ಭಗವತಿ ದೇವಾಲಯದ ಬ್ರಹ್ಮ ಕಳಸೋತ್ಸವ

ಕುಯ್ಯಂಗೇರಿ ಶ್ರೀ ಭಗವತಿ ದೇವಾಲಯದ ಅಷ್ಟಬಂದ ಪುನರ್ ಪ್ರತಿಷ್ಠ ಬ್ರಹ್ಮ ಕಳಸೋತ್ಸವ ದಲ್ಲಿ ನಾಡಿನ ಸಮೃದ್ಧಿಗೆ. ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕುಯ್ಯಂಗೇರಿ ಶ್ರೀ ಭಗವತಿ ದೇವಾಲಯದ ಅಷ್ಟಬಂದ ಪುನರ್ ಪ್ರತಿಷ್ಠ ಬ್ರಹ್ಮ ಕಳಸೋತ್ಸವ ದಲ್ಲಿ ನಾಡಿನ ಸಮೃದ್ಧಿಗೆ. ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಭಗವತಿ ದೇವಾಲಯದ ಅಷ್ಟಬಂದ ಮರುಪ್ರತಿಷ್ಠ ಬ್ರಹ್ಮ ಕಳಸೋತ್ಸವ
ನಾಪೋಕ್ಲು: ಇಲ್ಲಿಗೆ ಸಮೀಪದ ಕುಯ್ಯಂಗೇರಿ ಶ್ರೀ ಭಗವತಿ ದೇವಾಲಯದ ಅಷ್ಟಬಂದ ಮರುಪ್ರತಿಷ್ಠ ಬ್ರಹ್ಮ ಕಳಸೋತ್ಸವ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಸಂಪನ್ನಗೊಂಡಿತು.
ಬ್ರಹ್ಮಕಲಕೋತ್ಸವ ಅಂಗವಾಗಿ ಇತ್ತೀಚೆಗೆ ಹೋಮ, ಹವನ, ಧ್ವಜಾರೋಹಣ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಗಣಪತಿ ಹೋಮ, ಬಿಂಬ ಜಲದಿವಾಸ, ವಿವಿಧ ಪೂಜಾ ವಿಧಾನಗಳು ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಜರುಗಿತ್ತು.
ದಿವಸ ಗಣಪತಿ ಪ್ರತಿಷ್ಠ ಹೋಮ, ಕಳಶಾರಾಧನೆ , ಆಶ್ಲೇಷ ಬಲಿ. ಬಿಂಬ ಶುದ್ಧಿ ಕಲಶ, ಬಲಿಕ ಚಂಡಿಕಾ ಹೋಮ ಸೇರಿದಂತೆ ಇನ್ನಿತರ ಪೂಜಾ ವಿಧಿವಿಧಾನಗಳು ಜರುಗಿ ಏತಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನೆರವೇರಿತು.
ಗಣಪತಿ ಹೋಮ ದೇವಿ ಪ್ರತಿಷ್ಠಾ ಹೋಮ, ಕಳಸ ಪೂಜೆ, ಶ್ರೀ ಭಗವತಿ ದೇವಿಯ ಬಿಂಬ ಪ್ರತಿಷ್ಠೆ ಅಷ್ಟಬಠಧ ಲೇಪನ, ಬ್ರಹ್ಮ ಕಳಸ ಅಭಿಷೇಕ ಮಹಾಪೂಜೆ ಫಲ ಮಂತ್ರಾಕ್ಷತೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆನೆಯೊಂದಿಗೆ ಬ್ರಹ್ಮ ಕಳಸೋತ್ಸವ ಸಂಪನ್ನಗೊಂಡಿತ್ತು.
ಪೂಜಾ ವಿಧಿವಿಧಾನಗಳನ್ನು ತಂತ್ರಗಳಾದ ಎ.ಜಿ. ಪಂಡರೀಶ ಅರಳಿತ್ತಾಯ, ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು ಈ ಸಂದರ್ಭ ಊರಿನ ತಕ್ಕ ಮುಖ್ಯಸ್ಥರು , ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುರಿಕ್ಕಡ ಆರ್ ದೇವಿ ಪ್ರಸಾದ್ , ಸದಸ್ಯರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net