ಗ್ರಾಮ ಸ್ವರಾಜ್ಯದೊಂದಿಗೆ ರಾಮರಾಜ್ಯ ನಿರ್ಮಾಣ

ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಮಂಡಲದಲ್ಲಿ ಹಿಂದೂ ಸಂಗಮ ಶೋಭಾಯಾತ್ರೆಯಲ್ಲಿ ಮಹಿಳೆಯರು ಪೂರ್ಣಕುಂಭದೊಂದಿದೆ ಮೆರವಣಿಯಲ್ಲಿ ತೆರಳಿದರು.
ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಮಂಡಲದಲ್ಲಿ ಹಿಂದೂ ಸಂಗಮ ಶೋಭಾಯಾತ್ರೆಯಲ್ಲಿ ಮಹಿಳೆಯರು ಪೂರ್ಣಕುಂಭದೊಂದಿದೆ ಮೆರವಣಿಯಲ್ಲಿ ತೆರಳಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಡಿಕೇರಿಯ ಶ್ರೀ ಸೋಮನಾಥ ನಂದಾಪುರಿ ಸ್ವಾಮೀಜಿಗಳು ಹೇಳಿಕೆ
ಸೋಮವಾರಪೇಟೆ: ಸಮೀಪದ ಹಾನಗಲ್ಲು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಯಡೂರು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು.
ಕಲ್ಕಂದೂರಿನ ಕೂಡುರಸ್ತೆಯಿಂದ ಯಡೂರು ಗ್ರಾಮದವರೆಗೆ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಿದ್ದ ಅಲಂಕೃತ ವಾಹನದಲ್ಲಿ ಮೆರವಣಿಗೆ ತೆರಳಲಾಯಿತು. ಹಾನಗಲ್ಲು ಗಣಪತಿ ದೇವಾಲಯದ ಅರ್ಚಕ ಪ್ರಸಾದ್ ಭಟ್ ನೇತೃತ್ವದಲ್ಲಿ ಗೋ ಪೂಜೆಯನ್ನು ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಮಹಿಳೆಯರು ಪೂರ್ಣಕುಂಭದೊಂದಿಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಯಡೂರು ಆಟದ ಮೈದಾನದವರೆಗೆ ನಡೆದ ಶೋಭಾಯಾತ್ರೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಮಡಿಕೇರಿಯ ಶ್ರೀ ಸೋಮನಾಥ ನಂದಾಪುರಿ ಸ್ವಾಮೀಜಿ, ಗ್ರಾಮ ಸ್ವರಾಜ್ಯದೊಂದಿಗೆ ರಾಮರಾಜ್ಯ ನಿರ್ಮಾಣವಾಗಬೇಕು. ಆದರೆ ಆಧುನಿಕ ವಿಜ್ಞಾನದ ಯುಗದಲ್ಲಿ ಆಧ್ಯಾತ್ಮಿಕತೆಯನ್ನು ಮರೆಯುತ್ತಿದ್ದೇವೆ. ಸಾವಯವ ಕೃಷಿ ಪದ್ಧತಿ ದೂರಾಗುತ್ತಿದೆ. ಇದರಿಂದಾಗಿ ಆಯುಷ್ಯಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ.
ಭಾರತ ಸದೃಢವಾಗಿದ್ದರೆ ಮಾತ್ರ ಜಗತ್ತು ಸುಖಿಯಾಗಿರುತ್ತದೆ. ಭಾರತ ಭಾರತವಾಗಿ ಉಳಿಯಬೇಕಾದರೆ ಹಿಂದೂ ಕೌಟುಂಬಿಕ ಪದ್ಧತಿ ಉಳಿಯಬೇಕು. ಹಿಂದೂ ಸಮಾಜದ ಒಗ್ಗಟ್ಟಿಗೆ ಯಾವುದೇ ರಾಜಕೀಯ, ರಾಜಕೀಯ ಪಕ್ಷಗಳು ಧಕ್ಕೆ ಉಂಟುಮಾಡಬಾರದು ಎಂದರು.
ಸಾಮಾಜಿಕ ಕಾರ್ಯಕರ್ತ ಸುಳ್ಯ ಆಡೂರಿನ ನವೀನ್ ಸುಬ್ರಹ್ಮಣ್ಯ ಮಾತನಾಡಿ, ಈ ಹಿಂದಿನಿಂದಲೂ ಹಿಂದೂ ಸಮಾಜದ ಮೇಲೆ ಹಲವಷ್ಟು ಧಾಳಿಗಳು ನಡೆದಿವೆ. ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ನಾಶಗೊಳಿಸುವ ಯತ್ನಗಳು ಧರ್ಮದ್ರೋಹಿಗಳಿಂದ ನಡೆದರೂ ಸಹ ಮತ್ತೆ ತಲೆಯೆತ್ತಿ ನಿಂತಿವೆ. ಬಹುತ್ವದಲ್ಲಿ ಹಿಂದುತ್ವ ಬೆಳೆದಿದೆ. ಹಿಂದುತ್ವದ ಜಾತ್ಯಾತೀತತೆಯೇ ನಿಜವಾದ ಸತ್ಯ ಎಂದು ಹೇಳಿದರು.
ಸಾಹಿತಿ ಜಲಾಕಾಳಪ್ಪ, ಹಿರಿಯ ಸ್ವಯಂ ಸೇವಕ ಕೆ.ಎಸ್. ಅಪ್ಪಯ್ಯ, ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಟಿ. ಸನತ್, ಗೌರವಾಧ್ಯಕ್ಷ ಎಸ್.ಎನ್. ಸೀತಾರಾಮ್, ಹಾನಗಲ್ಲು ಮಂಡಲ ಅಧ್ಯಕ್ಷ ಬಿ.ಜೆ. ದೀಪಕ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net