ಸುಂಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಮಕ್ಕಳಸಂತೆ

ಸುಂಟಿಕೊಪ್ಪ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳ ಸಂತೆ ನಡೆಯಿತು.
ಸುಂಟಿಕೊಪ್ಪ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳ ಸಂತೆ ನಡೆಯಿತು.
Published on
ಸುಂಟಿಕೊಪ್ಪ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳ ಸಂತೆ ನಡೆಯಿತು.
ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಪಾಲಕರ ಮತ್ತು ಶಿಕ್ಷಕರ ಮಹಾಸಭೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಪಾಲಕರು ಮಕ್ಕಳ ಭವಿಷ್ಯದ ದಿಸೆಯಲ್ಲಿ ವಿದ್ಯಾರ್ಜನೆಗೆ ಪರಿಶ್ರಮ ವಹಿಸಿದರೆ ಸಾಲದು, ಅವರಿಸಗೆ ಉತ್ತಮ ಕಲಿಕಾ ವಾತಾವರಣವನ್ನು ಒದಗಿಸಿಕೊಡಬೆಕು. ಆಗ ಮಕ್ಕಳ ಭವಿಷ್ಯ ಉತ್ತಮವಾಗಿರುತ್ತದೆ ಎಂದರು.
ನಿತ್ಯ ಪಾಠ ಪ್ರವಚನದ ಶಬ್ದ ಕೇಳಿ ಬರುತ್ತಿದ್ದ ಶಾಲೆಯಲ್ಲಿ ಸಂತೆಯ ಗಿಜಿಗುಡವ ಸದ್ದು ಕೇಳಿಬರುತ್ತಿತ್ತು. ಮಕ್ಕಳ ವ್ಯವಹಾರಿಕ ಜ್ಞಾನವನ್ನು ವೃದ್ಧಿಸುವ ದಿಸೆಯಲ್ಲಿ ಮಕ್ಕಳ ಸಂತೆ ಆಯೋಜಿಸಲಾಗಿತ್ತು. ಮಕ್ಕಳು ಮನೆ ಹಾಗೂ ತೋಟಗಳಲ್ಲಿ ಬೆಳೆದು ನಿಂತಿದ್ದ ಸೊಪ್ಪು, ಕಾಯಿ, ತರಕಾರಿಗಳನ್ನು ಮಾರಾಟ ಮಾಡಿದರು. ಇನ್ನೂ ಕೆಲವರು ಪಾನಿಪೂರಿ, ಚುರುಮುರಿ ಇನ್ನಿತರ ಖ್ಯಾದ್ಯವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿದರು. ಮಕ್ಕಳು ಗ್ರಾಹಕರನ್ನು ತಮ್ಮಡೆಗೆ ಸೆಳೆಯುತ್ತ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಸಾಥ್ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಿಲ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕರಾದ ಚಿತ್ರಾ ಲಿಯೋನಾ, ಸುನಂದಾ, ಪ್ರಕಾಶ, ಶಾಂತಾ ಹೆಗ್ಡೆ, ಜಯಶ್ರೀ, ಪ್ರಥಮದರ್ಜೆ ಸಹಾಯಕಿ ಯಶೋದಾ ಮತ್ತು ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net