ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಜಿ ಸಚಿವ ಬಿ.ಎ. ಜೀವಿಜಯ ಉದ್ಘಾಟಿಸಿದರು. ಜಲಜಾಶೇಖರ್, ಕೇಶವ ಕಾಮತ್, ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್, ಡಾ. ಜಯಪ್ಪ ಹೊನ್ನಾಳಿ ಮತ್ತಿತರರು ಇದ್ದರು.
ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸುವ ಮೂಲಕ ಅವರ ಕಲ್ಪನಾಶಕ್ತಿ ಗರಿಗೆದರುವಂತೆ ಮಾಡಿ ಸಣ್ಣ ಸಂತೋಷವನ್ನೂ ಆನಂದಿಸುವ ಗುಣ ಬೆಳೆಸುವುದು ಇಂದಿನ ಅಗತ್ಯ ಸೋಮವಾರ ಎಂದುಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಜಲಜಾಶೇಖರ್ ಹೇಳಿದರು. ಐಗೂರಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಳವಾಯಿ ಹನುಮರಾಜೇ ಅರಸ್ ಸಭಾಂಗಣದಲ್ಲಿ ಸೋಮವಾರ ನಡೆದ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ನಡೆದಿದೆ.
ಸಂತೋಷದ ಕ್ಷಣಗಳನ್ನು ಅನುಭವಿಸುವ ಗುಣವನ್ನು ಡಿಜಿಟಲ್ ಲೋಕದ ಸ್ಕಿçÃನ್ ಸಮಯ ನಮ್ಮ ಮಕ್ಕಳಿಂದ ಕಸಿಯುತ್ತಿದೆ. ಮಕ್ಕಳಲ್ಲಿ ಹಿಂಸೆ, ಪ್ರತಿರೋಧ, ದ್ವೇಷದ ಗುಣಗಳ ಜೊತೆಗೆ ಎಲ್ಲರನ್ನೂ ಪ್ರತಿಸ್ಪರ್ಧಿಯಂತೆ ಭಾವಿಸುವ ಗುಣಗಳು ಹೆಚ್ಚಾಗುತ್ತಿದೆ. ಅವರಲ್ಲಿ ರಾಕ್ಷಸ ಪ್ರವೃತ್ತಿ ಬೆಳೆಸುವಲ್ಲಿ ಆನ್‌ಲೈನ್ ಗೇಮ್, ಅಪಹಾಸ್ಯದ ಮೀಮ್‌ಗಳು ತುಂಬಾ ಪರಿಣಾಮ ಬೀರುತ್ತವೆ. ಪುಸ್ತಕಗಳೊಂದಿಗೆ ಬೆಳೆಯುವ ಮಕ್ಕಳಲ್ಲಿ ಎಲ್ಲರನ್ನು ಆನಂದಿಸುವ ಗುಣ ತಾನಾಗಿಯೇ ಒಡಮೂಡುತ್ತದೆ. ಸಮಾಜಮುಖಿಯಾಗಿ ಬೆಳೆಯುತ್ತಾರೆ. ವಿಸ್ತಾರವಾದ ಓದು ಆತ್ಮವಿಶ್ವಾಸವನ್ನು, ಬಾಂಧವ್ಯಗಳಲ್ಲಿ ಔದಾರ್ಯವನ್ನು ಮೂಡಿಸುತ್ತದೆ. ಮಕ್ಕಳು ಧಾರಾಳಿಯಾಗಿ ಬೆಳೆಯುತ್ತಾರೆ. ಮಕ್ಕಳನ್ನು ನೋಡಲು ಪುಸ್ತಕ ಪ್ರೀತಿಯ ಬೀಜ ಬಿತ್ತಬೇಕಿದೆ.
ಭವಿಷ್ಯದ ತಲೆಮಾರುಗಳನ್ನು ಉಳಿಸಲು ಕಂಪ್ಯೂಟರ್ ಮತ್ತು ಮೊಬೈಲ್‌ಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕಾಗಿದೆ. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಆದ್ದರಿಂದ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಕಲಿಕೆಗೆ ಒತ್ತು ನೀಡಬೇಕಾಗಿದೆ. ನೆಲ, ಜಲ, ಭಾಷೆ, ಸಾಹಿತ್ಯಕ್ಕೆ ಧರ್ಮದ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಮನೆಗಳಲ್ಲಿ ಮಕ್ಕಳಿಗೆ ಕಲಿಸುವ ಭಾಷಾ ಜ್ಞಾನ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಎಲ್ಲಾ ಭಾಷೆಗಳನ್ನು ಕಲಿಯೋಣ. ಆದರೆ ಕನ್ನಡಕ್ಕೆ ಆದ್ಯತೆ ಕೊಡೋಣ ಎಂದರು.
