ಭಾರತದ ಕಾಫಿಗೆ ಯುರೋಪ್‌ನಲ್ಲಿ ಗ್ರೀನ್ ಸಿಗ್ನಲ್

 ಟ್ರೇಡರ್ಸ್ ಮತ್ತು ಕಾಫಿ ಬೆಳೆಗಾರರ ಸಮಾವೇಶದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ಮಾತನಾಡಿದರು.
ಟ್ರೇಡರ್ಸ್ ಮತ್ತು ಕಾಫಿ ಬೆಳೆಗಾರರ ಸಮಾವೇಶದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ಕಾಫಿಗೆ ಯುರೋಪ್‌ನಲ್ಲಿ ಗ್ರೀನ್ ಸಿಗ್ನಲ್
  • ಟ್ರೇಡರ್ಸ್ ಮತ್ತು ಕಾಫಿ ಬೆಳೆಗಾರರ ಸಮಾವೇಶದಲ್ಲಿ ದಿನೇಶ್

ಕುಶಾಲನಗರ: ಯುರೋಪಿಯನ್ ಒಕ್ಕೂಟವು ಹಸಿರು ಕಾಫಿ, ರೋಸ್ಟ್ ಗ್ರೌಂಡ್ ಕಾಫಿ, ಗ್ರೌಂಡ್ ಕಾಫಿ ಮತ್ತು ತ್ವರಿತ ಕಾಫಿ ಸೇರಿದಂತೆ ಎಲ್ಲಾ ವಿಧದ ಕಾಫಿ ಉತ್ಪನ್ನಗಳ ಮೇಲೆ ವಿಶ್ವದ ಅತಿ ದೊಡ್ಡ ಆಮದುದಾರರು ಮತ್ತು ಮರು ರಫ್ತುದಾರರಲ್ಲಿ ಒಂದಾಗಿದೆ ಎಂದು ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ಹೇಳಿದರು.

ಕೂಡು ಮಂಗಳೂರುನಲ್ಲಿ ಭಾರತೀಯ ಕಾಫಿ ಮಂಡಳಿ ವತಿಯಿಂದ ಆಯೋಜಿಸಿದ್ದ ಟ್ರೇಡರ್ಸ್ ಮತ್ತು ಕಾಫಿ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ೨೯ ಕಾಫಿ ಬೆಳೆಯುವ ಯುರೋಪಿಯನ್ ದೇಶಗಳು ಒಂದಾಗಿ ಜಾಗತಿಕ ತಾಪಮಾನವನ್ನು ಆಧಾರವಾಗಿಟ್ಟುಕೊಂಡು ಪರಿಸರ ಸಂರಕ್ಷಣೆಯನ್ನು ಮಾಡುವ ಉದ್ದೇಶದಿಂದ ಇಆಖ ಅನ್ನು ಜಾರಿಗೆ ತಂದಿವೆ. ಪ್ರಪಂಚದ ಎಲ್ಲ ದೇಶಗಳು ಇದನ್ನು ಆರನೇ ಮಾಡಬೇಕು ಎಂಬ ಉದ್ದೇಶ ಇದರಲ್ಲಿದೆ. ಇದರಲ್ಲಿ ರಿಸ್ಕ್, ಲೋ-ರಿಸ್ಕ್, ಹೈ-ರಿಸ್ಕ್ ಎಂಬ ಅಂಶವಿದ್ದು ಭಾರತದ ಕಾಫಿ ಲೋ-ರಿಸ್ಕ್ ನಲ್ಲಿದೆ. ಆದ್ದರಿಂದ ನಮ್ಮ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚು ಕ್ರಾಸ್ ಚೆಕ್ ಮಾಡುವುದಿಲ್ಲ. ಒಟ್ಟಾರೆ ನಮ್ಮ ದೇಶದ ಕಾಫಿ ರಫ್ತು ಮಾಡುವ ಪ್ರಮಾಣದ ಶೇಕಡ ಒಂದರಷ್ಟನ್ನು ಮಾತ್ರ ಚೆಕ್ ಮಾಡಲಾಗುತ್ತದೆ ಎಂದರು.
