ಕಾಡಾನೆಗಳ ದಾಳಿಗೆ ಕಾಫಿ ತೋಟ ನಾಶ

ಲಕ್ಷ್ಮಿ ತೋಟ (ಅಜ್ಜಿ ತೋಟ)ಕ್ಕೆ ಕಾಡಾನೆಗಳ ಹಿಂಡು ಆಗಮಿಸಿ ಫಸಲು ಭರಿತ ಕಾಫಿ ಗಿಡಗಳನ್ನು ಹಾಳುಮಾಡಿರುವುದು.
ಲಕ್ಷ್ಮಿ ತೋಟ (ಅಜ್ಜಿ ತೋಟ)ಕ್ಕೆ ಕಾಡಾನೆಗಳ ಹಿಂಡು ಆಗಮಿಸಿ ಫಸಲು ಭರಿತ ಕಾಫಿ ಗಿಡಗಳನ್ನು ಹಾಳುಮಾಡಿರುವುದು.
Published on
ಸುಂಟಿಕೊಪ್ಪ : ಪಟ್ಟಣದ ಹೃದಯ ಭಾಗದ ತೋಟವೊಂದಕ್ಕೆ ಗುರುವಾರ ಬೆಳಗ್ಗೆ ಕಾಡಾನೆಗಳು ದಾಳಿ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
ಸುಂಟಿಕೊಪ್ಪ ಸರ್ಕಾರಿ ಶಾಲೆಯ ಹಿಂಭಾಗದ ಲಕ್ಷ್ಮೀ ತೋಟ (ಅಜ್ಜಿ ತೋಟ)ಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡಿ ಕಾಫಿ ಗಿಡಗಳನ್ನು ನಾಶ ಮಾಡಿದೆ. ತೋಟದ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲ ದಿನಗಳಿಂದ ಆನೆಗಳ ಓಡಾಟ ನಿರಂತರವಾಗಿದ್ದು, ರೈತರು ಆತಂಕದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದೂರದ ತೋಟಗಳಲ್ಲಿ ಬರುತ್ತಿದ್ದ ಕಾಡಾನೆಗಳು ಇದೀಗ ಜನವಸತಿ, ಪ್ರದೇಶ ಶಾಲೆಯ ಸಮೀಪಕ್ಕೆ ಆಗಮಿಸುತ್ತಿವೆ. ಆನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net