ಮಡಿಕೇರಿಯಲ್ಲಿ ಕಸವಿಲೇವಾರಿಯ ಆತಂಕ

ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಅಧ್ಯಕ್ಷತೆಯಲ್ಲಿ ಮಡಿಕೇರಿ ನಗರಸಭೆ ಕೌನ್ಸಿಲ್ ಸಾಮಾನ್ಯ ಸಭೆ ನಡೆಯಿತು. ಮಹೇಶ್ ಜೈನಿ, ಹೆಚ್.ಆರ್. ರಮೇಶ್ ಇದ್ದರು.
ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಅಧ್ಯಕ್ಷತೆಯಲ್ಲಿ ಮಡಿಕೇರಿ ನಗರಸಭೆ ಕೌನ್ಸಿಲ್ ಸಾಮಾನ್ಯ ಸಭೆ ನಡೆಯಿತು. ಮಹೇಶ್ ಜೈನಿ, ಹೆಚ್.ಆರ್. ರಮೇಶ್ ಇದ್ದರು.
Published on
ಮಡಿಕೇರಿ:
ಇಲ್ಲಿನ ನಗರಸಭೆ ಕೌನ್ಸಿಲ್ ಸಾಮಾನ್ಯ ಸಭೆಯು ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವಿನ ತೀವ್ರ ವಾಗ್ದಾಳಿ, ಆರೋಪ-ಪ್ರತ್ಯಾರೋಪ ಮತ್ತು ಕಸದ ಸಮಸ್ಯೆಯ ಬಿಸಿ ಬಿಸಿ ಚರ್ಚೆಗೆ ಸಾಕ್ಷಿಯಾಯಿತು. ಸಭೆ ಪ್ರಾರಂಭವಾಗುತ್ತಿದ್ದAತೆಯೇ ಎಸ್‌ಡಿಪಿಐ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದರೆ, ಸೂಕ್ತ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಎಂದು ಆಕ್ಷೇಪಿಸಿ ನಾಮನಿರ್ದೇಶಿತ ಸದಸ್ಯ ಮೊಹಮ್ಮದ್ ಯಾಕೂಬ್ ಸಭೆಯಿಂದ ಹೊರನಡೆದರು. ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡಿದ್ದ ಉಪಲೋಕಾಯುಕ್ತರು ನಗರಸಭೆಯ ಕಾರ್ಯವೈಖರಿ ಕುರಿತು ವ್ಯಕ್ತಪಡಿಸಿದ್ದ ತೀವ್ರ ಅಸಮಾಧಾನ ಮತ್ತು ಟೀಕೆಗಳ ವಿಷಯವೇ ಸಭೆಯ ಮುಖ್ಯ ಚರ್ಚಾವಸ್ತುವಾಯಿತು.
ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ನಗರದಲ್ಲಿ ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಮಾಹಿತಿ ನೀಡಲಾಗುವುದು. ಬೀದಿ ನಾಯಿಗಳ ನಿಯಂತ್ರಣಕ್ಕೆ ನಾಯಿಗೂಡು ಸಿದ್ಧವಾಗಿದ್ದು, ಶಸ್ತ್ರಚಿಕಿತ್ಸೆ ಶೀಘ್ರ ಆರಂಭಗೊಳ್ಳಲಿದೆ. ದಾಸವಾಳದಲ್ಲಿ ಕೆರೆಯನ್ನು ಉಳಿಸಿಕೊಂಡೇ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ಪೌರಾಯುಕ್ತ ಹೆಚ್.ಆರ್. ರಮೇಶ್, ದಾಸವಾಳ ಪಾರ್ಕ್ನ ಕೆರೆಗೆ ಶೌಚಾಲಯದ ನೀರು ಸೇರುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಮುಚ್ಚಲಾಗಿತ್ತು. ಪಾರ್ಕ್ ಅಭಿವೃದ್ಧಿ ವಿಷಯವನ್ನು ಚರ್ಚೆಗೆ ತರಲಾಗಿದೆ. ಆದರೆ ಪ್ರಸ್ತುತ ನಗರದಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಗೆ ಜಾಗದ ಕೊರತೆ ತೀವ್ರವಾಗಿದೆ. ಇನ್ನು ಒಂದು ವಾರ ಕಳೆದರೆ ನಗರದ ಕಸ ತೆಗೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ. ಮನೆಗಳಲ್ಲೇ ಹಸಿ ಕಸದಿಂದ ಗೊಬ್ಬರ ತಯಾರಿಸುವುದು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯೊAದು ಸಹಕಾರ ನೀಡಲು ಮುಂದೆ ಬಂದಿದೆ. ಶೀಘ್ರದಲ್ಲೇ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು" ಎಂದರು. ಅಲ್ಲದೆ, ಕಲ್ಯಾಣ ಮಂಟಪ, ಸರ್ಕಾರಿ ಆಸ್ಪತ್ರೆ ಹಾಗೂ ಹೋಟೆಲ್ ಪಾರ್ಸಲ್‌ಗಳಿಂದ ಹೆಚ್ಚು ಕಸ ಸೃಷ್ಟಿಯಾಗುತ್ತಿದ್ದು, ಮರುಬಳಕೆ ಮಾಡಬಹುದಾದ ತಟ್ಟೆ-ಲೋಟ ಬಳಸಲು ಸೂಚಿಸಬೇಕಿದೆ ಹಾಗೂ ಈ ಕುರಿತು ಶಾಸಕರು ಮತ್ತು ಸಂಸದರ ಉಪಸ್ಥಿತಿಯಲ್ಲಿ ಸಭೆ ನಡೆಸಬೇಕಿದೆ ಎಂದು ವಿವರಿಸಿದರು.
ಎಸ್.ಸಿ. ಸತೀಶ್ ಮಾತನಾಡಿ ಕಸದ ಸಮಸ್ಯೆಯ ತೀವ್ರತೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹೆಚ್ಚುವರಿ ಜಾಗ ಪಡೆಯಬೇಕು. ಜಾಗದ ವ್ಯವಸ್ಥೆ ಮಾಡಿಕೊಡದಿದ್ದರೆ ಕಸ ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದರೆ ಕೆ.ಎಂ. ಅಪ್ಪಣ್ಣ ಮಾತನಾಡಿ, ಉಪಲೋಕಾಯುಕ್ತರು ತರಾಟೆಗೆ ತೆಗೆದುಕೊಂಡದ್ದು ವಿರೋಧ ಪಕ್ಷದ ವಾರ್ಡ್ಗಳಲ್ಲಿದ್ದ ಲೋಪಗಳನ್ನು ನೋಡಿ. ರೆಸಾರ್ಟ್ಗಳಿಂದ ಹಣ ಪಡೆದು ನಗರದಲ್ಲಿ ಕಸ ಸುರಿಯುತ್ತಿರುವವರೇ ವಿಪಕ್ಷದವರು. ಕಸದ ಸಮಸ್ಯೆಗೆ 5 ಎಕರೆ ಜಾಗ ಸಾಲುವುದಿಲ್ಲ, ಮಡಿಕೇರಿಯ ಕಸವನ್ನು ಕುಶಾಲನಗರಕ್ಕೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಬಹುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net