ಕುಟುಂಬವಿದ್ದರೂ ಅನಾಥಾಶ್ರಮದಲ್ಲಿ ಇಡುವುದು ದೊಡ್ಡ ದುರಂತ

ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಕಾರುಣ್ಯ ಸದನದಲ್ಲಿ ಏರ್ಪಡಿಸಿದ್ದ ನೆರೆಹೊರೆಯವರಿಗಾಗಿ ಚಹಾಕೂಟದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಸಂಚಾಲಕ ಯು. ಅಬ್ದುಲ್ ಸಲಾಮ್ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಇದ್ದರು.
ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಕಾರುಣ್ಯ ಸದನದಲ್ಲಿ ಏರ್ಪಡಿಸಿದ್ದ ನೆರೆಹೊರೆಯವರಿಗಾಗಿ ಚಹಾಕೂಟದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಸಂಚಾಲಕ ಯು. ಅಬ್ದುಲ್ ಸಲಾಮ್ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಇದ್ದರು.
Published on
ಮಡಿಕೇರಿ
ಸ್ವಂತ ಕುಟುಂಬ, ಮಕ್ಕಳು ಇರುವ ಮನೆಗಳಿಂದ ಹೊರಹಾಕಲ್ಪಟ್ಟ ತಂದೆ, ತಾಯಿ, ತಾತ, ಅಜ್ಜಿಯಂದಿರು ತಮ್ಮ ಕೊನೆಯ ಗಳಿಗೆಯನ್ನು ಅನಾಥಾಶ್ರಮಗಳಲ್ಲಿ ಕಳೆಯುತ್ತಿರವುದು ಸಮಾಜದ ಬಹು ದೊಡ್ಡ ದುರಂತ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಸಂಚಾಲಕ ಯು. ಅಬ್ದುಲ್ ಸಲಾಮ್ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ದೇಶಾದ್ಯಾಂತ ನಡೆಸುತ್ತಿರುವ ನೆರೆಹೊರೆಯವರ ಹಕ್ಕುಗಳು ಎಂಬ ಅಭಿಯಾನದ ಭಾಗವಾಗಿ ಮಡಿಕೇರಿಯ ಸಿ.ಪಿ.ಸಿ. ಲೇ ಔಟ್‌ನಲ್ಲಿರುವ ಕಾರುಣ್ಯ ಸದನದಲ್ಲಿ ಮಡಿಕೇರಿ ಸ್ಥಾನೀಯ ಘಟಕ ವತಿಯಿಂದ ನೆರೆಹೊರೆಯವರಿಗಾಗಿ ಶುಕ್ರವಾರ ಸಂಜೆ ಏರ್ಪಡಿಸಿದ ಚಹಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಕುಟುಂಬ ಸಂಬAಧಗಳು ಶಿಥಿಲಗೊಳ್ಳುತ್ತಿವೆ. ತಂದೆ ತಾಯಿಯಂದಿರನ್ನು ಕಡಗಣಿಸಲಾಗುತ್ತಿದೆ. ವೃದ್ದಾಶ್ರಮಗಳು, ನಿರಾಶ್ರಿತ ಕೇಂದ್ರಗಳು ಅಲ್ಲಲ್ಲಿ ಅಣಬೆಗಳಂತೆ ತಲೆ ಎತ್ತುತ್ತಿದೆ. ಅನಾಥಾಶ್ರಮಗಳಲ್ಲಿ ಬರೀ ನಿರ್ಗತಿಕರು ಮಾತ್ರವಲ್ಲದೆ ಎಲ್ಲಾ ಸಂಬAಧ ಇರುವವರು ಸೇರುವಂತಾಗಿದೆ.
ಎಲ್ಲರೂ ತಮ್ಮ ನೆರೆಹೊರೆಯವರೊಂದಿಗೆ ಉತ್ತಮ ಸಂಬAಧ ಇಟ್ಟುಕೊಳ್ಳಬೇಕು. ಅದೇ ರೀತಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು. ಅವರ ಒಳಿತಿಗಾಗಿ ