

ಪ್ರಮುಖ ಮುಖ್ಯಾಂಶಗಳು
ಯಾವುದೇ ಅನಾಮಧೇಯ ಮೂಲಗಳು, ಸಂಶಯಾಸ್ಪದ ವ್ಯಕ್ತಿಗಳು, ಸಾಮಾಜಿಕ ಜಾಲತಾಣಗಳಮೂಲಕ ಬರುವ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿ ಇರಬೇಕು. ಇಂಥ ಅಪ್ಲಿಕೇಷನ್ ಲಿಂಕ್‌ಗಳು ಶೇರ್ ಆದಲ್ಲಿ ಕೂಡಲೇ ಸೈಬರ್ ಕ್ರೆöÊಂ ಸ್ಟೇಷನ್‌ಗೆ ಮಾಹಿತಿ ಕೊಡಬೇಕು. ಹೀಗೆ ಮಾಡುವುದರಿಂದ ಮೋಸಕ್ಕೆ ಒಳಗಾಗುವುದು ತಪ್ಪುತ್ತದೆ. ಬೇರೆಯವರೂ ಇದಕ್ಕೆ ಬಲಿಯಾಗದಂತೆ ಎಚ್ಚೆತ್ತುಕೊಳ್ಳಲು ಸಹಕಾರಿ ಆಗುತ್ತದೆ. ಒಂದು ವೇಳೆ ಸೈಬರ್ ಅಪರಾಧ ಜಾಲಕ್ಕೆ ಸಿಲುಕಿದರೆ, ಮೋಸಕ್ಕೆ ಒಳಗಾದರೆ 1930 ಸೈಬರ್ ಕ್ರೆöÊಂ ಹೆಲ್ಪ್ಲೈನ್ ಸಂಪರ್ಕಿಸಬೇಕು. ಗೋಲ್ಡನ್ ಅವರ್‌ನಲ್ಲಿ ಮಾಹಿತಿ ಕೊಡುವುದರಿಂದ ಹೆಚ್ಚಿನ ನಷ್ಟ ಆಗುವುದರಿಂದ ಪಾರಾಗಬಹುದು.