ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದೇ ಹೆಸರಾದ ದಿವಂಗತ ಡಾ.ಎಸ್.ಆರ್.ರಂಗನಾಥನ್ (೧೮೯೨-೧೯೭೨) ಅವರ ನೆನಪಿನಲ್ಲಿ ಈ ಸಪ್ತಾಹ ನಡೆಸಲಾಗುತ್ತದೆ. ಗ್ರಂಥಾಲಯ ವಿದ್ವಾಂಸರಾದದ್ದು ಆನಂತರ, ಮೂಲತಃ ಅವರು ಖ್ಯಾತ ಗಣಿತಶಾಸ್ತ್ರಜ್ಞರೂ ಶಿಕ್ಷಣ ತಜ್ಞರೂ ಆಗಿದ್ದರು. ಕರ್ನಾಟಕದ ಮಂಗಳೂರಿನ ಸರಕಾರಿ ಕಾಲೇಜಿನಲ್ಲೂ ಅವರು ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರೆಂಬುದು ಕನ್ನಡದ ಹೆಮ್ಮೆ. ಅವರು ಗ್ರಂಥಾಲಯಗಳ ವಿಕಾಸಕ್ಕೆ ತಮ್ಮ ಅರಿವಿನ ಮೂಲಕ ಹೊಸ ನಿಯಮಗಳನ್ನು ರೂಪಿಸಿ ಒಂದು ಚೌಕಟ್ಟನ್ನು ಹಾಕಿ ಕೊಟ್ಟವರು ಎಂದು ನುಡಿದರು.