ಇಡೀ ಪ್ರಪಂಚಕ್ಕೆ ಜೀವಶಕ್ತಿ, ಆತ್ಮಶಕ್ತಿ ಹೆಣ್ಣು ಎಂದರೆ ತಪ್ಪಾಗಲಾರದು. ಸೃಷ್ಟಿಗೆ ಮೂಲ ಕಾರಣಕರ್ತಳು ಹೆಣ್ಣು ಮೂಲವಾಗಿದ್ದು, ಹೆಣ್ಣು ಮಕ್ಕಳನ್ನು ರಕ್ಷಿಸಬೇಕು ಮತ್ತು ಗೌರವಿಸಬೇಕು ಎಂದ ಅವರು, ಸಾಮಾಜಿಕವಾಗಿ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸಹ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಹಲ್ಯಾ ಬಾಯಿ. ಝಾನ್ಸಿರಾಣಿ ಲಕ್ಷ್ಮಿಬಾಯಿ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಸಂಚಿಹೊನಮ್ಮ ಹೀಗೆ ಹಲವರನ್ನು ಉದಾಹರಣೆಯಾಗಿ ಕಾಣಬಹುದಾಗಿದೆ. ಆತ್ಮಸಾಕ್ಷಿ ಕುಸಿಯುತ್ತಿರುವ ಇಂದಿನ ಸಂದರ್ಭದಲ್ಲಿ ಕುಟುಂಬದಲ್ಲಿ ಧೈರ್ಯ ತುಂಬುವವರು ಮಹಿಳೆಯರು ಎಂದರೆ ಅತಿಶಯೋಕ್ತಿಯಲ್ಲ ಎಂದು ನುಡಿದರು.