ಥ್ರೋಬಾಲ್ ಪಂದ್ಯಾವಳಿಯ ಸಡಗರದೊಂದಿಗೆ ಮಹಿಳೆಯರು ತಮ್ಮ ಕ್ರೀಡಾ ಪ್ರತಿಭೆ ತೋರಿದರು. ಈ ಪಂದ್ಯಾವಳಿಯಲ್ಲಿ ವಿವಾಹಿತ ಮಹಿಳೆಯರು ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ (ಎರಡು ತಂಡ), ನೆಲಜಿ ಪೊಮ್ಮಕ್ಕಡ ಕೂಟ, ಅಮ್ಮತ್ತಿ ಪೂಂದಳಿ ಪೊಮ್ಮಕ್ಕಡ ಕೂಟ, ಮೈಸೂರು ಪೊಮ್ಮಕ್ಕಡ ಕೂಟ, ಟಿ. ಶೆಟ್ಟಿಗೇರಿ ಕೂಟ, ಗುಂಬಳಮಾಡ ಪೊಮ್ಮಕ್ಕಡ ಕೂಟ, ಪೊನ್ನಂಪೇಟೆ ತಲಕಾವೇರಿ ಪೊಮ್ಮಕ್ಕಡ ಕೂಟ, ಮೈಸೂರು, ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಬೆಂಗಳೂರು ಪೊಮ್ಮಕ್ಕಡ ಕೂಟ, ಜೋಮಾಲೆ ಕೂಟ ಚೆಟ್ಟಳ್ಳಿ, ಬೇಗೂರು ಪೊಮ್ಮಕ್ಕಡ ಕೂಟ, ಪೊನ್ನಂಪೇಟೆ ಪೊಮ್ಮಕ್ಕಡ ಕೂಟ, ರರ‍್ಸ್ ಪೊಮ್ಮಕ್ಕಡ ಕೂಟ ಪೊನ್ನಂಪೇಟೆ ಹಾಗೂ ಮೂರ್ನಾಡು ಪೊಮ್ಮಕ್ಕಡ ಕೂಟದ ತಂಡಗಳು ಪಾಲ್ಗೊಂಡಿದ್ದವು.