ಕುಶಾಲನಗರದ ಹೊಸ ಹೌಸಿಂಗ್ ಬೋರ್ಡ್ನಲ್ಲಿ ಸತ್ಕಾರ್ಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆರಂಭಿಸಲಾದ ಪುಸ್ತಕ ಗೂಡನ್ನು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಕ್ಕಳಿಗೆ ಪುಸ್ತಕಗಳನ್ನು ಕೊಡುವ ಮೂಲಕ ಉದ್ಘಾಟಿಸಿದರು. ಎನ್. ಕೃಷ್ಣಮೂರ್ತಿ,ಬಿ.ಎಂ. ಕೃಷ್ಣಪ್ಪ, ಜಿ.ಬಿ. ಜಗದೀಶ್, ಎಂ.ಕೆ. ಸುಂದರೇಶ್, ವಿಜೇತ ಇತರರು ಇದ್ದರು.
ದಿನನಿತ್ಯ ಕೆಲಹೊತ್ತು ಮೊಬೈಲ್ ಫೋನ್ ಬದಿಗಿಟ್ಟು ಕೈಯಲ್ಲಿ ಪುಸ್ತಕ ಹಿಡಿದು ಪುಟಗಳನ್ನು ತಿರುವಿ ಹಾಕಿದರೆ ಉತ್ತಮ ವಿಚಾರಗಳನ್ನು ಮೆಲಕು ಹಾಕುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ
ವಿ.ಪಿ. ಶಶಿಧರ್ ಹೇಳಿದರು. ಇಲ್ಲಿನ ಹೊಸ ಹೌಸಿಂಗ್ ಬೋರ್ಡ್ ಬಡಾವಣೆಯ ಸತ್ಕಾರ್ಯ ಹೊಸ ಗೃಹಮಂಡಳಿ ಕ್ಷೇಮಾಭಿವೃದ್ಧಿ ಸಂಘದ ಮೂಲಕ ಆರಂಭಿಸಿರುವ ಪುಸ್ತಕಗಳ ಸಂಗ್ರಹಾಲಯ ಪುಸ್ತಕ ಗೂಡು ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಜಿಲ್ಲೆಯ ಶೈಕ್ಷಣಿಕ ರಾಜಧಾನಿ ಕುಶಾಲನಗರ ಪಟ್ಟಣದಲ್ಲಿ ಹೊಸ ಪರಿಕಲ್ಪನೆಯಿಂದ ಆರಂಭಿಸಿರುವ ಪುಸ್ತಕ ಗೂಡು
ಮುಂದಿನ ದಿನಗಳಲ್ಲಿ ಜೇನುಗೂಡು ಮಾದರಿಯಲ್ಲಿ ಯಶಸ್ವಿಯಾಗಿ ಬೆಳೆಯುವ ಮೂಲಕ ಮಕ್ಕಳು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವಂತಾಗಲಿ.
ಇಂದಿನ ಸಮಾಜದ ನಿರೀಕ್ಷೆಗೆ ಅನುಗುಣವಾಗಿ ಹೊಸ ಹೌಸಿಂಗ್ ಬಡಾವಣೆಯ ನಿವಾಸಿಗಳು ಸೌಹಾರ್ದತೆ, ಭ್ರಾತೃತ್ವದಿಂದ ಒಗ್ಗೂಡಿ ಸತ್ಕಾರ್ಯ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸುವ ಮೂಲಕ ಸಾಮಾಜಿಕವಾಗಿ ಹಾಗೂ ರಚನಾತ್ಮಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಮಕ್ಕಳು ಹಾಗೂ ಜನರಲ್ಲಿ ಜ್ಞಾನಾರ್ಜನೆ ಬೆಳೆಸುವ ದಿಸೆಯಲ್ಲಿ ಆರಂಭಿಸಿರುವ ಪುಸ್ತಕ ಗೂಡು ಜ್ಞಾನದ ಅಭಿವೃದ್ಧಿಯ ದ್ಯೋತಕವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪುಸ್ತಕ ಗೂಡು ಇಟ್ಟು ಜನರಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಹುಟ್ಟಿಸಲು ಇದು ತುಂಬಾ ಸಹಕಾರಿಯಾಗಿದೆ. ಪುಸ್ತಕ ಗೂಡಿನಿಂದ ಸಮಕಾಲೀನ ಸಂದರ್ಭದ ಜ್ಞಾನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಂಡು
