ಜಿ.ಎಸ್.ಶಿವರುದ್ರಪ್ಪರನ್ನು ಸ್ಮರಿಸಿದ ಚಿಣ್ಣರು

ಹೆಬ್ಬಾಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕವಿ ಜಿ.ಎಸ್.ಶಿವರುದ್ರಪ್ಪ ಅವರ ನೆನಪುಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.  ಪ್ರದೀಪ್, ಮಣಜೂರು ಮೂರ್ತಿ, ಶಿವಾನಂದ, ಸುಬ್ರಮಣಿ, ವೆಂಕಟನಾಯಕ್ ಇತರರು ಇದ್ದರು.
ಹೆಬ್ಬಾಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕವಿ ಜಿ.ಎಸ್.ಶಿವರುದ್ರಪ್ಪ ಅವರ ನೆನಪುಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರದೀಪ್, ಮಣಜೂರು ಮೂರ್ತಿ, ಶಿವಾನಂದ, ಸುಬ್ರಮಣಿ, ವೆಂಕಟನಾಯಕ್ ಇತರರು ಇದ್ದರು.
Published on
ಕುಶಾಲನಗರ: ಕುಶಾಲನಗರ ತಾಲೂಕು ಹೆಬ್ಬಾಲೆ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕವಿ ಜಿ.ಎಸ್.ಶಿವರುದ್ರಪ್ಪ ಅವರ ನೆನಪು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರದೀಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೆಬ್ಬಾಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಣಜೂರು ಮೂರ್ತಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶಿವರುದ್ರಪ್ಪ ಅವರ ಬಾಲ್ಯ, ಯೌವನ ಹಾಗೂ ವಿದ್ಯಾಭ್ಯಾಸದ ಬಗ್ಗೆ ಜಿಪಿಟಿ ಸಹ ಶಿಕ್ಷಕ ಶಿವಾನಂದ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಹೆಬ್ಬಾಲೆ ಘಟಕದ ಪದಾಧಿಕಾರಿ ಸುಬ್ರಮಣಿ, ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಉಪನ್ಯಾಸಕ ವೆಂಕಟನಾಯಕ್, ನಿವೃತ್ತ ಶಿಕ್ಷಕಿ ಸಿ.ಎಸ್.ಜಾನಕಿ, ಶಾಲಾ ಮುಖ್ಯಶಿಕ್ಷಕರಾದ ಎಚ್.ಎಂ ವೆಂಕಟೇಶ್, ಶಿಕ್ಷಕಿ ಸಿ.ಎಸ್.ಬಬಿತಾ, ರಮ್ಯಾ, ದೈಹಿಕ ಶಿಕ್ಷಣ ಶಿಕ್ಷಕಿ ವಂಜಮ್ಮ ಇದ್ದರು. ಇದೇ ವೇಳೆ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net