ವೀರ ಸೇನಾನಿ ಅಜ್ಜಮಾಡ ದೇವಯ್ಯ ಸ್ಮರಣೆ

ಮಡಿಕೇರಿಯಲ್ಲಿ ನಡೆದ ಸ್ಕಾ÷್ವಡ್ರÀನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 61ನೇ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ವೀರಸೇನಾನಿಗೆ ನಮನ ಸಲ್ಲಿಸಿದರು. ಬೊಳ್ಳಜಿರ ಬಿ.ಅಯ್ಯಪ್ಪ, ಮುಂಜಾAದಿರ ರಾಜ ಅಪ್ಪಯ್ಯ, ಪ್ರೊ. ರಾಘವ ಬಿ. ಮತ್ತಿತರರು ಇದ್ದರು.
ಮಡಿಕೇರಿಯಲ್ಲಿ ನಡೆದ ಸ್ಕಾ÷್ವಡ್ರÀನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 61ನೇ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ವೀರಸೇನಾನಿಗೆ ನಮನ ಸಲ್ಲಿಸಿದರು. ಬೊಳ್ಳಜಿರ ಬಿ.ಅಯ್ಯಪ್ಪ, ಮುಂಜಾAದಿರ ರಾಜ ಅಪ್ಪಯ್ಯ, ಪ್ರೊ. ರಾಘವ ಬಿ. ಮತ್ತಿತರರು ಇದ್ದರು.
Published on
ಮಡಿಕೇರಿ:
ಮಹಾನ್ ಯೋಧನ ಸಾಹಸ ಮತ್ತು ರಾಷ್ಟçಕ್ಕಾಗಿ ಮಾಡಿದ ಬಲಿದಾನದÀ ಕುರಿತು ಸ್ಮರಣೆಯ ಮೂಲಕ ಯುವ ಸಮೂಹದಲ್ಲಿ ಪ್ರೇರಣೆಯನ್ನು ತುಂಬಬೇಕೆAದು ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಹೇಳಿದರು. ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ವಾ.ಲೀ ಅಜ್ಜಮಾಡ ದೇವಯ್ಯ ಟ್ರಸ್ಟ್ ಸಹಯೋಗದಲ್ಲಿ ಮಡಿಕೇರಿಯಲ್ಲಿ ಸೋಮವಾರ ನಡೆದ ಭಾರತ-ಪಾಕ್ ನಡುವಿನ 1965ರ ಯುದ್ಧದಲ್ಲಿ ಶತ್ರು ರಾಷ್ಟçದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಸಾಹಸಿ ಕೊಡಗಿನ ಸ್ಕಾ÷್ವಡ್ರÀನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 61ನೇ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಕಾ÷್ವ.ಲೀ. ದೇವಯ್ಯ ಅವರು ರಾಷ್ಟç ರಕ್ಷಣೆೆಗಾಗಿ ಯುದ್ಧ ವಿಮಾನದಲ್ಲಿ ಶತ್ರು ರಾಷ್ಟç ಪಾಕಿಸ್ತಾನದ ವಿರುದ್ಧ ವೀರೋಚಿತ ಹೋರಾಟ ನಡೆಸಿದರು. ಅವರು 1965 ರಲ್ಲಿ ಹುತಾತ್ಮರಾದರೂ ಸುಮಾರು 23 ವರ್ಷಗಳ ಬಳಿಕ ವಿಚಾರ ಜಗತ್ತಿನ ಅರಿವಿಗೆ ಬಂದಿತು. ಬಳಿಕ ಭಾರತ ಸರ್ಕಾರ ಅವರಿಗೆ ಮರಣೋತ್ತರ ಮಹಾವೀರ ಚಕ್ರ ಪ್ರದಾನ ಮಾಡಿತು ಎಂದರು.
