ಮಡಿಕೇರಿಯಲ್ಲಿ 27ನೇ ಕಾರ್ಗಿಲ್ ವಿಜಯ್ ದಿವಸ್ ಹುತಾತ್ಮ ಯೋಧರ ಸ್ಮರಣೆ

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ 27ನೇ ಕಾರ್ಗಿಲ್ ವಿಜಯ್ ದಿವಸ್ ಹುತಾತ್ಮ ಯೋಧರ ಸ್ಮರಣಾ ಕಾರ್ಯಕ್ರಮದಲ್ಲಿ ಮಾಜಿ ಯೋಧರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದ
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ 27ನೇ ಕಾರ್ಗಿಲ್ ವಿಜಯ್ ದಿವಸ್ ಹುತಾತ್ಮ ಯೋಧರ ಸ್ಮರಣಾ ಕಾರ್ಯಕ್ರಮದಲ್ಲಿ ಮಾಜಿ ಯೋಧರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದ
Published on
ಮಡಿಕೇರಿ:
ಈ ನೆಲದ ಪ್ರತಿಯೊಬ್ಬರೂ ದೇಶಪ್ರೇಮ, ವಿನಮ್ರತೆ, ನಿಷ್ಠೆ ಮತ್ತು ಶಿಸ್ತಿನೊಂದಿಗೆ ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಮೂಲಕ ದೇಶ ಸೇವೆಗೆ ಮುನ್ನುಗ್ಗಬೇಕು ಎಂದು ಆರ್ಮಿ ಕ್ಯಾಂಟೀನ್ ಹಿರಿಯ ವ್ಯವಸ್ಥಾಪಕ ಲೆಫ್ಟಿನೆಂಟ್ ಕರ್ನಲ್ ಮೊಳ್ಳೇರ ಎಸ್. ಕಾವೇರಿಯಪ್ಪ (ನಿವೃತ್ತ) ಹೇಳಿದರು. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 27ನೇ ಕಾರ್ಗಿಲ್ ವಿಜಯ್ ದಿವಸ್ ಹುತಾತ್ಮ ಯೋಧರ ಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಗಿಲ್ ಯುದ್ಧದ ಸಂದರ್ಭ ತಾವು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದನ್ನು ಸ್ಮರಿಸಿಕೊಂಡ ಅವರು, ಕಾರ್ಗಿಲ್ ಯುದ್ಧವು ನಮ್ಮ ಗುಪ್ತಚರ ಮಾಹಿತಿಯ ವೈಫಲ್ಯದಿಂದ ನಡೆಯಿತೆನ್ನುವ ಆರೋಪವಿದೆ. ಆದರೆ, ಇದು ನಡೆದದ್ದು ಗುಪ್ತಚರ ವೈಫಲ್ಯದಿಂದಲ್ಲ. ಬದಲಿಗೆ, ಪಾಕ್ ಕುತಂತ್ರದಿAದ. ಉನ್ನತ ಗಿರಿಶಿಖರ ಕಾರ್ಗಿಲ್‌ನಲ್ಲಿ ಚಳಿಗಾಲದ ಅವಧಿಯಲ್ಲಿನ ಅತ್ಯಂತ ಕಠಿಣ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕ್ ನಡುವೆ ತಮ್ಮ ತಮ್ಮ ರಕ್ಷಣಾ ತಂಡಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡಿಕೊಳ್ಳಲಾಗಿದ್ದ ಒಡಂಬಡಿಕೆಗಳನ್ನು ಅಂದು ಪಾಕ್ ಮೀರಿ ವಂಚಿಸಿತ್ತು.
ಭಾರತೀಯ ಸೈನ್ಯದಲ್ಲಿನ ಸೇವೆ ಎನ್ನುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ. ಸೈನ್ಯದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರಿಗೂ ಬೆಳಗ್ಗೆ ಎದ್ದು ಸೇವೆ ಸಲ್ಲಿಸಲು ತೆರಳಿದ ಬಳಿಕ ಮರಳಿ ಬರುತ್ತೇವೋ ಇಲ್ಲವೋ ಎನ್ನುವ ಅರಿವು ಇರುವುದಿಲ್ಲ. ಪ್ರತಿಯೊಬ್ಬರು ರಾಷ್ಟçಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮರ ಸ್ಮರಣೆಯಲ್ಲಿ ನಡೆಸುತ್ತಿರುವ ಇಂತಹ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ. ಯುದ್ಧದ ಸಂದರ್ಭಗಳಲ್ಲಿ ನಾವೇ ಆತಂಕಕ್ಕೆ ಒಳಗಾಗುತ್ತೇವೆ. ಆದರೆ, ಯೋಧರು ಸ್ವತಃ ಯುದ್ಧ ಭೂಮಿಯಲ್ಲಿ ಕೆಚ್ಚೆದೆಯಿಂದ ಪರಿಸ್ಥಿತಿಗಳನ್ನು ಎದುರಿಸಿ ನಡೆಸುವ ಹೋರಾಟ, ಬಲಿದಾನಗಳ ಮೂಲಕ ರಾಷ್ಟç ರಕ್ಷಣೆೆ ಮಾಡುವುದು ಮಹತ್ತರವಾದುದು. ಇಂತಹ ಯೋಧರನ್ನು ಸ್ಮರಿಸುವುದು, ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಗಡಿಗಳನ್ನು ಕಾಯ್ದು ನಿವೃತ್ತರಾಗಿ ಬಂದು ನೆಲೆಸಿರುವ ಯೋಧರ ಸಂಕಷ್ಟಗಳಿಗೆ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಪ್ರಥಮ ಆದ್ಯತೆ, ಗೌರವ ದೊರಕಬೇಕಿದೆ. ಹಾಗೊಮ್ಮೆ ಯಾವುದೇ ಇಲಾಖೆಯಲ್ಲಿ ಸೈನಿಕರಿಗೆ ಅಗತ್ಯ ಕೆಲಸ ಕಾರ್ಯಗಳು ನಡೆಯದೆ ಅಗೌರದಿಂದ ನಡೆಸಿಕೊಳ್ಳಲಾಗಿದೆ ಎಂದಾದಲ್ಲಿ ತನಗೆ ತಿಳಿಸಿದರೆ ಆ ಸಂದರ್ಭ ತಾನು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾಜಿ ಸೈನಿಕರೊಂದಿಗೆ ತಾನಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕ ಹೆಚ್.ಟಿ. ಅನಿಲ್ ಮಾತನಾಡಿ, ಯೋಧರೊಂದಿಗೆ ಸಮರಗಳಲ್ಲಿ ಹುತಾತ್ಮರಾದ ಸೈನಿಕರ ವೀರನಾರಿಯರನ್ನು ಸಮಾಜ ಕಾಳಜಿಯಿಂದ ನೋಡಬೇಕು. ಯುದ್ದ ಮುಗಿಯಬಹುದು. ಆದರೆ ಯುದ್ದ ಮುಕ್ತಾಯವಾದ ಬಳಿಕವೇ ವೀರನಾರಿಯರ ಬದುಕಿನ ಯುದ್ದ ಪ್ರಾರಂಭವಾಗುತ್ತದೆ. ಕುಟುಂಬವನ್ನು ಸಲಹುವ ಬಹು ದೊಡ್ಡ ಹೊಣೆಗಾರಿಕೆ ವೀರನಾರಿಯರ ಮೇಲಿರುತ್ತದೆ. ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬAತೆ ಯೋಧ ದೇವೋಭವ ಎಂಬ ಮಂತ್ರ ನಮ್ಮೆಲ್ಲರ ಮನದಲ್ಲಿಯೂ ಹಾಸುಹೊಕ್ಕಾಗಬೇಕೆಂದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, 1999ರ ಮೇ3 ರಿಂದ ಜು.26ರವರೆಗೆ 85 ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ನೂರಾರು ವೀರ ಯೋಧರು ಹುತಾತ್ಮರಾಗಿದ್ದಾರೆ. ರಾಷ್ಟç ರಕ್ಷಣೆÉಗಾಗಿ ಹುತಾತ್ಮರಾದ ಯೋಧರ ಸ್ಮರಣೆಯಲ್ಲಿ ಮೂರು ವರ್ಷಗಳ ಹಿಂದೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಯೋಧರ ಸ್ಮರಣೆ ಕಾರ್ಯಕ್ರಮ ಆರಂಭಿಸಿತು. ಇಂತಹ ಕಾರ್ಯಕ್ರಮಗಳ ಮೂಲಕ ಭಾರತೀಯ ಸೇನೆಯಲ್ಲಿರುವ ಯೋಧರಿಗೆ ನೈತಿಕ ಸ್ಥೆöÊರ್ಯವನ್ನು ತುಂಬುವ, ಅವರ ರಕ್ಷಣೆಗೆ ಪ್ರಾರ್ಥಿಸುವ ಕಾರ್ಯ ಮನೆ ಮನೆಗಳಲ್ಲಿ ನಡೆಯಲಿ ಎಂದರು.
ಜಿಲ್ಲೆಯ ವಿವಿಧ ಭಾಗಗಳ 143 ಸಂಘಸAಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಆಗ್ರಾದ ಪ್ಯಾರಾ ರ್ಯೆಜಿಮೆಂಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಯೋಧ ಯತೀಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್, ಕಾರ್ಯದರ್ಸಿ ಸುರೇಶ್ ಬಿಳಿಗೇರಿ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್, ಕಾರ್ಯದರ್ಶಿ ಜಿ.ಡಿ. ಚೇತನ್, ರೋಟರಿ ಸಹಾಯಕ ಪ್ರಾಂತಪಾಲ ಹೆಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್, ಡಿವೈಎಸ್ಪಿ ಸೂರಜ್ ಸೇರಿದಂತೆ ಹಲವು ಗಣ್ಯರು ಹುತಾತ್ಮ ಯೋಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಭಾರತೀಯ ವೀರರೇ ಎಂ ಭಾವಪೂರ್ಣ ದೇಶಭಕ್ತಿಯ ಮೂಲಕ ಕೊಡಗು ಪತ್ರಿಕಾ ಭವನ ಟ್ರಸ್ಟ್ ಟ್ರಸ್ಟಿ ಜಿ. ಚಿದ್ವಿಲಾಸ್, ಯೋದರ ಗಾನ ನಮನಕ್ಕೆ ಮುನ್ನುಡಿ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೈಸೂರಿನ ರಾಜೇಶ್ ಪಡಿಯಾರ್ ಹಾಗೂ ಡಾ. ರಶ್ಮಿ ಅವರ ತಂಡ ವಿವಿಧ ದೇಶ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಕಾರ್ಗಿಲ್ ವಿಜಯ್ ದಿವಸನ್ನು ಅವಿಸ್ಮರಣೀಯಗೊಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net