ಹಿಂದೂ ಸಂಗಮ ಆಯೋಜನ ಸಮಿತಿ ನಂಜರಾಯಪಟ್ಟಣ ಮಂಡಲದ ವತಿಯಿಂದ ಹಿಂದೂ ಸಂಗಮ ಅದೂರಿ ಶೋಭಾಯಾತ್ರೆ ನಡೆಯಿತು. ಬಿ.ಸಿ.ಮುರಳಿ ಮಾದಯ್ಯ, ಕೆ.ವಿ.ಪ್ರೇಮಾನಂದ, ದೇವಿಪ್ರಸಾದ್, ಎನ್.ಕೆ.ಮೋಹನ್ ಕುಮಾರ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಂಜರಾಯಪಟ್ಟಣ ಮಂಡಲ ಅಧ್ಯಕ್ಷ ಬಿ.ಸಿ.ಮುರಳಿ ಮಾದಯ್ಯ ಹೇಳಿಕೆ
ಹಿಂದೂ ಸಂಗಮ ಶೋಭಾಯಾತ್ರೆ
ಕುಶಾಲನಗರ: ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿ ನಂಜರಾಯಪಟ್ಟಣ ಮಂಡಲದ ವತಿಯಿಂದ ಬುಧವಾರ ಹಿಂದೂ ಸಂಗಮ ಅದ್ದೂರಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಹೊಸಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹೊಸಪಟ್ಟಣದಿಂದ ಆರಂಭಗೊಂಡ ಶೋಭಾಯಾತ್ರೆ ಮೆರವಣಿಗೆ ನಂಜರಾಯಪಟ್ಟಣ ಸೊಸೈಟಿ ವರೆಗೆ ತೆರಳಿ ಬಳಿಕ್ ನಂಜುಂಡೇಶ್ವರ ದೇವಾಲಯ ಬಳಿ ಸಮಾಪ್ತಿಗೊಂಡಿತು.
ವಿವಿಧ ವೇಷಧಾರಿಗಳು, ಮಕ್ಕಳನ್ನು ಹೊತ್ತ ಬೆಳ್ಳಿ ರಥ, ಭಾರತಾಂಭೆ ಭಾವಚಿತ್ರ ಒಳಗೊಂಡ ವಾಹನದೊಂದಿಗೆ ಕಳಸ ಹೊತ್ತ ಮಹಿಳೆಯರೊಂದಿಗೆ 700 ಕ್ಕೂ ಅಧಿಕ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆ ಉದ್ದಕ್ಕೂ ಮಕ್ಕಳಿಂದ ಸಾಂಪ್ರದಾಯಿಕ ಭಜನೆ ನೃತ್ಯ ಪ್ರದರ್ಶನ ನಡೆಯಿತು. ಚಂಡೆ ವಾದ್ಯದೊಂದಿಗೆ ಬೃಹತ್ ಗೊರಿಲ್ಲಾ ಮತ್ತಿತರ ಗೊಂಬೆ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ಮುಂದಿನ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿ ಮಹತ್ವ ಅರಿವು ಮೂಡಿಸುವುದು, ಹಿಂದೂ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಿರುವುದಾಗಿ ನಂಜರಾಯಪಟ್ಟಣ ಮಂಡಲ ಅಧ್ಯಕ್ಷ ಬಿ.ಸಿ.ಮುರಳಿ ಮಾದಯ್ಯ ತಿಳಿಸಿದರು.
ಕಾರ್ಯಕ್ರಮದ ಕುರಿತು ಕೆ.ವಿ.ಪ್ರೇಮಾನಂದ ಮಾಹಿತಿ ನೀಡಿದರು. ಆರ್.ಎಸ್.ಎಸ್ ಕಾರ್ಯಕಾರಿಣಿ ಸದಸ್ಯರಾದ ನವೀನ್ ಸುಬ್ರಮಣ್ಯ ದಿಕ್ಸೂಚಿ ಭಾಷಣ ಮಾಡಿದರು.
ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್, ನಂಜರಾಯಪಟ್ಟಣ
ನಂಜುಂಡೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎನ್.ಕೆ.ಮೋಹನ್ ಕುಮಾರ್, ಮಾಜಿ ಶಾಸಕ ಅಪ್ಪಚ್ಚುರಂಜನ್, ಗ್ರಾಮದ ಪ್ರಮುಖರಾದ ಕೆ.ವಿ.ಪ್ರೇಮಾನಂದ, ಕೆ.ಎಸ್.ರತೀಶ್, ಆರ್.ಕೆ.ಚಂದ್ರ, ನವೀನ, ಮಾವಜಿ ರಕ್ಷಿತ್, ವಿಜು ಚಂಗಪ್ಪ, ಯದುಕುಮಾರ್, ವಂದನಾ, ಸಂಘ ಸಂಸ್ಥೆಯ ಪ್ರಮುಖರು ಇದ್ದರು.