ಒಣಗಿದ ಮರಬಿದ್ದು ಬೆಳೆಗಾರ ಸಾವು

ಮೃತ ನಂದೀಶ್
ಮೃತ ನಂದೀಶ್
Published on
ಸೋಮವಾರಪೇಟೆ: ತೋಟದಲ್ಲಿದ್ದ ಒಣಗಿದ ಮರವೊಂದು ಬಿದ್ದು ಕಾಫಿ ಬೆಳೆಗಾರ ಸಾವನ್ನಪ್ಪಿರುವ ಘಟನೆ ಸಮೀಪದ ಚಿಕ್ಕತೋಳೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ಚಿಕ್ಕತೋಳೂರು ಗ್ರಾಮದ ಬೆಳೆಗಾರ ನಂದೀಶ್(51) ಮೃತ.
ಇವರು ಗುರುವಾರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಒಣಗಿದ ಮರ ಬಿದ್ದು, ಗಂಭೀರ ಗಾಯಗೊಂಡರು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ ಪತ್ನಿ ಪವಿತ್ರಾ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಶುಕ್ರವಾರ ಸ್ವಗ್ರಾಮದಲ್ಲಿ ಲಿದ್ದಾರೆ. ಅಂತ್ಯಕ್ರಿಯೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net