ಮನೆ ಗಣತಿ ಮತ್ತು ಮನೆಪಟ್ಟಿ ತಯಾರಿಕೆಯ ಸಮೀಕ್ಷಾ ಕಾರ್ಯವು ಗುರುವಾರ ದೇಶಾದ್ಯಂತ ಆರಂಭಗೊAಡಿದ್ದು, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸೋಮಶೇಖರ್ ಮಾರ್ಗದರ್ಶನದಲ್ಲಿ ಮನೆ ಗಣತಿ ಕಾರ್ಯ ಆರಂಭಗೊAಡಿತು. ಕುಶಾಲನಗರ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಗಣತಿದಾರರು ಮತ್ತು ಮೇಲ್ವಿಚಾರಕರು ಮನೆ ಮನೆಗಳಿಗೆ ತೆರಳಿ ಕುಟುಂಬಸ್ಥರಿAದ ಮನೆ ಮಾಹಿತಿ ಪಡೆದು ಮನೆಪಟ್ಟಿ ಕಾರ್ಯದಲ್ಲಿ ತೊಡಗಿದ್ದು ಕಂಡುಬAತು.