ಎಪಿಸಿಎಂಎಸ್ ಅಧ್ಯಕ್ಷರಾಗಿ ಚಂದ್ರಪ್ಪ ಆಯ್ಕೆ

ಗುರುವಾರ ನಡೆದ ಚುನಾವಣೆಯಲ್ಲಿ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಬಿ. ಚಂದ್ರಪ್ಪ ಆಯ್ಕೆ ಆದರು. ಚಂದ್ರಕಲಾ, ಬಿ.ಎಂ. ಪಾರ್ವತಿ, ಕೆ.ಎಸ್. ಮಂಜುನಾಥ್, ಎನ್.ಸಿ. ಪೊನ್ನಪ್ಪ, ಜಲಜಾ ಶೇಖರ್ ಕೆ.ಜಿ. ಜಗದೀಶ್ ಮತ್ತಿತರರು ಇದ್ದರು

Published on
ಕುಶಾಲನಗರ:
ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಬಿ. ಚಂದ್ರಪ್ಪ ಆಯ್ಕೆ ಆಗಿದ್ದಾರೆ. ಗುರುವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆ ಸಂದರ್ಭ ಒಟ್ಟು 12 ಮಂದಿ ನಿರ್ದೇಶಕರು ಹಾಜರಿದ್ದು ಹೆಚ್.ಬಿ. ಚಂದ್ರಪ್ಪ ಅವರಿಗೆ 7 ಮತಗಳು ಮತ್ತು ಇವರ ಪ್ರತಿಸ್ಪರ್ಧಿ ಕೆ.ಎಂ. ಪ್ರಸನ್ನ ಅವರಿಗೆ 5 ಮತಗಳು ಬಂದವು.
ಚುನಾವಣಾ ಅಧಿಕಾರಿಯಾಗಿ ಸೋಮವಾರಪೇಟೆ ತಾಲೂಕು ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಪಿ.ಬಿ. ಮೋಹನ್ ಕಾರ್ಯನಿರ್ವಹಿಸಿದರು.
ಹಿರಿಯ ಸಹಕಾರಿ ಎಂ.ಎನ್. ಕುಮಾರಪ್ಪ ನಿಧನದಿಂದಾಗಿ ತೆರವಾಗಿದ್ದ ಸಂಘದ ಅಧ್ಯಕ್ಷ ಸ್ಥಾನಕ್ಕೆ ಈ ಚುನಾವಣೆ ನಡೆಯಿತು.
ಸಂಘದ ಉಪಾಧ್ಯಕ್ಷೆ ಚಂದ್ರಕಲಾ, ನಿರ್ದೇಶಕರಾದ ಬಿ.ಎಂ. ಪಾರ್ವತಿ, ಕೆ.ಎಸ್. ಮಂಜುನಾಥ್, ಎನ್.ಸಿ. ಪೊನ್ನಪ್ಪ, ಹೆಚ್.ಜೆ. ಶರತ್, ಬಿ.ಸಿ. ಮಲ್ಲಿಕಾರ್ಜುನ, ಹೆಚ್.ಡಿ. ನಂದಕುಮಾರ್, ಡಿ.ಕೆ. ಗಂಗಾಧರ್, ಹೆಚ್.ಎನ್. ಮಹಾದೇವ ಹಾಗೂ ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಜಲಜಾ ಶೇಖರ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಜಗದೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net