ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ಖಂಡನೆ

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸವಾದಿ) ವಿರಾಜಪೇಟೆ ಘಟಕ ಶುಕ್ರವಾರ ಪ್ರತಿಭಟನೆ ನಡೆಸಿತು. ಕೆ.ವಿ.ಸುನಿಲ್, ಡಾ.ಇ.ಆರ್.ದುರ್ಗಾಪ್ರಸಾದ್, ಸಿಪಿಐ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಪಿ.ಆರ್.ಭರತ್, ಡಿಎಸ್‌ಎಸ್ ಸಮಿತಿ ಸದಸ್ಯ ಸತೀಶ್,  ಕೆ.ಕೆ.ಹರಿದಾಸ್, ಪಿ.ಖಾಲಿದ್, ಕೆ. ಖಾಸಿಂ, ಡಿವೈಎಫ್‌ಐ ಮುಖಂಡರಾದ ಸಾಧಿಕ್ ಇತರರು ಇದ್ದರು.
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸವಾದಿ) ವಿರಾಜಪೇಟೆ ಘಟಕ ಶುಕ್ರವಾರ ಪ್ರತಿಭಟನೆ ನಡೆಸಿತು. ಕೆ.ವಿ.ಸುನಿಲ್, ಡಾ.ಇ.ಆರ್.ದುರ್ಗಾಪ್ರಸಾದ್, ಸಿಪಿಐ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಪಿ.ಆರ್.ಭರತ್, ಡಿಎಸ್‌ಎಸ್ ಸಮಿತಿ ಸದಸ್ಯ ಸತೀಶ್, ಕೆ.ಕೆ.ಹರಿದಾಸ್, ಪಿ.ಖಾಲಿದ್, ಕೆ. ಖಾಸಿಂ, ಡಿವೈಎಫ್‌ಐ ಮುಖಂಡರಾದ ಸಾಧಿಕ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
  • ಭಾರತ ಕಮ್ಯೂನಿಸ್ಟ್ ಪಕ್ಷದಿಂದ ಪ್ರತಿಭಟನೆ
ವಿರಾಜಪೇಟೆ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸವಾದಿ) ವಿರಾಜಪೇಟೆ ಘಟಕ ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಗಡಿಯಾರ ಕಂಬದ ಬಳಿ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಎ.ಸಿ.ಸಾಬು ಅವರ ನೇತೃತ್ವದಲ್ಲಿ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಬಿ.ರಮೇಶ್ ಮಾತನಾಡಿ, ಇಸ್ರೇಲ್- ಇರಾನ್ ಯುದ್ಧದಿಂದ ತೈಲ ಉತ್ವನ್ನಗಳ ಆಮದಿಗೆ ತಡೆಯಾಗಿದೆ. ಸಂಘರ್ಷದ ಮುನ್ಸೂಚನೆಯಿದ್ದರೂ ಕೇಂದ್ರ ಸರ್ಕಾರ ನಿತ್ಯ ಬಳಕೆಯಾಗುವ ಗ್ಯಾಸ್ ಸಿಲಿಂಡರ್ ಶೇಖರಿಸಿಕೊಂಡಿಲ್ಲ. ಜತೆಗೆ ಈ ಸಮಯದಲ್ಲೇ ಬೆಲೆಯನ್ನೂ ಏರಿಸಿದ್ದಾರೆ. ಇದರಿಂದ ಜನರಿಗೆ ಹಾಗೂ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಮಿತಿಯ ಸದಸ್ಯರಾದ ಎ.ಸಿ.ಸಾಬು ಮಾತನಾಡಿ, ಕಟ್ಟಿಗೆ ಒಲೆ ಬಿಟ್ಟು ಗ್ಯಾಸ್ ಬಳಸಿ ಹೊಗೆ ರಹಿತ ಜೀವನ ನಡೆಸಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದೀಗ ಗ್ಯಾಸ್ ಬೆಲೆ ಏರಿಸಿ ಸಾಮಾನ್ಯ ಜನರ ಜೀವನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮತ್ತು ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ತಲೆದೋರಿದೆ. ಇದರಿಂದ ಹೋಟೆಲ್ ಉದ್ಯಮ ಮುಚ್ಚುವ ಹಂತಕ್ಕೆ ತಲುಪಿದೆ. ಕೂಡಲೇ ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕೆ.ವಿ.ಸುನಿಲ್, ಡಾ.ಇ.ಆರ್.ದುರ್ಗಾಪ್ರಸಾದ್, ಸಿಪಿಐ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಪಿ.ಆರ್.ಭರತ್, ಡಿಎಸ್‌ಎಸ್ ಸಮಿತಿ ಸದಸ್ಯ ಸತೀಶ್, ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ವಿರಾಜಪೇಟೆ ಘಟಕದ ಕಾರ್ಯದರ್ಶಿ ಕೆ.ಕೆ.ಹರಿದಾಸ್, ಪಿ.ಖಾಲಿದ್, ಕೆ. ಖಾಸಿಂ, ಡಿವೈಎಫ್‌ಐ ಮುಖಂಡರಾದ ಸಾಧಿಕ್ ಇತರರು ಇದ್ದರು.
ಚಿತ್ರ ಅಳವಡಿಸಲಾಗಿದೆ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net