ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ೮ ಕೋಟಿ ಮಂಜೂರಾಗಿದ್ದು, ಕಾಮಗಾರಿ ಆರಂಭವಾಗಲಿದೆ. ಮಹಿಳಾ ಕ್ರೀಡಾ ವಸತಿ ನಿಲಯಕ್ಕೆ ೨ ಕೋಟಿ, ಪೊನ್ನಂಪೇಟೆಯಲ್ಲಿ ೨ ಕೋಟಿ ರೂ ವೆಚ್ಚದ ಕ್ರೀಡಾ ಹಾಸ್ಟೇಲ್ ಕೂಡ ನಿರ್ಮಾಣ ಆಗಲಿದೆ. ಕ್ರೀಡಾ ಸಂಕೀರ್ಣಕ್ಕಾಗಿ ಬಾಳುಗೋಡು ಬಳಿ ೧೧ ಎಕರೆ ಪ್ರದೇಶವನ್ನು ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಗುರುತಿಸಿ ಕಾಯ್ದಿರಿಸಿದ್ದು, ಇದರ ನಿರ್ಮಾಣಕ್ಕೆ ೩೦ ಕೋಟಿ ರೂ. ಅನುದಾನ ಲಭ್ಯವಿದೆ. ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಮೈದಾನಗಳು, ವಸತಿ ನಿಲಯಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ಓಲಂಪಿಕ್ ಕ್ರೀಡೆಯನ್ನು ಗುರಿಯಾಗಿಸಿಕೊಂಡು ತರಬೇತಿಯಲ್ಲಿ ತೊಡಗಿಸಿಕೊಂಡಿರುವ ಉನ್ನತಿ ಅಯ್ಯಪ್ಪ, ಸಿಂಚನ ಕಾವೇರಮ್ಮ, ಚಂದೂರ ಪೂವಣ್ಣ, ಎಸ್.ವಿ ಸುನೀಲ್, ತೆಕ್ಕಡ ಭವಾನಿ ಅವರಗಳ ಉನ್ನತ ತರಬೇತಿಗಾಗಿ ಸರಕಾರ ಪ್ರತಿ ತಿಂಗಳು ೮೦ ಸಾವಿರ ರೂ. ಅನುದಾನವನ್ನು ಒದಗಿಸುತ್ತಿದೆ ಎಂದು ಅರುಣ್ ಮಾಚಯ್ಯ ತಿಳಿಸಿದರು.