ಪೇರೂರಿನಲಿ ಸಂಭ್ರಮದ ಕೈಲ್ ಮುಹೂರ್ತ ಆಚರಣೆ

ನಾಪೋಕ್ಲು ಸಮೀಪದ ಪೇರೂರಿನಲ್ಲಿ ಆಯೋಜಿಸಿದ ಕೈಲ್ ಮುಹೂರ್ತ ಹಬ್ಬದಲ್ಲಿ ಆಯೋಜಿಸಿದ್ದ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯ ರೋಚಕ ಕ್ಷಣ.
ನಾಪೋಕ್ಲು ಸಮೀಪದ ಪೇರೂರಿನಲ್ಲಿ ಆಯೋಜಿಸಿದ ಕೈಲ್ ಮುಹೂರ್ತ ಹಬ್ಬದಲ್ಲಿ ಆಯೋಜಿಸಿದ್ದ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯ ರೋಚಕ ಕ್ಷಣ.
Published on
ನಾಪೋಕ್ಲು: ಇಲ್ಲಿಗೆ ಸಮೀಪದ ಪೇರೂರಿನಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ವಿವಿಧ ಆಟೋಟಗಳೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಊರಿನ ಎಲ್ಲ ಮನೆಗಳಲ್ಲೂ ಕೋವಿ ಕತ್ತಿ, ಒಡಿ ಕತ್ತಿ, ಈಟಿ ಮುಂತಾದ ಸಲಕರಣೆಗಳನ್ನು ಪೂಜಿಸಿ, ಗುರು ಕಾರಣಕ್ಕೆ ಹಬ್ಬದ ವಿಶೇಷ ಖಾದ್ಯಗಳನ್ನು ಸಮರ್ಪಿಸಲಾಯಿತು. ನಂತರ ಊರಿನ ಪುರುಷರು, ಮಹಿಳೆಯರು, ಮಕ್ಕಳು ಪೇರೂರು ಶಾಲಾ ಮೈದಾನಕ್ಕೆ ತೆರಳಿದರು.
ಸಂಪ್ರದಾಯದಂತೆ ಹಿರಿಯರಾದ ಮಚ್ಚುರ ಎ.ಗಣಪತಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಆಟೋಟಗಳನ್ನು ಉದ್ಘಾಟಿಸಿದರು. ಪುರುಷರು ತಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಮಹಿಳೆಯರು ಬಲೂನಿಗೆ ಗುರಿ ಇಟ್ಟರು.
ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ವಿವಿಧ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಹಿರಿಯ ನಾಗರಿಕರಿಗೆ ಕಣ್ಣು ಕಟ್ಟಿ ಮಡಕೆ ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ವಾಲಗತಾಟ್ ಕಾರ್ಯಕ್ರಮದಲ್ಲಿ ಮಕ್ಕಳು ಮಹಿಳೆಯರು ಪುರುಷರು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಎರಡು ಕೇರಿಗಳ ಮಧ್ಯೆ ನಡೆದ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯವು ನೋಡುಗರ ಗಮನ ಸೆಳೆಯಿತು. ಸ್ಪೋರ್ಟ್ಸ್ ಕ್ಲಬ್ ಅದ್ಯಕ್ಷ ಎಂ.ಬಿ.ತಮ್ಮಯ್ಯ ಅವರ ಅದ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕರ್ಮದಲ್ಲಿ ನಿವೃತ್ತ ಎಸಿಪಿ ಬಿದಾಟ್ಟಂಡ ಬೆಳ್ಳಿಯಪ್ಪ, ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಳೆಯಿಂಡ , ವಿಜು ಅಪ್ಪಚ, ನೆಲಜಿ ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಅಪ್ಪುಮಣಿಯಂಡ ಡೇಜಿ ಸೋಮಣ್ಣ, ಹಿರಿಯರಾದ ಮೂವರ ಬೋಪುಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಸ್ಯ ಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಗಳಿಸಿ ರಾಜ್ಯಮಟ್ಟದ ಸಾಧನೆ ಮಾಡಿದ ತೊಲಂಡ ಪೂಣಚ್ಚ ಹಾಗೂ 10ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ತೋಲಂಡ ಲೀಸಿ ದೇಚಮ್ಮ ಅವರನ್ನು ಗೌರವಿಸಲಾಯಿತು
50 ವರ್ಷಗಳ ಸಾರ್ಥಕ ದಾಂಪತ್ಯಕ್ಕಾಗಿ ಜಾನಪದ ತಜ್ಞ ಬೋಟೊಲಂಡ ಪೊನ್ನಣ್ಣ ಹಾಗೂ ಶಾಂತಿ, ಕಾಫಿ ಸೊಸೈಟಿಯ ನಿವೃತ್ತ ಮ್ಯಾನೇಜರ್‌ಚಂಗೆಟಿರ ಅಚ್ಚಯ್ಯ ಹಾಗೂ ದೇವಕಿ ದಂಪತಿಯನ್ನು ಸನ್ಮಾನಿಸಿ, ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net