ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡೆಂಗ್ಯೂ, ಮಲೇರಿಯಾ, ಮತ್ತಿತರ ರೋಗಗಳು ಹರಡದಂತೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಜಿಲ್ಲೆಯಲ್ಲಿ ಜನವರಿಯಿಂದ ಮೇ ವರೆಗೆ ಟೈಪಾಯಿಡ್ ಜ್ವರದಿಂದ 101 ಪ್ರಕರಣ, ನಾಯಿ ಕಡಿತದಿಂದ 2,961, ಹಾವು ಕಡಿತದಿಂದ 101, ಭೇದಿಯಿಂದ 942, ಡೆಂಗ್ಯೂವಿನಿAದ 16, ಇಲಿ ಜ್ವರದಿಂದ 23, ತೀವ್ರ ಉಸಿರಾಟ 8, ಶ್ವಾಸಕೋಶ ಸಂಬAಧಿಸಿದ ಕಾಯಿಲೆಗೆ 2513 ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಆರೋಗ್ಯಯುತರಾಗಿದ್ದಾರೆ ಎಂದು ಮಾಹಿತಿ ನೀಡಿದರು.