ಭಾರತೀಯ ವಾಯುದಳದ ನಾನ್ ಕಮೀಷನ್ಡ್ ಆಫೀಸರ್, ರಾಡಾರ್ ಮತ್ತು ಮಿಸೈಲ್ ಇನ್‌ಸ್ಟçಕ್ಟರ್ ಮುಂಜಾAದಿರ ರಾಜ ಅಪ್ಪಯ್ಯ ಮಾತನಾಡಿ, 1965ರ ಇಂಡೋ ಪಾಕ್ ಯುದ್ಧದ ಸಂದರ್ಭ, ಸ್ಕಾ÷್ವ.ಲೀ.ಅಜ್ಜಮಾಡ ದೇವಯ್ಯ ಅವರು, ಶತ್ರುರಾಷ್ಟç ಪಾಕಿಸ್ತಾನ ಅಂದಿನ ಕಾಲಘಟ್ಟದಲ್ಲಿ ಹೊಂದಿದ್ದ ಅತ್ಯಾಧುನಿಕ ಯುದ್ಧ ವಿಮಾನವನ್ನು, ತಾವು ಚಾಲನೆ ಮಾಡುತ್ತಿದ್ದ ಯುದ್ಧ ವಿಮಾನ ಅದಕ್ಕಿಂತ ಕೆಳ ಮಟ್ಟದ್ದಾದರೂ, ಅದನ್ನು ಲೆಕ್ಕಿಸದೆ ತಮ್ಮ ಚಾಕಚಕ್ಯತೆ, ಅಸಾಮಾನ್ಯ ಸಾಹಸ, ದೃಢನಿಶ್ಚಯಗಳ ಮೂಲಕ ಹೊಡೆದುರುಳಿಸುವ ಮೂಲಕ ಸಾಹಸ ಮೆರೆÉದಿದ್ದರು. ಆದರೆ, ಈ ವಿಚಾರ ಸಾಕಷ್ಟು ವರ್ಷಗಳ ಕಾಲ ಬೆಳಕಿಗೆ ಬಂದಿರಲಿಲ್ಲ, ನಂತರ ಅಂದಿನ ದಿನಗಳಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನಿ ಸೈನ್ಯದ ಅಧಿಕಾರಿಯ ಮೂಲಕ ಬೆಳಕಿಗೆ ಬಂತು.
ಇಂತಹ ಮಹಾನ್ ಯೋಧನ ಪ್ರತಿಮೆಯನ್ನು ಕೊಡವ ಮಕ್ಕಡ ಕೂಟ ಸಾಕಷ್ಟು ಪರಿಶ್ರಮದಿಂದ ಅಜ್ಜಮಾಡ ಕುಟುಂಬಸ್ಥರು ಮತ್ತಿತರರ ಸಹಕಾರದೊಂದಿಗೆ ಸ್ಥಾಪನೆ ಮಾಡಿರುವುದು ಶ್ಲಾಘನೀಯವೆಂದರು.
ನಗರದ ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ, ಸ್ಕಾ÷್ವ.ಲೀ.ಅಜ್ಜಮಾಡ ದೇವಯ್ಯ ಪುಣ್ಯ ದಿನ ಎನ್ನುವುದಕ್ಕೂ ಮಿಗಿಲಾಗಿ, ಈ ದಿನ ತ್ಯಾಗ, ಬಲಿದಾನಗಳ ದಿನವೇ ಆಗಿದೆ. ಸ್ಕಾ÷್ವ.ಲೀ.ದೇವಯ್ಯ ಅವರ ಸಾಹಸ, ರಾಷ್ಟç ರಕ್ಷಣೆÉಯೆಡೆಗಿನ ಅಚಲ ನಿರ್ಧಾರಗಳು ಇಂದಿನ ಯುವ ಸಮೂಹಕ್ಕೆ ಸ್ಫೂರ್ತಿಯನ್ನು ನೀಡಲಿದೆ. ಭಾರತ ಮಾತೆಗೆ ಸ್ಕಾ÷್ವ.ಲೀ.ದೇವಯ್ಯ ಅವರಂತಹ ವೀರ ಯೋಧರನ್ನು ನೀಡಿದ ಕೊಡಗಿನ ಪುಣ್ಯ ಭೂಮಿ, ಇಲ್ಲಿನ ಪರಿಸರಕ್ಕೆ ನಾವೆಲ್ಲರು ಚಿರ ಋಣಿಗಳಾಗಬೇಕು. ಇಲ್ಲಿನ ಯುವ ಸಮೂಹ ದೇಶ ಸೇವೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕವಾಗಬೇಕೆಂದರು.
