ಅತಿ ಶೀಘ್ರ ಸುಸಜ್ಜಿತ ಕಟ್ಟಡ ನಿರ್ಮಾಣ

ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗಣ್ಯರು ಭೂಮಿಪೂಜೆ ನೆರವೇರಿಸಿದರು. ಭವಾನಿ ಶಂಕರ್, ಕೃಷ್ಣರಾವ್, ಸುಮಿತ್ರಾ ಬಾಯಿ, ನಟರಾಜ್, ಉದಯ ಶಂಕರ್, ವಾಸುದೇವ, ಗೀತಾ, ವೇಣುಗೋಪಾಲ್ ಇದ್ದರು.
ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗಣ್ಯರು ಭೂಮಿಪೂಜೆ ನೆರವೇರಿಸಿದರು. ಭವಾನಿ ಶಂಕರ್, ಕೃಷ್ಣರಾವ್, ಸುಮಿತ್ರಾ ಬಾಯಿ, ನಟರಾಜ್, ಉದಯ ಶಂಕರ್, ವಾಸುದೇವ, ಗೀತಾ, ವೇಣುಗೋಪಾಲ್ ಇದ್ದರು.
Published on
ವಿರಾಜಪೇಟೆ: ಪಟ್ಟಣದ ಮಲಬಾರ್ ರಸ್ತೆಯಲ್ಲಿರುವ ನಂಬರ್ 376ನೇ ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಇತ್ತೀಚೆಗೆ ಗಣ್ಯರು ನೆರವೇರಿಸಿದರು.
ಸಂಘದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದಂತಹ ಮಾಜಿ ಅಧ್ಯಕ್ಷರಾದ ಬಿ.ವಿ ಭವಾನಿ ಶಂಕರ್ ಬೋರ್ಕರ್, ಎಚ್.ಕೆ.ಕೃಷ್ಣರಾವ್ ಹಾಗೂ ಸುಮಿತ್ರಾ ಬಾಯಿ ಅವರು ಭೂಮಿಪೂಜೆಯನ್ನು ನೆರವೇರಿಸಿದರು.
ಸಂಘದ ಮಾಜಿ ಅಧ್ಯಕ್ಷ ಕ್ಯಾಪ್ಟನ್ ಬಿ.ವಿ.ಭವಾನಿ ಶಂಕರ್ ಬೋರ್ಕರ್ ಮಾತನಾಡಿ, ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘವು ಸಕ್ರಿಯ ಸಂಘವಾಗಿದ್ದು ಮಲಬಾರ್ ರಸ್ತೆಯ ಬಳಿ ಸಂಘಕ್ಕೆ 1952ರಲ್ಲಿ ನಿವೇಶನ ದೊರಕಿದ್ದು ತದನಂತರ 1955ರಲ್ಲಿ ಅಂದಿನ ಕೊಡಗು ಸಿ ರಾಜ್ಯದ ಮುಖ್ಯಮಂತ್ರಿ ಸಿ.ಎಂ.ಪೂಣಚ್ಚ ಅವರು ಸಂಘದ ಕಟ್ಟಡವನ್ನು ಉದ್ಘಾಟಿಸಿದ್ದರು. ತದನಂತರ ಈ ಸಂಘದ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಸದಸ್ಯರ ಪ್ರೋತ್ಸಾಹ ಹಾಗೂ ಸಹಕಾರದಿಂದ ಸಂಘವು ಮುಂದುವರಿಯುತ್ತಿದ್ದು ಇದೀಗ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಅತಿ ಶೀಘ್ರವಾಗಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಸಂಘದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು.
ಹೆಗ್ಗಳ ಗ್ರಾಮದ ಅರ್ಚಕರಾದ ವೇಣುಗೋಪಾಲ್ ಭಟ್ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬಿ.ಜಿ.ನಟರಾಜ್ ಬೋರ್ಕರ್ ಮಾತನಾಡಿ, ಹಿಂದಿನ ಕಟ್ಟಡವು ಹಳೆಯದಾದ್ದರಿಂದ ಇದೀಗ ಸುಸಜ್ಜಿತವಾಗಿ ಕಟ್ಟಡವನ್ನು ನಿರ್ಮಿಸುವ ಸಲುವಾಗಿ ಭೂಮಿಪೂಜೆ ನೆರವೇರಿಸಲಾಗಿದೆ. ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಯನ್ನು ಕ್ರಿಯಾಶೀಲವಾಗಿಸುವ ಗುರಿಯನ್ನು ಹೊಂದಲಾಗಿದೆ. ಸದಸ್ಯರು ಹಾಗೂ ಊರಿನವರು, ಸಂಘ ಸಂಸ್ಥೆಗಳ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಉದಯ ಶಂಕರ್, ಉಪಾಧ್ಯಕ್ಷೆ ಸ್ವಾತಿ, ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net