ಅಡುಗೆ ಅನಿಲ ದರ ಏರಿಕೆ ಸಿಪಿಐಎಂನಿಂದ ಪ್ರತಿಭಟನೆ

ಅಡುಗೆ ಅನಿಲದ ಬೆಲೆ ಏರಿಕೆಯನ್ನು ವಿರೋಧಿಸಿ ಸಿಪಿಐಎಂ ಶಾಖೆಯ ವತಿಯಿದ ನೆಲ್ಯಹುದಿಕೇರಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಜರುಗಿತು.
ಅಡುಗೆ ಅನಿಲದ ಬೆಲೆ ಏರಿಕೆಯನ್ನು ವಿರೋಧಿಸಿ ಸಿಪಿಐಎಂ ಶಾಖೆಯ ವತಿಯಿದ ನೆಲ್ಯಹುದಿಕೇರಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • CPI(M)
ಸಿದ್ದಾಪುರ: ಅಡುಗೆ ಅನಿಲದ ಬೆಲೆ ಏರಿಕೆಯನ್ನು ವಿರೋಧಿಸಿ ನೆಲ್ಯಹುದಿಕೇರಿ ಸಿಪಿಐಎಂ ಶಾಖೆಯ ವತಿಯಿದ ನೆಲ್ಯಹುದಿಕೇರಿ ಬಸ್ ನಿಲ್ದಾಣದಲ್ಲಿ ಭಾನುವಾರ ಪ್ರತಿಭಟನೆ ಮಾಡಲಾಯಿತು.
ಯುದ್ಧದ ಹೆಸರಿನಲ್ಲಿ ಜನಸಾಮಾನ್ಯರು ಬಳಸುವ ಅಡುಗೆ ಅನಿಲದ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ಗ್ರಾಮೀಣ ಪ್ರದೇಶದಲ್ಲಿ 45 ದಿನಕ್ಕೊಮ್ಮೆ ಮಾತ್ರ ಸಿಲಿಂಡರ್ ನೀಡುವುದಾಗಿ ಆದೇಶಿಸಿರುವುದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತುಂಬಲಾರದ ಹೊರೆ ಆಗಿದೆ ಎಂದು ಆರೋಪಿಸಿದರು.
ವಾಣಿಜ್ಯ ಅಡುಗೆ ಅನಿಲದ ಬೆಲೆಯೂ ಭಾರಿ ಏರಿಕೆ ಕಂಡಿರುವುದರಿಂದ ನಗರ ಪ್ರದೇಶಗಳಲ್ಲಿ ಅನೇಕ ಹೋಟೆಲ್‌ಗಳು ಮುಚ್ಚಲ್ಪಟ್ಟಿದ್ದು, ನಗರ ಪ್ರದೇಶದ ಜನರು ಗ್ರಾಮೀಣ ಭಾಗಗಳಿಗೆ ವಲಸೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ತಕ್ಷಣವೇ ಅಡುಗೆ ಅನಿಲದ ಬೆಲೆಯನ್ನು ಇಳಿಸಿ, ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಗಳಿಲ್ಲದೆ ನಿರಂತರವಾಗಿ ಅನಿಲ ಪೂರೈಕೆ ಮಾಡುವಂತೆ ಆಗ್ರಹಿಸಿದರು.
ಸಿಪಿಐಎಂ ಶಾಖಾ ಕಾರ್ಯದರ್ಶಿ ಪಿ.ಆರ್. ಭರತ್, ಟಿ.ಟಿ. ಉದಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net