

9ನೇ ಬಾರಿ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಅವರು ದೇಶವೇ ಮೆಚ್ಚುವಂಥ ಬಜೆಟ್ ಕೊಟ್ಟಿದ್ದಾರೆ. ಯಾವುದೇ ವ್ಯಯಕ್ತಿಕ ಪ್ರಯೋಜನದ ಯೋಜನೆಗಳಿಗಿಂತ ಎಲ್ಲಾ ವರ್ಗ ಮತ್ತು ಸಮುದಾಯದ ಭವಿಷ್ಯ ರೂಪಿಸುವುದಕ್ಕೆ ಅನುಕೂಲ ಆಗುವ ರೀತಿಯಲ್ಲಿ ಈ ಬಜೆಟ್ ಇದೆ. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಕ್ಕೂ ಆದ್ಯತೆ ಕೊಡಲಾಗಿದೆ. ಬೆಂಗಳೂರು ಸೇರಿ 7 ಪ್ರಮುಖ ನಗರಗಳಿಗೆ ವೇಗದ ಸಂಪರ್ಕ ಕಲ್ಪಿಸುವ ವೇಗದ ರೈಲು ಸಂಪರ್ಕ ಯೋಜನೆಯೂ ಸ್ವಾಗತಾರ್ಹ. ತೆರಿಗೆ ಹೆಚ್ಚು ಮಾಡದಿರುವುದು ಕೂಡ ಉತ್ತಮ ಬೆಳವಣಿಗೆ. ರಕ್ಷಣಾ ಕ್ಷೇತ್ರಕ್ಕೂ ಆದ್ಯತೆ ಕೊಡಲಾಗಿದೆ.
ಇದು ವಿಕಸಿತ ಭಾರತಕ್ಕೆ ಪೂರಕವಾದ ಅಭಿವೃದ್ಧಿ ಆಧಾರಿತ ಬಜೆಟ್ ಆಗಿದೆ. ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಇದರಿಂದ ಸಹಕಾರಿ ಆಗುತ್ತದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಇದಾಗಿದ್ದು ಎಸ್‌ಸಿ-ಎಸ್‌ಟಿ ಸಮುದಾಯದ ಅಭಿವೃದ್ಧಿ ಸೇರಿದಂತೆ ಸಮಾಜ ಕಲ್ಯಾಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಎಐ ತಂತ್ರಜ್ಞಾನಕ್ಕೆ ಒತ್ತುಕೊಡಲು 40 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕೃಷಿ ವಲಯಕ್ಕೆ ಸಂಬAಧಿಸಿದAತೆ 1ಲಕ್ಷದ62 ಸಾವಿರ ಕೋಟಿ ರೂ. ಕೊಟ್ಟಿರುವುದರಿಂದ ಗೊಬ್ಬರ ಬೆಲೆ ಇಳಿಯಲಿದೆ. ವಿಮೆ ಮೇಲೆ ತೆರಿಗೆ ಕಡಿಮೆ ಮಾಡಿರುವುದು ಉತ್ತಮ ಬೆಳವಣಿಗೆ. ಹೈಸ್ಪೀಡ್ ರೈಲು ಯೋಜನೆಯಿಂದ ಹೆಚ್ಚಿನ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ಆರೋಗ್ಯ ಕ್ಷೇತ್ರಕ್ಕೂ ಒತ್ತುಕೊಡಲಾಗಿದೆ. ಉದ್ಯೋಗವಕಾಶ ಹೆಚ್ಚಳದ ನಿರೀಕ್ಷೆ ಇಟ್ಟುಕೊಳ್ಳಬಹುದು.
ಎನ್‌ಡಿಎ ಮೈತ್ರಿಕೂಟ ಇರುವ ರಾಜ್ಯಗಳ ಮತ್ತು ಮುಂದೆ ಚುನಾವಣೆ ಬರುವ ರಾಜ್ಯಗಳ ಪ್ರಣಾಳಿಕೆಯಂತೆ ಈ ಬಜೆಟ್ ಕಂಡು ಬರುತ್ತಿದೆ. ಬಜೆಟ್ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವುದನ್ನೇ ಕರ್ನಾಟಕ ಬಿಟ್ಟುಬಿಟ್ಟಿದೆ. ಆದರೂ 16ನೇ ಹಣಕಾಸು ಆಯೋಗ ನಮ್ಮ ಕೂಗು ಕೇಳುತ್ತದೆ, ಜಿಎಸ್‌ಟಿ ಹಂಚಿಕೆಯಲ್ಲಿ ಆದ ಅನ್ಯಾಯ ಸರಿಯಾಗುತ್ತದೆ, ಹಳೆಯ ಬಜೆಟ್‌ನಲ್ಲಿ ಘೋಷಣೆಗಳು ಕೊಡುತ್ತಾರೆ, ಪ್ರಾಕೃತಿಕ ವಿಕೋಪ ಪರಿಹಾರದ ತಾರತಮ್ಯ ನಿವಾರಣೆ ಆಗುತ್ತದೆ ಎನ್ನುವ ಆಸೆ ಇತ್ತು. ಅದೆಲ್ಲಾ ಈಗ ಭಗ್ನವಾಗಿದೆ. ದೇಶದ ಜನತೆಯ ನಿರೀಕ್ಷೆಯೂ ಹುಸಿಯಾಗಿದೆ. ಪರಿಸರ ಮಾಲಿನ್ಯ, ಅರಣ್ಯ ಸಂರಕ್ಷಣೆ, ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ಗಮನ ಹರಿಸಿಲ್ಲ. ದೇಶದ ಸಾಲದ ಪರಿಸ್ಥಿತಿಯೂ ಗಂಭೀರವಾಗಿದೆ. ಬಜೆಟ್‌ನಲ್ಲಿ ಭಾಷೆ ಬಳಕೆ ಮಾತ್ರ ಜನರ ಭಾವನೆಗೆ ಸ್ಪಂದಿಸುವ ರೀತಿಯಲ್ಲಿ ಇದೆ ಹೊರತುಪಡಿಸಿದರೆ ಬಜೆಟ್‌ನಿಂದ ಬೇರೇನೂ ಸಿಕ್ಕಿಲ್ಲ.
ಈ ಬಜೆಟ್ ದೇಶವನ್ನು ಸಂಪೂರ್ಣ ಸಾಲದಲ್ಲಿ ಮುಳುಗಿಸುವಂತೆ ಕಂಡು ಬರುತ್ತಿದೆ. ಇದೊಂದು ನಿರಾಸದಾಯಕ ಬಜೆಟ್ ಆಗಿದೆ. ಕರ್ನಾಟಕಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ವಂದೇ ಭಾರತ್ ರೈಲು ಘೋಷಿಸಿದ್ದರೂ ಬಡವರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲ. ಕೊಡಗಿನ ಜನರಿಗೆ ಪ್ರಯೋಜನ ಆಗುವ ಯೋಜನೆಗಳೂ ಇದ್ದಂತಿಲ್ಲ. ರಾಜ್ಯಗಳಿಗೆ ಕೊಡಬೇಕಾದ ಹಣ ಕೊಡದೇ ಸಾಲ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ದೇಶದಲ್ಲೂ ಸಾಲ ಮಾಡಲು ಹೊರಟಿದ್ದಾರೆ.