ಫ್ರೆಂಡ್ಸ್ ಕಪ್ ಕ್ರಿಕೆಟ್ ಟೂರ್ನಿಯ ಆಟಗಾರರ ಬಿಡ್ಡಿಂಗ್

ಫ್ರೆಂಡ್ಸ್ ಕಪ್ ಕ್ರಿಕೆಟ್ ಟೂರ್ನಿಯ ಆಟಗಾರರ ಬಿಡ್ಡಿಂಗ್ ಮತ್ತು ಟ್ರೋಫಿ ಬಿಡುಗಡೆ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು. ಎಂ.ಜೆ. ಇರ್ಫಾನ್, ಮಣಿ, ಫಯಾಜ್, ನಾಣಿ, ಮಹದೇವ್, ಗ್ರೀನಿಜ್, ಅವಿನಾಶ್, ಸಲ್ಮಾನ್ ಇತರರಿದ್ದರು.
ಫ್ರೆಂಡ್ಸ್ ಕಪ್ ಕ್ರಿಕೆಟ್ ಟೂರ್ನಿಯ ಆಟಗಾರರ ಬಿಡ್ಡಿಂಗ್ ಮತ್ತು ಟ್ರೋಫಿ ಬಿಡುಗಡೆ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು. ಎಂ.ಜೆ. ಇರ್ಫಾನ್, ಮಣಿ, ಫಯಾಜ್, ನಾಣಿ, ಮಹದೇವ್, ಗ್ರೀನಿಜ್, ಅವಿನಾಶ್, ಸಲ್ಮಾನ್ ಇತರರಿದ್ದರು.
Published on
ಕುಶಾಲನಗರ: ಕುಶಾಲನಗರದ ಫ್ರೆಂಡ್ಸ್ ಕಪ್ ಕ್ರಿಕೆಟ್ ಟೂರ್ನಿಯ ಆಟಗಾರರ ಬಿಡ್ಡಿಂಗ್ ಮತ್ತು ಟ್ರೋಫಿ ಬಿಡುಗಡೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಸ್ಥಳೀಯ ರೆಸಾರ್ಟ್ ಒಂದರಲ್ಲಿ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಒಟ್ಟು 12 ತಂಡಗಳು ಭಾಗಿಯಾಗಿದ್ದು, ಬಹಳಷ್ಟು ಜಿದ್ದಾಜಿದ್ದಿಗೆ ಬಿದ್ದು ಆಟಗಾರರನ್ನು ಖರೀದಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡಿದ್ದ ಯುವ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಜೆ. ಇರ್ಫಾನ್ ಟ್ರೋಫಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಕ್ರೀಡೆಯು ಎಲ್ಲರನ್ನೂ ಒಂದೆಡೆ ಸೇರಿಸಿ ಆತ್ಮೀಯತೆ ಮೂಡಿಸಿ ಒಗ್ಗೂಡಿಸುತ್ತದೆ. ಫ್ರೆಂಡ್ಸ್ ಕಪ್ ಯಶಸ್ವಿಯಾಗಲು ಆಟಗಾರರ ಸಹಕಾರ ಅಗತ್ಯ ಎಂದರು.
ಪ್ರಮುಖರಾದ ಮಣಿ, ಫಯಾಜ್, ನಾಣಿ, ಮಹದೇವ್, ಗ್ರೀನಿಜ್, ಅವಿನಾಶ್, ಸಲ್ಮಾನ್ ಇತರರಿದ್ದರು. ಹರಾಜು ಪ್ರಕ್ರಿಯೆಯನ್ನು ಟೂರ್ನಿ ವ್ಯವಸ್ಥಾಪಕ ದೇವೇಂದ್ರ ನಡೆಸಿಕೊಟ್ಟರು. ಫ್ರೆಂಡ್ಸ್ ಕಪ್ ಕ್ರಿಕೆಟ್ ಟೂರ್ನಿ ಕುಶಾಲನಗರದ ಗುಂಡೂರಾವ್ ಬಡಾವಣೆ ಕ್ರೀಡಾಂಗಣದಲ್ಲಿ ಏ.10 ರಿಂದ 12ರ ತನಕ ಮೂರು ದಿನಗಳ ಕಾಲ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net