಡು ಬಿಸಿಲಿನ ವಾತಾವರಣ ನಿರ್ಮಾಣ ಆಗಿದೆ. ದೀರ್ಘಾವಧಿ ಭತ್ತದ ಬೆಳೆಯುವುದು ಬೇಡ, ಅಲ್ಪಾವಧಿ ಮತ್ತು ಮಧ್ಯಮಾವಧಿ ಭತ್ತದ ತಳಿಗಳನ್ನೇ ಬೆಳೆಯಿರಿ ಎಂದು ಕೃಷಿ ಇಲಾಖೆ ಅಧಿಕಾರಿಗಳು ಈಗಾಗಲೇ ರೈತರಿಗೆ ಸಲಹೆ ಕೊಡುತ್ತಿದ್ದಾರೆ. ಈ ವರ್ಷದ ವಾತಾವರಣ, ಹವಾಮಾನ ಇಲಾಖೆಯ ದೀರ್ಘಕಾಲೀನ ಮುನ್ಸೂಚನೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಗಮನಿಸಿದರೆ ಬೆಳೆ ವಿಮೆ ಮಾಡಿಸುವುದು ತೀರಾ ಅಗತ್ಯವಾಗಿದೆ ಎನ್ನುವುದು ಪ್ರಗತಿಪರ ರೈತರ ಅಭಿಪ್ರಾಯವಾಗಿದೆ.