ದುಂಡಳ್ಳಿ ಗ್ರಾಪಂನಲ್ಲಿ ಮಕ್ಕಳ ಗ್ರಾಮಸಭೆ

ದುಂಡಳ್ಳಿ ಗ್ರಾಪಂ ನಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಮುಬಾಷಿರಾ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಭವಾನಿ ಗುರು, ಪಿಡಿಒ ಆಯಿಷಾ ಬಾನು, ವನಿತಾ ಇತರರು ಇದ್ದರು.
ದುಂಡಳ್ಳಿ ಗ್ರಾಪಂ ನಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಮುಬಾಷಿರಾ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಭವಾನಿ ಗುರು, ಪಿಡಿಒ ಆಯಿಷಾ ಬಾನು, ವನಿತಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Children's Gram Sabha
ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಪಂನ ಸಂಜೀವಿನಿ ಸಭಾಂಗಣದಲ್ಲಿ ಸಿಎಂಸಿಎ ಸಂಸ್ಥೆ ಮತ್ತು ಕೊಡಗು ನಾವು ಪ್ರತಿಷ್ಠಾನದ ವತಿಯಿಂದ ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು. ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿ ಮುಬಾಷಿರಾ ಮತ್ತು ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಭವಾನಿ ಗುರು ಜಂಟಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ಬೈಕ್‌ನಲ್ಲಿ ಬರುವ ಪುಂಡರ ಅಸಭ್ಯ ವರ್ತನೆ, ಖಾಸಗಿ ಶಾಲಾ ವಾಹನಗಳ ವೇಗದ ಸಂಚಾರ, ಬೀದಿ ನಾಯಿಗಳ ಹಾವಳಿ, ಶಾಲೆಯಲ್ಲಿ ಶೌಚಗೃಹಗಳ ಕೊರತೆ, ಕಂಪ್ಯೂಟರ್ ಅಳವಡಿಕೆ, ಶಾಲಾ ಕೊಠಡಿಗಳ ದುರಸ್ತಿ, ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ ಸೇರಿ ಹಲವು ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಸಭೆಯ ಗಮನ ಸೆಳೆದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಭವಾನಿ ಗುರು ಮತ್ತು ಪಿಡಿಒ ಆಯಿಷಾ ಬಾನು ಮಾತನಾಡಿದರು. ನಾವು ಪ್ರತಿಷ್ಠಾನಾ ಸಂಸ್ಥೆಯ ವನಿತಾ, ಗ್ರಾಪಂ ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಗಿರೀಶ್, ಬೋಜಪ್ಪ, ನಂದಿನಿ, ಪೊಲೀಸ್ ಸಿಬ್ಬಂದಿ ವಿನಯ್, ಗ್ರಾಪಂ ಸಿಬ್ಬಂದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net