ಎಲ್ಲರನ್ನು ಒಂದೇ ರೀತಿ ಕಾಣುವ ಬಿಜೆಪಿ

ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆಯಲ್ಲಿ ಭಾನುವಾರ ನಡೆದ ಎಸ್‌ಸಿ ಮೋರ್ಚಾ ಘಟಕ ರಚನೆ ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ವಿ.ಕೆ.ಲೋಕೇಶ್ , ರವಿ, ರಾಮಕೃಷ್ಣ, ಗೌತಮ್ ಗೌಡ, ಬೆಳ್ಳಿಯಪ್ಪ, ದಮಯಂತಿ, ಸುಜಾತಾ ಇತರರು ಇದ್ದರು.
ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆಯಲ್ಲಿ ಭಾನುವಾರ ನಡೆದ ಎಸ್‌ಸಿ ಮೋರ್ಚಾ ಘಟಕ ರಚನೆ ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ವಿ.ಕೆ.ಲೋಕೇಶ್ , ರವಿ, ರಾಮಕೃಷ್ಣ, ಗೌತಮ್ ಗೌಡ, ಬೆಳ್ಳಿಯಪ್ಪ, ದಮಯಂತಿ, ಸುಜಾತಾ ಇತರರು ಇದ್ದರು.
Published on
ಸಿದ್ದಾಪುರ: ಭಾರತೀಯರನ್ನು ಒಂದೇ ರೀತಿ ಕಾಣುವ ಪಕ್ಷವೆಂದರೆ ಅದು ಬಿಜೆಪಿ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. 
ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆಯಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಎಸ್‌ಸಿ ಮೋರ್ಚಾ ಘಟಕ ರಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಇತ್ತೀಚೆಗೆ ಭಾರತೀಯ ಜನತಾ ಪಕ್ಷವನ್ನು ಬ್ರಾಹ್ಮಣರ ಪಕ್ಷ ಎಂದು ಆರೋಪಿಸುತ್ತಿದ್ದಾರೆ. ಆದರೆ ಬಿಜೆಪಿ ಅವಧಿಯಲ್ಲಿ ಡಾ.ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದರು. ಅಲ್ಲದೆ ದ್ರೌಪದಿ ಮುರ್ಮು, ರಮಾನಾಥ್ ಕೋವಿಂದ್ ಎಸ್‌ಟಿಯಾಗಿದ್ದರು. ಅವರನ್ನೂ ರಾಷ್ಟ್ರಪತಿ ಮಾಡಿರುವುದು ಬಿಜೆಪಿ ಪಕ್ಷ ಮಾತ್ರ. ಆದರೆ ಕಾಂಗ್ರೆಸ್ ಸರ್ಕಾರವು ದಲಿತರನ್ನು ಓಟ್ ಬ್ಯಾಂಕ್‌ಗಾಗಿ ಮಾತ್ರ ಬಳಸುತ್ತಿದೆ ಎಂದು ಆರೋಪಿಸಿದರು.
 ರಾಜ್ಯ ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡದೆ ಆರ್‌ಎಸ್‌ಎಸ್ ಸಂಘಟನೆ ಬ್ಯಾನ್ ಮಾಡುವತ್ತ ಗಮನಹರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ, ಡಾ.ಅಂಬೇಡ್ಕರ್ ಅವರ ಪ್ರಯತ್ನದಿಂದಲೇ ದಲಿತರು ಉದ್ಯೋಗ, ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮುಂದುವರೆಯಲು ಕಾರಣವಾಗಿದೆ. ರಾಜಕೀಯವಾಗಿ ದಲಿತರ ಮತವನ್ನು ಪಡೆಯಲು ಅಂಬೇಡ್ಕರ್ ಹೆಸರಿನಲ್ಲಿ ಎಲ್ಲೆಡೆ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷವು, ಡಾ.ಅಂಬೇಡ್ಕರ್ ಅವರಿಗೆ ಅವಮಾನ, ಅನ್ಯಾಯ ಮಾಡಿರುವುದನ್ನು ಮರಮಾಚಿ ಇಂದು ಅಂಬೇಡ್ಕರ್ ಹೆಸರಿನಲ್ಲಿ ಮತ ಯಾಚಿಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಟೀಕಿಸಿದರು. 
ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ರವಿ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿಯವರನ್ನು ಮತ ಬ್ಯಾಂಕ್‌ಗೆ ಬಳಸುತ್ತಿದ್ದು, ಅವರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ನಡುವೆ ಪರಿಶಿಷ್ಟ ಜಾತಿಗೆ ಮೀಸಲಾದ ಹಣವನ್ನು ಬೇಕಾಬಿಟ್ಟಿ ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು. 
ಈ ವೇಳೆ ಬಿಜೆಪಿ ಮಂಡಲ ಎಸ್‌ಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣ, ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಶಕ್ತಿ ಕೇಂದ್ರ ಪ್ರಮುಖ್ ಬೆಳ್ಳಿಯಪ್ಪ, ಗ್ರಾಪಂ ಸದಸ್ಯರಾದ ದಮಯಂತಿ, ಸುಜಾತಾ ಇತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net