ಚೇಂಬರ್ ಆಫ್ ಕಾಮರ್ಸ್ಗೆ ಗಡಿಯಾರ ಕೊಡುಗೆ

ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ಗೆ ಕುಶಾಲನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗೋಡೆ ಗಡಿಯಾರ ಕೊಡುಗೆಯಾಗಿ ನೀಡಲಾಯಿತು. ರಾಮರಾವ್, ಕೆ.ಎಸ್. ನಾಗೇಶ್, ಚಿತ್ರ ರಮೇಶ್, ಎಸ್.ಕೆ. ಸತೀಶ್, ಪಿ.ಎಂ. ಮೋಹನ್, ವಿಮಲ್ ಜೈನ್, ಪೈಯಾಜ್ ಅಹಮದ್ ಮತ್ತಿತರು ಇದ್ದರು.

Published on
ಕುಶಾಲನಗರ:
ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಕಾರ್ಯವೈಖರಿ ಮೆಚ್ಚಿ ಕುಶಾಲನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗೋಡೆ ಗಡಿಯಾರ ಕೊಡುಗೆಯಾಗಿ ನೀಡಲಾಗಿದೆ. ಬ್ಯಾಂಕ್ ವ್ಯವಸ್ಥಾಪಕ ರಾಮರಾವ್ ಸೋಮವಾರ ಸಂಜೆ ಚೇಂಬರ್ ಕಚೇರಿಯಲ್ಲಿ ಚೇಂಬರ್ ಅಧ್ಯಕ್ಷ ಕೆ.ಎಸ್. ನಾಗೇಶ್ ಮತ್ತು ತಂಡಕ್ಕೆ ಗಡಿಯಾರ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಸದಾ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ವರ್ತಕರ ಪರವಾಗಿ ನಿಂತಿರುವುದನ್ನು ನಾವು ಗಮನಿಸಿದ್ದೇವೆ. ಚೇಂಬರ್ ಆಫ್ ಕಾಮರ್ಸ್ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವೆಯನ್ನು ಮಾಡಲು ಒಳ್ಳೆಯ ಸಮಯ ಬರಲಿ ಎಂದು ಗಡಿಯಾರ ನೀಡಿದ್ದೇವೆ ಎಂದರು.
ಗಡಿಯಾರ ಸ್ವೀಕರಿಸಿ ಮಾತನಾಡಿದ ಕೆ.ಎಸ್. ನಾಗೇಶ್, ಇಂತಹ ವಿಶಾಲ ಹೃದಯದ ದಾನಿಗಳಿಂದ ಸೇವೆ ಮಾಡುವ ಸ್ಫೂರ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.
ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಚಿತ್ರ ರಮೇಶ್, ಪದಾಧಿಕಾರಿಗಳಾದ ಎಸ್.ಕೆ. ಸತೀಶ್, ಪಿ.ಎಂ. ಮೋಹನ್, ವಿಮಲ್ ಜೈನ್, ಪೈಯಾಜ್ ಅಹಮದ್ ಮತ್ತಿತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net