ಸಮ್ಮೇಳನದ ಸ್ಮರಣ ಸಂಚಿಕೆ ಐಗೂರಿನ ಐಸಿರಿಯ ಮುಖಪುಟ ಬಿಡುಗಡೆ ಮಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ನಮಗೆ ಭವಿಷ್ಯ ಮುಖ್ಯ. ಆದರೆ ಇತಿಹಾಸ ಮರೆಯಬಾರದು. ಸಮ್ಮೇಳನಗಳ ಮೂಲಕ ಯುವ ಪೀಳಿಗೆಗೆ ಇತಿಹಾಸ ನೆನಪಿಸುವ ಕಾರ್ಯಕ್ರಮ ಆಗುತ್ತದೆ. ಕನ್ನಡ ಭಾಷೆ ನಮ್ಮ ಐಕ್ಯತೆಗೆ ಬಲ. ಯಾವುದೇ ಕನ್ನಡ ಮರೆಯಬಾರದು. ಬೇರೆ ಬೇರೆ ಭಾಷೆಗಳಿಗೆ ಕನ್ನಡ ಬಹಳ ಮುಂದಿದೆ. ಕನ್ನಡದ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ಸಮ್ಮೇಳನದಲ್ಲಿ ಅಂಗೀಕರಿಸುವ ನಿರ್ಣಯಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರ್ಮಿಕರಿಗೆ ವಸತಿ ಒದಗಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ 19, 12 ಹಾಗೂ 15 ಶತಮಾನಗಳಲ್ಲಿ ಸಾಹಿತ್ಯದಲ್ಲಿ ಮೂರು ಪ್ರಬಲ ಪರಿವರ್ತನೆಗಳು ಆದವು. ರನ್ನ, ಪೊನ್ನ, ಲಕ್ಷ್ಮೀಶನ ಕೃತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಬಸವಣ್ಣನ ವಚನಗಳು ಕನ್ನಡಿಗರನ್ನು ಜಾಗೃತಗೊಳಿಸಿತು. ಜ್ಞಾನಕ್ಕೆ ಸಾವಿದೆ. ಜ್ಞಾನಕ್ಕೆ ಸಾವಿಲ್ಲ ಎನ್ನುವುದನ್ನು ಅರಿತುಕೊಂಡು ಜ್ಞಾನಾರ್ಜನೆಗೆ ಒತ್ತುಕೊಡಬೇಕು ಎಂದರು.
ಸೋಮವಾರಪೇಟೆ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಶ.ಗ. ನಯನತಾರ ಮಾತನಾಡಿ ಹಳ್ಳಿಗಳಲ್ಲಿ ನಡೆಯುವ ಕನ್ನಡ ಪರ ಕಾರ್ಯಕ್ರಮಗಳು ಕನ್ನಡದ ಬೆಳವಣಿಗೆಗೆ ಪೂರಕ. ಕೃಷಿ ಪ್ರಧಾನ ತಾಲೂಕಾದ ಸೋಮವಾರಪೇಟೆಯಲ್ಲಿ ಸಾಹಿತ್ಯ ಕೃಷಿಯು ಉತ್ತಮವಾಗಿದೆ. ಕೊಡಗಿನ ಸಾಹಿತ್ಯ ಕ್ಷೇತ್ರದಲ್ಲೂ ಉತ್ತಮ ಕೃತಿಗಳು ಬರುತ್ತಿವೆ. ಜತೆಯಲ್ಲಿ ಸಾಗುವ ಅವಕಾಶವನ್ನು ಪುರುಷ ಸಾಹಿತಿಗಳಿಗೆ ಮಾಡಿಕೊಡುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸುವ ಬಹುದೊಡ್ಡ ಹಬ್ಬ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಹಸ್ತಾಂತರ ಮಾಡುವ ಉದ್ದೇಶದಿಂದ ಸಮ್ಮೇಳನ ನಡೆಯಲಿದೆ. ಕನ್ನಡ ಶಾಲೆಗಳ ಮೂಲ ಸೌಕರ್ಯ, ಗಡಿ ಸಮಸ್ಯೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ಸೇರಿದಂತೆ ಪ್ರಸ್ತುತ ವಿಷಯಗಳ ಬಗ್ಗೆ ಗಮನ ಸೆಳೆಯುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ಹೇಳಿದರು.
ಕಸಾಪ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್, ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜ್
ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಐಗೂರು ಕಸಾಪ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಪಿ. ಚಂದ್ರಕಲಾ
ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಸೋಮವಾರಪೇಟೆ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಸಹಕರಿಸಿದ್ದಾರೆ.