ಕಾಫಿ ಮಂಡಳಿಯು ನಮ್ಮ ಕಾಫಿ ಬೆಳೆಗಾರರಿಗಾಗಿ ಹಾಗೂ ದೇಶ ರಕ್ಷಣೆಯ ಉದ್ದೇಶವನ್ನು ಹೊಂದಿ ಇಂಡಿಯ ಕಾಫಿ ಆ್ಯಪ್ ಸಿದ್ದ ಮಾಡಿದ್ದು, ಇದು ಇಸ್ರೋ ಜೊತೆಯಲ್ಲಿ ಟೈ-ಆಫ್ ಆಗಿರುತ್ತದೆ. ಅದರ ಮೂಲಕ ಕಾಫಿ ಬೆಳೆಗಾರ ರೈತರು ತಮ್ಮ ಮಾಹಿತಿಗಳನ್ನು ಅಭಿವೃದ್ಧಿಪಡಿಸಿಕೊಂಡರೆ ಅದನ್ನು ಕಾಫಿ ಮಂಡಳಿಯವರು ಅನುಮೋದನೆ ಮಾಡುತ್ತಾರೆ. ಅಂತಹ ಅನುಮೋದನೆಯ ಅಂಶವನ್ನು ಯುರೋಪಿಯನ್ ದೇಶಗಳಿಗೆ ಕಳುಹಿಸುವ ನಮ್ಮ ಕಾಫಿ ರಫ್ತನ್ನು ಸಂರಕ್ಷಣೆ ಮಾಡಿಕೊಳ್ಳುವ, ಆ ಕಾಫಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಅವಕಾಶಗಳಿರುತ್ತದೆ. ನಮ್ಮ ದೇಶದ ಕಾಫಿ ರಫ್ತು ಪ್ರಮಾಣ ಶೇ.೪೫ ಇರುವುದರಿಂದ ಪ್ರತಿ ಕಾಫಿ ಬೆಳಗಾರರು ಈ ಆ್ಯಪ್ ಮೂಲಕ ತಮ್ಮ ಬೆಳೆ, ಗುಣಮಟ್ಟ ಕಾಪಾಡಿಕೊಳ್ಳಬಹುದು ಎಂದು ಬೆಳೆಗಾರರಿಗೆ ಸಲಹೆ ನೀಡಿದ ಅವರು, ಈ ಆ್ಯಪ್ ಸಿದ್ಧತೆಯನ್ನು ಖಾಸಗಿ ಅವರಿಗೆ ನೀಡಬಹುದಿತ್ತು. ಆದರೆ, ಅದರಿಂದ ಕಾಫಿ ಬೆಳೆಗಾರರಿಗೆ ಒಂದು ಟನ್ ಕಾಫಿ ರಫ್ತು ಮಾಡಲು ೩೫ ಡಾಲರ್, ಶುಲ್ಕ ಪಾವತಿಸಬೇಕಿತ್ತು. ಜೊತೆಗೆ ಸ್ಯಾಟಲೈಟ್ ಆಧಾರಿತವಾದ ಈ ಸಂದರ್ಭವನ್ನು ನಮ್ಮ ದೇಶದ ರಹಸ್ಯ ಸೋರಿಕೆಯಾಗುವ ಆತಂಕದ ಅವಕಾಶಗಳು ಇದ್ದವು. ಆ ಕಾರಣಕ್ಕಾಗಿ ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆಯ ಮೂಲಕ ಭಾರತೀಯ ಕಾಫಿ ಮಂಡಳಿ ಇದನ್ನು ಅಭಿವೃದ್ಧಿಪಡಿಸಿದೆ ಎಂದರು.
ಯುರೋಪಿಯನ್ ಒಕ್ಕೂಟದ ದೇಶಗಳ ಬೆಳೆಗಳಿಗಿಂತ ನಮ್ಮ ದೇಶದ ನೆರಳಿನಲ್ಲಿ ಬೆಳೆಯುವ ಕಾಫಿಗೆ ಉತ್ತಮ ಗುಣಮಟ್ಟ ಇದೆ. ಭಾರತೀಯ ಕಾಫಿ ಮಂಡಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದಂತೆ ಸರ್ಕಾರ ಸ್ಪಂದಿಸಿ ಸುಮಾರು ೫೦ ಲಕ್ಷ ವೆಚ್ಚ ಮಾಡಿ ಕೆನಡಾ ಜರ್ಮನಿ, ಚೈನಾ, ಪೆರು, ಚಿಲಿ, ಬೆಹರನ್ ದೇಶಗಳಲ್ಲಿ ಪ್ರಾಜ್ಞರ ಮೂಲಕ ಅಧ್ಯಯನ ಮಾಡಿಸಿದೆ. ಅದರಂತೆ ಕಾಫಿ ಬೆಳೆಗಾರರು, ಮಂಡಳಿಗೆ ಅಧಿಕಾರಿಗಳು ಮತ್ತು ಕಾಫಿ ಉದ್ದಿಮೆಗೆ ಸಂಬಂಧಪಟ್ಟ ಹೊರಗಿನವರ ಜೊತೆ ಸಂವಹನ ನಡೆಸಲಾಗಿದೆ. ನಮ್ಮ ಇಂಡಿ ಕಾಫಿ ಭಾರತದ ಹೆಗ್ಗುರುತು, ಬ್ರ್ಯಾಂಡ್ ಕೂಡ ಆಗಿದೆ ಎಂದರು.
