ಅವಂದೂರಿನಲ್ಲಿ ಸ್ವಚ್ಛತಾ ಕಾರ್ಯ

ಅವಂದೂರು ಗ್ರಾಮಸ್ಥರು ಸಾರ್ವಜನಿಕ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಅವಂದೂರು ಗ್ರಾಮಸ್ಥರು ಸಾರ್ವಜನಿಕ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
Published on
ನಾಪೋಕ್ಲು: ಅವಂದೂರು ಗ್ರಾಮಸ್ಥರು ಇತ್ತೀಚೆಗೆ ಸಾರ್ವಜನಿಕ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಸಾಮಾಜಿಕ ಹಾಗೂ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವಂದೂರು ಗ್ರಾಮಸ್ಥರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್, ಶಾಲಾ ವಾಹನ ಮತ್ತು ಖಾಸಗಿ ವಾಹನಗಳು ನಿರಂತರವಾಗಿ ಓಡಾಡುವ ರಸ್ತೆಯಲ್ಲಿ ಕಸ, ಪ್ಲಾಸ್ಟಿಕ್ ಹಾಗೂ ರಸ್ತೆಗೆ ಬಾಗಿದ ಮರದ ಕೊಂಬೆಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮದ ದೇವಾಯಿರ ದೇವಯ್ಯ, ದೇವಾಯಿರ ದಾಮೋದರ, ದೇವಾಯಿರ ಶಿವಪ್ರಕಾಶ್, ಪಟ್ಟಡ ಸುಗುಣ ಕುಮಾರ್, ಪಟ್ಟಡ ದೀಪಕ್, ಕಾಳೇರಮ್ಮನ ಪೂವಯ್ಯ, ಕಾವೇರಮ್ಮನ ಅಯ್ಯಣ್ಣ, ಹೊಸೂರು ಗಿರೀಶ್, ಊರೊಳನ ತೇಜಕುಮಾರ್, ಪೂನ್ನಚ್ಚನ ಚಂಗಪ್ಪ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net