ಛದ್ಮವೇಷದಲ್ಲಿ ಗಮನ ಸೆಳೆದ ಚಿಣ್ಣರು

ಕೋರಂಗಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛದ್ಮವೇಷದಲ್ಲಿ ಗಮನ ಸೆಳೆದ ಪುಟಾಣಿಗಳು.
ಕೋರಂಗಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛದ್ಮವೇಷದಲ್ಲಿ ಗಮನ ಸೆಳೆದ ಪುಟಾಣಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಕೋರಂಗಲದ ಜ್ಞಾನೋದಯ ಶಾಲೆಯಲ್ಲಿ ಮಕ್ಕಳ ಸಂತೆ
ನಾಪೋಕ್ಲು: ಸಮೀಪದ ಕೋರಂಗಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂತೆ ಹಾಗೂ ಪುಟಾಣಿಗಳ ಛದ್ಮವೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಕ್ಕಳ ಸಂತೆಯಲ್ಲಿ ವಿವಿಧ ರೀತಿಯ ತರಕಾರಿಗಳು, ತಿಂಡಿ-ತಿನಿಸುಗಳ ಮಳಿಗೆಗಳು, ವಿವಿಧ ಬಗೆಯ ಹೂವಿನ ಗಿಡಗಳು ಹಾಗೂ ಅಲಂಕಾರಿಕ ಗಿಡಗಳ ಕುಂಡಗಳು ಮಾರಾಟ ಮಾಡಲಾಯಿತು. ಛದ್ಮವೇಷ ಸ್ಪರ್ಧೆಯಲ್ಲಿ ಪುಟಾಣಿಗಳು ಉತ್ಸಾಹದಿಂದ ಭಾಗವಹಿಸಿ ಮನಮೋಹಕ ವೇಷಭೂಷಣಗಳಿಂದ ಎಲ್ಲರ ಗಮನ ಸೆಳೆದರು.

ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಚೀಯಕ ಪೂವಂಡ ಮಿಥುನ್ ಚಂಗಪ್ಪ ಹಾಗೂ ಟ್ರಸ್ಟಿಗಳಾದ ಚೀಯಕಪೂವಂಡ ಸಚಿನ್ ಪೂವಯ್ಯ ಮುಖ್ಯ ಶಿಕ್ಷಕರಾದ ಶ್ವೇತನ್ ಚೆಂಗಪ್ಪ, ಶಿಕ್ಷಕಿ ಶ್ರುತಿ, ಚಿತ್ರಾ ಇದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net