ಬ್ರೈನೋಬ್ರೈನ್ ಸ್ಪರ್ಧೆ: ಮಕ್ಕಳ ಅಮೋಘ ಸಾಧನೆ

ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-೨೦೨೬ರಲ್ಲಿ ಪ್ರಶಸ್ತಿ ಪಡೆದ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ೩೪ ವಿದ್ಯಾರ್ಥಿಗಳು.
ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-೨೦೨೬ರಲ್ಲಿ ಪ್ರಶಸ್ತಿ ಪಡೆದ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ೩೪ ವಿದ್ಯಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಬ್ರೈನೋಬ್ರೈನ್ ಸ್ಪರ್ಧೆ: ಮಕ್ಕಳ ಅಮೋಘ ಸಾಧನೆ
ಮಡಿಕೇರಿ: ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಚೆನ್ನೈನ ಚೆನ್ನೈ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ೪೮ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-೨೦೨೬ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ೩೪ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಮಾತನಾಡಿ, ವಿದ್ಯಾರ್ಥಿಗಳು ೨೧ ಚಾಂಪಿಯನ್ ಟ್ರೋಫಿ, ೯ ಚಿನ್ನದ ಪದಕ ಮತ್ತು ೪ ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಸಾಧನೆಯ ಹೆಗ್ಗಳಿಕೆಯು ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲ್ಲಬೇಕು. ಕೇವಲ ೩ ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಈ ಅದ್ಭುತ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.
ಸ್ಪರ್ಧೆಯಲ್ಲಿ ಭಾರತದ ೪೦೦ ಬ್ರೈನೋಬ್ರೈನ್ ಸಂಸ್ಥೆಗಳಿಂದ ಒಟ್ಟು ೮,೫೦೦ ಮಕ್ಕಳು ಭಾಗವಹಿಸಿದ್ದು, ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದರಲ್ಲಿ ಒಟ್ಟು ೩೪ ಮಕ್ಕಳು ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಇದ್ದರು.
ಚಾಂಪಿಯನ್ ಟ್ರೋಫಿ ವಿಜೇತರು: ಕೆ.ಸಿ.ಆರುಷಿ, ಶ್ರೀಹಾನ್ ಸಂಜಯ್ ಜಿತ್ತಿ, ಎಸ್.ಅನ್ವಿತ್, ಬಿ.ಲಲಿತ್ ಆದಿತ್ಯ, ಬಿ.ಆರ್.ಲಕ್ಷಿತ, ಕೆ.ಎಂ.ವಂಶಿ, ನಿಲ್ಹಾ ಜೆ.ತಾರಕನ್, ಜಿ.ಅಭಿನವ್ ಕೃಷ್, ಕೆ.ಸಿ.ಆರಾಧ್ಯ, ಏಡನ್.ಜೆ.ತಾರಕನ್, ಪಿ.ದೃಪದ್ ಮಣಿಕೋಥ್, ಲಿವ್ಯ ಸುನೀತ್‌ಕುಮಾರ್, ಎಂ.ಮಯಾಂಕ್, ಆಯಿಷ ಮಿನ್ಹ, ಫಾತಿಮ ಮಿಝ್ನ, ಸಿ.ಸಿ.ರುಷಾಂಕ್, ಎಂ.ಎಂ.ಗಣಿತ್ ಪೊನ್ನಣ್ಣ, ಮೊಹಮ್ಮದ್ ಶಯಾನ್, ಎಸ್.ಐಯಾರ, ಲಶಿಕ.ರೈ.ಜೆ, ಸಿ.ಮೊಹಮ್ಮದ್ ಅಬಾನ್ ಅವರು ಚಾಂಪಿಯನ್ ಟ್ರೋಫಿ ಪಡೆದಿದ್ದಾರೆ.
ಚಿನ್ನದ ಪದಕ ವಿಜೇತರು: ವೈ.ಬಿ.ದಿಯಾ, ಎ.ಪಿ.ಜೆಶ್ವಿತ ತಂಗಮ್ಮ, ಪಿ.ಜೆ.ರುಶಾಲಿ, ಕನಿಷ ಸುನೀತ್‌ಕುಮಾರ್, ವೈ.ಡಿ.ಕುಶನ್ ದೇವಪ್ಪ, ಎಂ.ರಿಯಾಂಕ, ನಿಧಿ.ಆರ್.ಅನ್ವೇಕರ್, ಸಾಕ್ಷಾತ್.ಪಿ.ಗೌಡ, ಬಿ.ಕೃಶ್ವಿನ್ ಆದ್ವಿಕ್ ಚಿನ್ನದ ಪದಕ ಪಡೆದಿದ್ದಾರೆ.
ಬೆಳ್ಳಿ ಪದಕ ವಿಜೇತರು: ನಿಂಶಿ.ಕೆ.ಎಂ, ಪರೀಕ್ಷ.ಎ.ಎಲ್, ಜೊಹನ್ನಾ ಮಡ್ತಾ, ಪ್ರಣವ ಅವರು ಬೆಳ್ಳಿ ಪದಕ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net