ಸಿದ್ದಾಪುರ ಸಮೀಪದ ಹೇರೂರು ಕಾಫಿ ತೋಟದ ಸುತ್ತಮುತ್ತ ಭಾನುವಾರ ಚಿರತೆ ಸಂಚಾರ ಮಾಡಿದ್ದು, ತೋಟದ ಕಾರ್ಮಿಕರು ಹಾಗೂ ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.
ಭಾನುವಾರ ರಾತ್ರಿ ತೋಟದ ಲೈನ್‌ಮನೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಮನೆಯ ಹೊರಭಾಗದಲ್ಲಿದ್ದ ನಾಯಿಯನ್ನು ಹಿಡಿಯಲು ಯತ್ನಿಸಿದೆ. ನಾಯಿ ಕೂಗುವ ಶಬ್ದ ಕೇಳಿದ ಕಾರ್ಮಿಕರು ಟಾರ್ಚ್ ಬೆಳಕು ಬಿಟ್ಟಾಗ ಚಿರತೆ ಅಲ್ಲಿಂದ ಓಡಿಹೋಗಿದೆ. ಸೋಮವಾರ ಬೆಳಗ್ಗೆ ಚಿರತೆ ಹೆಜ್ಜೆಗುರುತುಗಳು ಪತ್ತೆಯಾಗಿದೆ.
ಇತ್ತೀಚೆಗಷ್ಟೇ ಮಾಲ್ದಾರೆ ಗ್ರಾಮದ ಕಾಫಿ ತೋಟದಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದಿತ್ತು.
ಇದೀಗ ಸಿದ್ದಾಪುರ, ಕರಡಿಗೋಡು ಸೇರಿದಂತೆ ಸುತ್ತಮುತ್ತಲಿನ ಎಸ್ಟೇಟ್‌ಗಳಲ್ಲಿ ಚಿರತೆ ಓಡಾಟ ಹೆಚ್ಚಾಗಿದೆ.
ಸಾಕುಪ್ರಾಣಿಗಳ ಮೇಲೂ ದಾಳಿ ನಡೆಸುತ್ತಿದೆ ಎನ್ನಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ವಹಿಸಿ ಚಿರತೆ ಸೆರೆಗೆ ಬೋನು ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.