ನಂತರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ ಮಾತನಾಡಿ, ಶಾಲಾ ಮಕ್ಕಳು ಮುಖ್ಯವಾಗಿ ಬಾಲ್ಯವಿವಾಹ ನಿಷೇಧದ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿದ್ದು, ಪ್ರಸ್ತುತ ಹುಡುಗನಿಗೆ 21 ವರ್ಷ, ಹುಡುಗಿಗೆ 18 ವರ್ಷಕ್ಕಿಂತ ಮುಂಚೆ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಮಕ್ಕಳನ್ನು ಮದುವೆಯಾಗುವ ವಯಸ್ಕರು, ಬಾಲ್ಯವಿವಾಹ ನಡೆಸುವವರು, ನಿರ್ದೇಶಿಸುವವರು, ಪ್ರೇರೆಪಿಸುವವರು ಬಾಲ್ಯವಿವಾಹದಲ್ಲಿ ಹಾಜರಿದ್ದವರು ಇವರೆಲ್ಲರೂ ತಪ್ಪಿತಸ್ಥರಾಗುತ್ತಾರೆ. ಸರ್ವೋಚ್ಚ ನ್ಯಾಯಾಲಯದ 2017ರ ಆದೇಶದ ಪ್ರಕಾರ 18 ವರ್ಷದೊಳಗಿನ ಪತ್ನಿಯ ಜೊತೆಗಿನ ಲೈಂಗಿಕ ಸಂಪರ್ಕವೂ ಕೂಡ ಅತ್ಯಾಚಾರವಾಗುತ್ತದೆ. ಇದಕ್ಕಾಗಿ ಪತಿಗೆ ಜೈಲು ಮತ್ತು ದಂಡದ ಶಿಕ್ಷೆಯಾಗುತ್ತದೆ. ಮಕ್ಕಳು ಸಣ್ಣ ವಯಸ್ಸಿನಲ್ಲಿ ಬಾಲ್ಯವಿವಾಹವಾದರೆ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢÀರಾಗಿರುವುದಿಲ್ಲ, ಮಕ್ಕಳು ಇಂತಹ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಬೇಕಾಗುತ್ತದೆ. ಮಕ್ಕಳಿಗೆ ಅಶ್ಲೀಲ ವಿಡಿಯೋ, ಸ್ಪರ್ಶ, ಮಾತು ಇಂತಹ ಸಂದರ್ಭಗಳು ಎದುರಾದರೆ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡುವುದು. ಇಲ್ಲವಾದಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸುವುದು. ಈ ಎಲ್ಲಾ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.