ಕೊಡಗಿನಲ್ಲಿ ಹೆಚ್ಚಾಗಿದೆ ಕೊರೆಯುವ ಚಳಿ

 ಮಡಿಕೇರಿಯಲ್ಲಿ ಶುಭ್ರವಾದ ಆಕಾಶ ಕಂಡು ಬಂತು
ಮಡಿಕೇರಿಯಲ್ಲಿ ಶುಭ್ರವಾದ ಆಕಾಶ ಕಂಡು ಬಂತು
Published on

ಪ್ರಮುಖ ಮುಖ್ಯಾಂಶಗಳು

  • ದಿನದಿಂದ ದಿನಕ್ಕೆ ಇಳಿಯುತ್ತಿದೆ ತಾಪಮಾನ
  • ಲಾನಿನಾ ಪರಿಣಾಮದಿಂದ ಚಳಿ
  • 11-12 ಡಿಗ್ರಿ ಸೆಲ್ಸಿಯಸ್ ತನಕ ಇಳಿಯುವ ಸಾಧ್ಯತೆ
"

ಫೆಬ್ರವರಿಯ ತನಕ ಈ ಮಾದರಿಯ ಶೀತ ಪರಿಸ್ಥಿತಿಗಳು ಬಹುತೇಕ ಮುಂದುವರಿಯುವ ಸಾಧ್ಯತೆಗಳು ನಿಚ್ಚಳವಾಗಿದೆ. ಸಂಬAಧಿಸಿದ ಇಲಾಖೆಗಳ ಮೂಲಕ ಹೊರಡಿಸಲಾಗುವ ದೈನಂದಿನ ಹವಾಮಾನ ನವೀಕರಣಗಳನ್ನು ರೈತರು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು. ಈ ಮೂಲಕ ಸಂಭಾವ್ಯ ನಷ್ಟಗಳನ್ನು ಕಡಿಮೆ ಮಾಡಲು ಮತ್ತು ಚಳಿಗಾಲದ ತಿಂಗಳುಗಳಲ್ಲಿ ಸ್ಥಿರ ಉತ್ಪಾದನೆ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಸಲಹೆ ನೀಡಲಾಗುತ್ತದೆ.

"

ಕಳೆದ ಒಂದು ವಾರದಿಂದ ನಮ್ಮ ಭಾಗದಲ್ಲಿ ಹೆಚ್ಚು ಚಳಿಯ ಅನುಭವ ಆಗುತ್ತಿದೆ. ಮೋಡ, ಮಳೆಯ ವಾತಾವರಣ ಬದಲಾಗಿ ಈಗ ಚಳಿ ಶುರುವಾಗಿರುವುದು ರೈತರಿಗೆ ಖುಷಿ ತಂದಿದೆ. ಈಗಿನ ಈ ವಾತಾವರಣ ಭತ್ತದ ಕೃಷಿಗೆ ಹೆಚ್ಚು ಸೂಕ್ತವಾಗಿದೆ. ಅರೇಬಿಕಾ ಕಾಫಿ ಕೊಯ್ಲು ಮಾಡಲು ಕೂಡ ಅನುಕೂಲ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net