ಶ್ರೀಪೊನ್ನು ಮುತ್ತಪ್ಪ ದೇವಾಲಯ ಸಮಿತಿಗೆ ಚಂದ್ರನ್ ಅಧ್ಯಕ್ಷ

ನಾಪೋಕ್ಲು ಶ್ರೀಪೊನ್ನು ಮುತ್ತಪ್ಪ ದೇವಾಲಯದ ಅಧಿಕಾರವನ್ನು ನೂತನ ಆಡಳಿತ ಮಂಡಳಿಗೆ ಹಳೆಯ ಆಡಳಿತ ಮಂಡಳಿ ಸದಸ್ಯರು ಹಸ್ತಾಂತರಿಸಿದರು.
ನಾಪೋಕ್ಲು ಶ್ರೀಪೊನ್ನು ಮುತ್ತಪ್ಪ ದೇವಾಲಯದ ಅಧಿಕಾರವನ್ನು ನೂತನ ಆಡಳಿತ ಮಂಡಳಿಗೆ ಹಳೆಯ ಆಡಳಿತ ಮಂಡಳಿ ಸದಸ್ಯರು ಹಸ್ತಾಂತರಿಸಿದರು.
Published on
ನಾಪೋಕ್ಲು: ಶ್ರೀಪೊನ್ನು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷರಾಗಿ ಎ.ಕೆ.ಚಂದ್ರನ್ ಆಯ್ಕೆಯಾಗಿದ್ದಾರೆ.
ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಭಕ್ತರು ಹಾಗೂ ಪ್ರಮುಖರ ಸಮ್ಮುಖದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ ಅನಿಲ್, ಉಪಾಧ್ಯಕ್ಷರಾಗಿ ಎಂ.ಕೆ.ತಂಗ, ಸಹ ಕಾರ್ಯದರ್ಶಿಯಾಗಿ ಟಿ.ಕೆ.ಸುಕುಮಾರ್ ಹಾಗೂ ಕೋಶಾಧಿಕಾರಿಯಾಗಿ ಮಹೇಶ್ ಮೆನೋನ್ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರಾಗಿ ಕೆ.ಕೆ ವಿಜಯ, ಕೆ.ಕೆ.ಅನಿಲ್, ಪಿ.ವಿ.ಅನಿಲ್, ಸುನಿಲ್, ಎಂ.ಪಿ ಹರಿದಾಸ್ , ಟಿ.ಕೆ.ರಘು, ಟಿ.ಆರ್.ಮೋನಿಶ್, ಎ.ವಿ.ಸತೀಶ್, ಟಿ.ಎಂ.ಸುನಿಲ್, ಎ.ಕೆ ಮಹೇಶ್, ಪಿ.ಕೆ ಸುನಿಲ್, ಎ.ಎಂ ಸಂದೇಶ್, ಎ.ಎಂ ಚೇತನ್, ಸತೀಶ್, ಪ್ರಕಾಶ್ ಪಟ್ಟಾಭಿ ಅವರು ನೇಮಕಗೊಂಡಿದ್ದಾರೆ. ಮುಂಬರುವ ವರ್ಷಗಳಲ್ಲಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ನೂತನ ತಂಡವು ಮುನ್ನಡೆಸಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net