ರಸ್ತೆ ಬದಿಗಳಲ್ಲಿ ಹರಡಿದ್ದ ಪ್ಲಾಸ್ಟಿಕ್, ಕಾಗದ ಹಾಗೂ ಇತರ ಕಸಗಳನ್ನು ಶ್ರಮದಾನದ ಮೂಲಕ ತೆಗೆದರು. ಈ ಸಂದರ್ಭ ಮಾತನಾಡಿದ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ, ಕೊಡಗಿನ ಪ್ರಕೃತಿ ಸೌಂದರ್ಯ, ಪರಿಸರ ಉಳಿಸಿಕೊಳ್ಳುವುದು ಪ್ರತಿ ನಾಗರಿಕನ ಕರ್ತವ್ಯ ಎಂದರು. ಯುವ ಸಮುದಾಯವು ಸ್ವಯಂ ಪ್ರೇರಿತವಾಗಿ ಪರಿಸರ ರಕ್ಷಣೆಯ ಹೊಣೆ ಹೊತ್ತರೆ ನಮ್ಮ ಕೊಡಗು ನಿಜವಾದ ಅರ್ಥದಲ್ಲಿ ಸ್ವಚ್ಛ ಕೊಡಗು ಆಗಲಿದೆ ಎಂದರು.