ಅಂಬಟ್ಟಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ

ಅಂಬಟ್ಟಿಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯದಲ್ಲಿ ಎನ್.ಸಿ.ವಿಜಯ ಕುಮಾರ್, ಆಟ್ರಂಗಡ ವಿಶ್ವನಾಥ್, ಪ್ರಮೋದ್, ಹೇಮಾ , ಅಮೃತ್, ಚೇನಂಡ ಸುರೇಶ್, ಗಣೇಶ್, ಮಂಜುನಾತ್, ಹರಿಣಿ, ಶರಿ, ಬಿಬಿನ್ ಇದ್ದರು.
ಅಂಬಟ್ಟಿಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯದಲ್ಲಿ ಎನ್.ಸಿ.ವಿಜಯ ಕುಮಾರ್, ಆಟ್ರಂಗಡ ವಿಶ್ವನಾಥ್, ಪ್ರಮೋದ್, ಹೇಮಾ , ಅಮೃತ್, ಚೇನಂಡ ಸುರೇಶ್, ಗಣೇಶ್, ಮಂಜುನಾತ್, ಹರಿಣಿ, ಶರಿ, ಬಿಬಿನ್ ಇದ್ದರು.
Published on
ವಿರಾಜಪೇಟೆ: ವಿರಾಜಪೇಟೆ ಸಮೀಪದ ಬಾಳುಗೋಡು ಅಂಬಟ್ಟಿ ಗ್ರಾಮದ ವಿಜಯ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಅಂಬಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಸಮಿತಿಯ ಮನವಿ ಮೇರೆಗೆ ಬಿಟ್ಟಂಗಾಲ ಗ್ರಾಮ ಪಂಚಾಯಹಿತಿ ಸಿಬ್ಬಂದಿ ನೆರವು ನೀಡಿದರು. ಸಮಿತಿ ಸದಸ್ಯರು ಕಾವೇರಿ ಕಾಲೇಜು ಅನತಿ ದೂರದ ತಿರುವು ಭಾಗದಿಂದ ಚೇನಂಡ ಗಣಪತಿ ಅವರ ಮನೆಯವರೆಗೆ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್, ನಿರುಪಯುಕ್ತ ವಸ್ತುಗಳನ್ನು ತೆರವು ಮಾಡಿದರು.
ಸಮಿತಿ ಅಧ್ಯಕ್ಷ ಎನ್.ಸಿ.ವಿಜಯ ಕುಮಾರ್, ಉಪಾಧ್ಯಕ್ಷ ಆಟ್ರಂಗಡ ವಿಶ್ವನಾಥ್, ಕಾರ್ಯದರ್ಶಿ ಪ್ರಮೋದ್, ಹೇಮಾ, ವಕೀಲರಾದ ಅಮೃತ್, ಚೇನಂಡ ಸುರೇಶ್, ಗಣೇಶ್, ಮಂಜುನಾಥ್ ಹರಿಣಿ, ಶರಿ, ಬಿಬಿನ್, ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net