ಚೈತನ್ಯ ಪಥ ಪ್ರೇರಣೆ ಮತ್ತು ಗುರಿ ನಿರ್ಧಾರ ಕಾರ್ಯಕ್ರಮ

ಬೆಂಗಳೂರು ಕೊಡಗು ಗೌಡ ಸಮಾಜ ಆಶ್ರಯದಲ್ಲಿ ಓಜಸ್ವಿ ಫೌಂಡೇಶನ್ ವತಿಯಿಂದ ಆಲೂರು ಸಿದ್ದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಚೈತನ್ಯ ಪಥ ಪ್ರೇರಣೆ ಮತ್ತು ಗುರಿ ನಿರ್ಧಾರ ಕಾರ್ಯಕ್ರಮ ನಡೆಯಿತು. ಅಯ್ಯೇಟಿರ ಮನೋಜ್, ಡಾ. ಪಿ.ಸಿ. ಕವಿತಾ, ಸಿ.ಎ. ಬ್ರಿಜೇಶ್ ಇದ್ದರು.
ಬೆಂಗಳೂರು ಕೊಡಗು ಗೌಡ ಸಮಾಜ ಆಶ್ರಯದಲ್ಲಿ ಓಜಸ್ವಿ ಫೌಂಡೇಶನ್ ವತಿಯಿಂದ ಆಲೂರು ಸಿದ್ದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಚೈತನ್ಯ ಪಥ ಪ್ರೇರಣೆ ಮತ್ತು ಗುರಿ ನಿರ್ಧಾರ ಕಾರ್ಯಕ್ರಮ ನಡೆಯಿತು. ಅಯ್ಯೇಟಿರ ಮನೋಜ್, ಡಾ. ಪಿ.ಸಿ. ಕವಿತಾ, ಸಿ.ಎ. ಬ್ರಿಜೇಶ್ ಇದ್ದರು.
Published on
ಶನಿವಾರಸಂತೆ:
ಬೆಂಗಳೂರು ಕೊಡಗು ಗೌಡ ಸಮಾಜ ಆಶ್ರಯದಲ್ಲಿ ಓಜಸ್ವಿ ಫೌಂಡೇಶನ್ ವತಿಯಿಂದ ಆಲೂರು ಸಿದ್ದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸೋಮವಾರ ಚೈತನ್ಯ ಪಥ ಪ್ರೇರಣೆ ಮತ್ತು ಗುರಿ ನಿರ್ಧಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಆಗಿರುವ ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಅಯ್ಯೇಟಿರ ಮನೋಜ್ ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ, ಶಿಸ್ತು ಮತ್ತು ನಿರಂತರ ಪರಿಶ್ರಮವನ್ನು ಅಳವಡಿಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂದರು.
ಓಜಸ್ವಿ ಫೌಂಡೇಶನ್ ಟ್ರಸ್ಟಿ ಡಾ. ಪಿ.ಸಿ. ಕವಿತಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಗುರಿ ನಿರ್ಧಾರ, ಸಮಯ ನಿರ್ವಹಣೆ, ಮನೋಬಲ, ಸಕಾರಾತ್ಮಕ ಚಿಂತನೆ ಹಾಗೂ ಶಿಸ್ತಿನ ಮಹತ್ವದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಗ್ರಾಮೀಣ ವಿದ್ಯಾರ್ಥಿಗಳ ಸಬಲೀಕರಣ, ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಓಜಸ್ವಿ ಫೌಂಡೇಶನ್ ಇಂತಹ ಪ್ರೇರಣಾತ್ಮಕ Áರ್ಯಕ್ರಮಗಳನ್ನು ಮುಂದೆಯೂ ನಿರಂತರವಾಗಿ ಹಮ್ಮಿಕೊಳ್ಳಲಿದೆ ಎಂದರು.
ಓಜಸ್ವಿ ಫೌಂಡೇಶನ್‌ನ ಟ್ರಸ್ಟಿ ಹಾಗೂ ಜಸ್ಟ್ ರೋಬೋಟಿಕ್ಸ್ನ ಸಿಇಒ ಸಿ.ಎ. ಬ್ರಿಜೇಶ್ ಫೌಂಡೇಶನ್ ಉದ್ದೇಶಗಳು ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಕೈಗೊಳ್ಳುತ್ತಿರುವ ಶೈಕ್ಷಣಿಕ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸಿದರು.
ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿವೆ. ಓಜಸ್ವಿ ಫೌಂಡೇಶನ್ ಹಾಗೂ ಕೊಡಗು ಗೌಡ ಸಮಾಜದ ಸಮಾಜಮುಖಿ ಕಾರ್ಯವನ್ನು ಶ್ಲಾಘಿನೀಯ ಎಂದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶೃತಿ ಮಾತನಾಡಿದರು.
ಜಂಟಿ ಕಾರ್ಯದರ್ಶಿ ಜಿ.ಎ. ಪ್ರವೀಣ್ ಕುಮಾರ್, ನಿರ್ದೇಶಕರಾದ ತೇಜಕುಮಾರ್ ಕಾಳೆಯಂಡ, ಉಡುದೋಳಿರ ಸೋಮಪ್ಪ , ತಾರ ಸೋಮಪ್ಪ, ಅಯ್ಯೇಟಿರ ಚಿತ್ರಾ ಮನೋಜ್ ಇದ್ದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಗುರಿ ನಿರ್ಧಾರ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟತೆ ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net