ತನ್ಮೂಲಕ ಉತ್ತಮ ಜೀವನಮೌಲ್ಯಗಳು ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಮಾತನಾಡಿ, ಪುಸ್ತಕ ಪ್ರೇಮಿಯಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತಿದ್ದರು. ಪುಸ್ತಕಗಳಿಲ್ಲದ ಮನೆ ಆತ್ಮವಿಲ್ಲದ ದೇಹದಂತೆ ಎಂದಿದ್ದು. ಹಾಗಾಗಿ, ಈ ಪುಸ್ತಕ ಗೂಡು ಜ್ಞಾನದ ಕೇಂದ್ರವೂ ಆಗಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್. ಕೃಷ್ಣಮೂರ್ತಿ ಮಾತನಾಡಿ, ತಮ್ಮ ಬಡಾವಣೆ ಸೇರಿದಂತೆ ಪಟ್ಟಣದ ಜನತೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಹೊಸ ಪರಿಕಲ್ಪನೆಯೊಂದಿಗೆ ಬಡಾವಣೆಯ ನಿವಾಸಿಗಳು ಸೇರಿ ಪುಸ್ತಕ ಗೂಡು ಆರಂಭಿಸಲಾಗಿದೆ. ಪ್ರತಿಯೊಬ್ಬರೂ ಪುಸ್ತಕ ಗೂಡಿನ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಉದ್ಯಾನವನದಲ್ಲಿ ನಿರ್ಮಿಸಿರುವ ಪುಸ್ತಕ ಗೂಡಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಹಾಗೂ ಬಡಾವಣೆಯ ಮೌಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಸೂಕ್ತ ಅನುದಾನ ಒದಗಿಸುವಂತೆ ಮನವಿ ಮಾಡಿದರು.
ಪುರಸಭೆಯ ನಾಮನಿರ್ದೇಶಿತ ಮಾಜಿ ಸದಸ್ಯ ಜಿ.ಬಿ. ಜಗದೀಶ್ ಮಾತನಾಡಿ, ಪುಸ್ತಕ ಗೂಡಿನಲ್ಲಿ ಸಂಗ್ರಹಿಸಿದ ಪುಸ್ತಕಗಳನ್ನು ಓಪ್ಪೋರಣವಾಗಿ ಜೋಡಿಸಲು ಪುಸ್ತಕದ ರ‍್ಯಾಕ್‌ಗಾಗಿ 25 ಸಾವಿರ ರೂ. ಮೊತ್ತದ ಧನಸಹಾಯ ಮಾಡುವುದಾಗಿ ಪ್ರಕಟಿಸಿದರು.
ಪುರಸಭೆ ಮಾಜಿ ಸದಸ್ಯ ಎಂ.ಕೆ. ಸುಂದರೇಶ್ (ದಿನೇಶ್) ಮಾತನಾಡಿ, ಮಳೆ, ಗಾಳಿಯಿಂದ ಪುಸ್ತಕಗಳಿಗೆ ರಕ್ಷಣೆ ನೀಡಲು ಪುಸ್ತಕ ಗೂಡಿನ ಕಟ್ಟಡದ ಸುತ್ತಲಿನ ಕಿಟಕಿಗಳಿಗೆ ರಕ್ಷಣೆ ಒದಗಿಸಲು ತಾವು ಅಗತ್ಯ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುವುದಾಗಿ ಹೇಳಿದರು.
ಪುಸ್ತಕದ ಗೂಡಿನ ಪರಿಕಲ್ಪನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಕೆ.ಜಿ. ರೇಣುಕಸ್ವಾಮಿ, ಪುಸ್ತಕ ಗೂಡಿನ ಮೂಲಕ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಮೊಬೈಲ್ ಬಳಕೆಯ ಹಾವಳಿಯನ್ನು ಬಿಟ್ಟು ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು. ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್ ಮಾತನಾಡಿದರು.
ಸಂಘದ ಉಪಾಧ್ಯಕ್ಷ ರುಕ್ಮಾಂಗದ, ಕಾರ್ಯದರ್ಶಿ ವಿಜೇತ ಪ್ರದೀಪ್, ನಿರ್ದೇಶಕ, ಎಸ್.ಎನ್.ಲೋಕೇಶ್, ಟಿ.ಬಿ. ಮಂಜುನಾಥ್