ಅಯ್ಯಂಗೇರಿ ಗ್ರಾಮದ ನಿವಾಸಿ ಮೊಹಮ್ಮದ್ ಪಳ್ಳಿ ಅವರು ತಮ್ಮ ಗದ್ದೆಯಲ್ಲಿ ಶನಿವಾರ ಮೇಯಲು ಹಸುಗಳನ್ನು ಬಿಟ್ಟಿದ್ದ ಸಂದರ್ಭ ಬೀದಿ ನಾಯಿಗಳು ಕಚ್ಚಿ ರಂಪಾಟ ಮಾಡಿವೆ. ದಾಳಿ ಮಾಡಿದ ನಾಯಿಗಳು ಒಂದು ಹಸುವನ್ನು ಕಚ್ಚಿ ಕೊಂದಿದಲ್ಲದೆ ಬಹುತೇಕ ಭಾಗಗಳನ್ನು ತಿಂದು ಹಾಕಿವೆ. ಇತರ ಮೂರು ನಾಲ್ಕು ಜಾನುವಾರುಗಳನ್ನೂ ಕಚ್ಚಿ ಗಾಯಗೊಳಿಸಿವೆ. ಬಲ್ಲಮಾವಟ್ಟಿ ಪಶುವೈದ್ಯ ಡಾ.ಚೇತನ್ ಭೇಟಿ ನೀಡಿ ಗಾಯಗೊಂಡ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು. ಮೃತ ಹಸುವನ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿದರು.