

ಪ್ರಮುಖ ಮುಖ್ಯಾಂಶಗಳು
ಕಾವೇರಿ ಮತ್ತು ಇದರ ಉಪನದಿ ಲಕ್ಷö್ಮಣತೀರ್ಥ ನದಿಯ ಪುನರುಜ್ಜೀವನಕ್ಕೆ 70 ಕೋಟಿ ರೂ. ಮೊತ್ತದ ಯೋಜನೆ ಸಿದ್ಧವಾಗಿದೆ. ಇದಕ್ಕೆ ಅಗತ್ಯವಾಗಿರುವ ಯೋಜನಾ ವರದಿ ಮತ್ತು ಅಂದಾಜು ಪಟ್ಟಿ ತಯಾರಿಸುವ ಸಲುವಾಗಿ ಕಾವೇರಿ ನದಿ ಪಾತ್ರದಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಕೊಡಗಿನಲ್ಲಿ ಮೊದಲು ಭಾಗಮಂಡಲದಿAದ ನೆಲ್ಯಹುದಿಕೇರಿ ತನಕ ಈ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿತ್ತು. ಆದರೆ ಇದೀಗ ಜಿಲ್ಲೆಯಲ್ಲಿ ಕಾವೇರಿ ನದಿ ಹರಿಯುವಷ್ಟು ದೂರವೂ ಯೋಜನೆ ಕಾರ್ಯಗತಗೊಳ್ಳಲಿದೆ.
ಕಾವೇರಿ ನದಿಯ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಶಕಗಳ ಹಿಂದೆ ನದಿಯ ನೀರನ್ನು ಬೊಗಸೆಯಲ್ಲಿ ತೆಗೆದು ನೇರವಾಗಿ ಕುಡಿಯಬಹುದಿತ್ತು. ಆದರೆ ಈಗ ಸ್ನಾನಕ್ಕೂ ಬಳಸಲು ನದಿ ನೀರು ಯೋಗ್ಯವಾಗಿಲ್ಲ. ನದಿ ಮಲೀನ ಆಗುವುದನ್ನು ತಪ್ಪಿಸದಿದ್ದರೆ ಸದ್ಯದಲ್ಲೇ ಕಾವೇರಿ ನದಿ ಅಸ್ತಿತ್ವವನ್ನೇ ಕಳೆದುಕೋಳ್ಳಲಿದೆ. ಇಂಥ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮ ಉತ್ತಮ ಯೋಜನೆ ರೂಪಿಸಿದೆ. ಈ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರುವಂತಾದರೆ ಕಾವೇರಿ ನದಿ ಮೊದಲಿನಂತೆ ಸ್ವಚ್ಛ ಮತ್ತು ಸುಂದರವಾಗಿ ಕಂಗೊಳಿಸುವುದನ್ನು ನಿರೀಕ್ಷಿಸಬಹುದು.
ಕಾವೇರಿ ನೀರಾವರಿ ನಿಗಮದ ಮೂಲಕ ಉತ್ತಮ ಯೋಜನೆಯೊಂದು ರೂಪುಗೊಂಡಿರುವುದು ಆಶಾದಾಯಕ ಬೆಳವಣಿಗೆ. ನದಿ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಇಂಥ ಒಂದು ಯೋಜನೆಯ ಅಗತ್ಯ ಹೆಚ್ಚಾಗಿತ್ತು. ಈ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ನಡೆಯುತ್ತಿರುವ ಸರ್ವೇ ಕಾರ್ಯ ಆದಷ್ಟು ಶೀಘ್ರ ಮುಗಿದು ವರದಿ ಸಲ್ಲಿಕೆ ಆಗಲಿ. ನದಿ ಪುನರುಜ್ಜೀವನ ಕಾರ್ಯವೂ ಬೇಗನೇ ಆರಂಭವಾಗಲಿ.