ಪುಟಾಣಿ ನಗರದಲ್ಲಿ ಬಾಲ ವಿಕಾಸಸಭೆ

ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಹಾಗೂ ಬಾಲ ವಿಕಾಸಸಭೆಯಲ್ಲಿ ಸವಿತಾ ಕೀರ್ತನ್ ಮಾತನಾಡಿದರು. ಶೀಲಾ, ಪೊನ್ನಮ್ಮ, ರಮೇಶ್ ಇತರರಿದ್ದರು.
ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಹಾಗೂ ಬಾಲ ವಿಕಾಸಸಭೆಯಲ್ಲಿ ಸವಿತಾ ಕೀರ್ತನ್ ಮಾತನಾಡಿದರು. ಶೀಲಾ, ಪೊನ್ನಮ್ಮ, ರಮೇಶ್ ಇತರರಿದ್ದರು.
Published on

ಮಡಿಕೇರಿ:

ಸ್ತನ್ಯಪಾನ ಸಪ್ತಾಹದ ಅಂಗವಾಗಿ ಪುಟಾಣಿ ನಗರದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಬಾಲ ವಿಕಾಸ ಸಮಿತಿಯಿಂದ ಅರಿವು ಕಾರ್ಯಕ್ರಮ ಹಾಗೂ ಬಾಲ ವಿಕಾಸಸಭೆ ಆಯೋಜಿಸಲಾಗಿತ್ತು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಬಾಲ ವಿಕಾಸ ಸಮಿತಿ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಅಂಗನವಾಡಿ ಕೇಂದ್ರಗಳು ನಿಯಮಾನುಸಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದರ ಜತೆಗೆ ಸಮುದಾಯದ ಸಹಕಾರ ಪಡೆದು ಮಾದರಿ ಅಂಗನವಾಡಿ ಕೇಂದ್ರಗಳನ್ನಾಗಿ ರೂಪಿಸುವಲ್ಲಿ ಬಾಲ ವಿಕಾಸ ಸಮಿತಿ ಸದಸ್ಯರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಳಿಕ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಎದೆಹಾಲಿನ ಮಹತ್ವ, ಪೌಷ್ಟಿಕ ಆಹಾರ, ಸ್ವಚ್ಛತೆ ಹಾಗೂ ಸರಿಯಾದ ರೀತಿಯಲ್ಲಿ ಕೈ ತೊಳೆಯುವ ವಿಧಾನಗಳ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ, ನಿವೃತ್ತ ಶಿಕ್ಷಕಿ ಪೊನ್ನಮ್ಮ, ಬಾಲ ವಿಕಾಸ ಸಮಿತಿ ಸದಸ್ಯರಾದ ರಮೇಶ್, ಚಾರ್ಲಿ, ಬಡೇಸಾಬ್, ಲತಾ, ಅಂಗನವಾಡಿ ಕಾರ್ಯಕರ್ತೆ ಉಮಾ, ಸಹಾಯಕಿ ದೈವಾಣಿ ಹಾಗೂ ಫಲಾನುಭವಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net