ಕಾವೇರಿ ಮೂಲ ಸ್ವರೂಪ ಸಂರಕ್ಷಣಾ ಸಮಿತಿಯ ಪದಾಧಿಕಾರಿ ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ಸ್ಕಾ÷್ವ.ಲೀ.ದೇವಯ್ಯ ಅವರ ಸಾಹಸ ಮತ್ತು ಬಲಿದಾನಗಳ ಹಿನ್ನೆಯಲ್ಲಿ ಅವರಿಗೆ ಸೇವಾ ಪದಕಗಳಲ್ಲಿ ಮೊದಲನೆಯದಾದ ಪರಮ ವೀರ ಚಕ್ರವನ್ನೇ ಮರಣೋತ್ತರವಾಗಿ ಪ್ರದಾನ ಮಾಡಬೇಕಾಗಿತ್ತು. ರಾಷ್ಟçದೆಡೆಗಿನ ಅವರ ಅಚಲ ನಿಷ್ಠೆ, ದೇಶಪ್ರೇಮ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಕೊಡಗಿನ ಇಬ್ಬರು ಮಹಾವೀರ ಚಕ್ರವನ್ನು ಪಡೆದಿದ್ದಾರೆ. ಸ್ಕಾ÷್ವ.ಲೀ. ಅಜ್ಜಮಾಡ ದೇವಯ್ಯ ಅವರ ಬಲಿದಾನದ ಬಳಿಕ 23 ವರ್ಷಗಳ ನಂತರ ಮರಣೋತ್ತರವಾಗಿ ಅವರಿಗೆ ಮಹಾವೀರ ಚಕ್ರವನ್ನು 1988ರಲ್ಲಿ ಪ್ರದಾನ ಮಾಡಲಾಗಿತ್ತು. ಕೊಡಗಿನವರೇ ಆದ ಲೆ.ಜ.ಪುಟ್ಟಿಚಂಡ ಗಣಪತಿ ಅವರು ಇದೇ ಗೌರವವನ್ನು ಪಡೆದ ಮತ್ತೊಬ್ಬರಾಗಿದ್ದಾರೆ ಎಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ವಾಯುದಳದ ಜೂನಿಯರ್ ವಾರಂಟ್ ಆಫೀಸರ್ ಬಾಳೆಯಡ ಮಂದಪ್ಪ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಡಿವೈಎಸ್‌ಪಿ ಪಿ.ಎ. ಸೂರಜ್, ಕೊಡಗು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಪ್ರೊ. ಮೇಚಿರ ರವಿಶಂಕರ್ ನಾಣಯ್ಯ, ಕೊಡಗು ವಿದ್ಯಾಲಯ ಶಾಲೆಯ ಎನ್‌ಸಿಸಿ ಅಧಿಕಾರಿ ಮೇಜರ್ ದಾಮೋದರ್ ಗೌಡ ಐ., ಮಡಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಸಾಹಿತಿ ಬೊಜ್ಜಂಗಡ ಡಾ.ಅವನಿಜ ಸೋಮಯ್ಯ, ಅಜ್ಜಮಾಡ ಒಕ್ಕದ ಬೆಳ್ಯಪ್ಪ ಮತ್ತಿತರರು ಇದ್ದರು.
ಇದಕ್ಕೂ ಮೊದಲು ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ಸ್ಕಾ÷್ವ.ಲೀ. ದೇವಯ್ಯ ವೃತ್ತದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ವೀರ ಸೇನಾನಿಗೆ ಗೌರವ ಅರ್ಪಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net