ಕಾಫಿ ಮಂಡಳಿಯ ಕಾರ್ಯದರ್ಶಿಗಳು, ಹಾಗೂ ಕಾರ್ಯನಿರ್ವಹಣಾಧಿಕಾರಿ ಕುಮಾರ್ ರಾವ್ ಮಾತನಾಡಿ, ಯುರೋಪಿಯನ್ ಒಕ್ಕೂಟವು ಭಾರತದ ಕಾಫಿ ರಫ್ತುಗಳಿಗೆ ಅತಿ ದೊಡ್ಡ ಗಮ್ಯ ಸ್ಥಾನವಾಗಿದ್ದು ಭಾರತದ ಒಟ್ಟು ಕಾಫಿ ರಫ್ತುನ ಶೇ.೪೫ ಪಾಲನ್ನು ಹೊಂದಿದೆ. ಇಟಲಿ ದೇಶವು ಭಾರತೀಯ ಕಾಫಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಭಾರತದ ಒಟ್ಟು ಕಾಫಿ ರಫ್ತುಗಳಲ್ಲಿ ಸುಮಾರು ಶೇ.೧೬ ಪಾಲಾಗಿದೆ ಎಂದರು.
ಕಾಫಿಯನ್ನು ಯುರೋಪಿಯನ್ ಒಕ್ಕೂಟದ ಅರಣ್ಯ ನಾಶ ತಡೆ ನಿಯಂತ್ರಣ ವ್ಯಾಪ್ತಿಗೆ ತರಲಾಗಿದೆ. ೨೦೨೩ ರ ಜೂನ್ ೨೯ರಂದು ಜಾರಿಗೆ ಬಂದಿರುವ ಇಆಖ ನಿಯಮದ ಪ್ರಕಾರ ಯುರೋಪಿಯನ್ನು ಒಕೂಟಕ್ಕೆ ಕಾಫಿ ಆಮದು ಮಾಡುವ ಕಂಪನಿಗಳು ಆ ಕಾಫಿ ಅರಣ್ಯ ನಾಶವಾಗದ ಪ್ರದೇಶಗಳಿಂದ ಉತ್ಪಾದನೆಯಾಗಿದ್ದು, ೨೦೨೦ ರ ಡಿ.೩೧ರ ಅರಣ್ಯ ನಾಶಗೊಂಡ ಭೂಮಿಯಲ್ಲಿ ಬೆಳೆದದ್ದಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಇಆಖ ನಿಯಮಗಳು ದೊಡ್ಡ ವ್ಯಾಪಾರಿಗಳು ಮತ್ತು ನಿರ್ವಹಣಾ ಸಂಸ್ಥೆಗಳಿಗೆ ೨೦೨೬ ರ ಡಿ.೩೦ ರಿಂದ ಹಾಗೂ ಸಣ್ಣ ವ್ಯಾಪಾರಿಗಳು ಮತ್ತು ನಿರ್ವಹಣಾ ಸಂಸ್ಥೆಗಳಿಗೆ ೨೦೨೭ರ ಜೂ.೩೦ ರಿಂದ ಅನ್ವಯವಾಗಲಿದೆ ಎಂದರು.
ಭಾರತೀಯ ಕಾಫಿ ಬೆಳಗಾರರಿಗೆ ನೆರವಾಗಲು ಹಾಗೂ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಭಾರತೀಯ ಕಾಫಿ ರಫ್ತು ನಿರಂತರವಾಗಿ ನಡೆಯುವಂತೆ ಮಾಡಲು ಕಾಫಿ ಮಂಡಳಿಯು ಇಂಡಿಯಾ ಕಾಫೀ ಆಪ್ ನಲ್ಲಿ ಇಆಖ ಅನುಸಾರ ಕಾಫಿ ಬೆಳೆಗಾರರ ನೋಂದಣಿ ಘಟಕ ಮತ್ತು ಜಿಯೋ ಲೊಕೇಶನ್ ಪಾಲಿಗಾನ್ ಸೃಷ್ಟಿ ಘಟಕಗಳನ್ನು ಅಳವಡಿಸಿದೆ ಎಂದರು.
ಭಾರತೀಯ ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ಉಪ ನಿರ್ದೇಶಕ ಡಾ.ಪ್ರದೀಪ್ ಬಾಬು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟ್ರೇಡರ್ಸ್, ಕಾಫಿ ಬೆಳೆಗಾರರಿಗೆ ಉಪನ್ಯಾಸ ನೀಡಿದರು.
ವೇದಿಕೆಯ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಆರ್ಥಿಕ ಇಲಾಖೆಯ ಅಧಿಕಾರಿ ಅಮೂಲ್ಯ, ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ಅಧಿಕಾರಿ ಸೆಂತಿಲ್ ಕುಮಾರ್, ಕೊಡಗು ಜಿಲ್ಲಾ ಪರಿಷತ್ ಕಾರ್ಯನಿರ್ವಹಣಾಧಿಕಾರಿ ಆನಂದ್, ಕೊಡಗು ಜಿಲ್ಲಾ ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ ಹಾಗೂ ಸಭೆಯಲ್ಲಿ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net