ಉದ್ಯಮಿ ಎಡಿಕೇರಿ ಪ್ರಸನ್ನ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಕ್ರೀಡಾ ಹಬ್ಬಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ ಶಾಸಕ ಪೊನ್ನಣ್ಣ ಹಗ್ಗಜಗ್ಗಾಟ ಅಂತಿಮ ಪಂದ್ಯಾವಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್, ನಾಮ ನಿರ್ದೇಶಿತ ಸದಸ್ಯ ಮುದ್ದುರಾಜ್, ಅಯ್ಯಂಗೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕುಯ್ಯಮುಡಿ ರಂಜು, ಕಾಂಗ್ರೆಸ್ ಮುಖಂಡ ಅಪ್ರು ರವೀಂದ್ರ, ಸಮಾಜ ಸೇವಕ ಸೂರಜ್ ಹೊಸೂರು, ದಾನಿಗಳಾದ ಬೊಮ್ಮನ ಕಿರಣ್, ತೋಟಂಬೈಲ್ ಅನಂತ್‌ಕುಮಾರ್, ದಂಬೆಕೋಡಿ ಕವನ ಭೀಷ್ಮ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುಕ್ಕಾಟಿ ಅರುಣ್‌ಕುಮಾರ್ ಹಾಗೂ ಗೌಡ ಸ್ಪೋರ್ಟ್ಸ್ ಅಕಾಡೆಮಿ ಪದಾಧಿಕಾರಿಗಳು ಇದ್ದರು. ನಂತರ ನಾಲ್ಕು ವಿಭಾಗಗಳ ಫುಟ್ಬಾಲ್ ಪಂದ್ಯಾವಳಿಗಳ ಅಂತಿಮ ಪಂದ್ಯಾಟಗಳು ನಡೆದು ಬಳಿಕ ಬಹುಮಾನ ವಿತರಣೆ ಮಾಡಲಾಯಿತು.