ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2025-26 ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿ ತಾಲೂಕು ಮಟ್ಟಕ್ಕೆ ಆಯ್ಕೆ ಆದ ಭಾಗಮಂಡಲದ ಶ್ರೀ ಆದಿಚುಂಚನಗಿರಿ ಸಂಸ್ಥಾನ ಆಶ್ರಯದ ಕಾವೇರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು. ಪ್ರಾಂಶುಪಾಲ ಕೆ.ಜೆ. ದಿವಾಕರ, ಆಡಳಿತ ಮೇಲ್ವಿಚಾರಣಾ ಅಧಿಕಾರಿ ಶ್ರೀಕೀರ್ತಿ ಹಾಗೂ ಶಿಕ್ಷಕರು ಇದ್ದರು.
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2025-26 ಕಾರ್ಯಕ್ರಮದಲ್ಲಿ ಭಾಗಮಂಡಲದ ಶ್ರೀ ಆದಿಚುಂಚನಗಿರಿ ಸಂಸ್ಥಾನ ಆಶ್ರಯದ ಕಾವೇರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಭಾವಗೀತೆ ಸ್ಪರ್ಧೆಯಲ್ಲಿ ಸುಮಿತ್, ಜನಪದ ಗೀತೆ ಲಾವಣ್ಯ, ಧಾರ್ಮಿಕ ಪಠಣ ಸಂಸ್ಕೃತ- ಬಿ.ಜೆ. ಪುನೀತ, ಧಾರ್ಮಿಕ ಪಠಣ ಅರೇಬಿಕ್ ನಜಾ ಫಾತಿಮಾ, ಕವನ ವಾಚನ- ಫೌಜಾನ, ಚರ್ಚಾ ಸ್ಪರ್ಧೆಯಲ್ಲಿ ಹೆಚ್.ಆರ್. ಲಕ್ಷಿö್ಮÃ, ಚಿತ್ರಕಲೆಯಲ್ಲಿ ಅಭಿಷೇಕ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಗಝಲ್ ಮಹಮ್ಮದ್ ಮಿಸ್ಹಬ್, ಆಶುಭಾಷಣ ಡಿ.ಜೆ. ಅರಸಿ, ರಸಪ್ರಶ್ನೆ ಭುವನ ಮತ್ತು ಎಸ್.ಜಿ. ಪುಣ್ಯ, ಕವ್ವಾಲಿ ಮಹಮ್ಮದ್ ಮಿಸ್ಹಬ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಹಿಂದಿ ಭಾಷಣದಲ್ಲಿ ಯು. ರಿಫಾ, ಮತ್ತು ಇಂಗ್ಲಿಷ್ ಭಾಷಣದಲ್ಲಿ ಸಫೀದಾ ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಕೆ.ಜೆ. ದಿವಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.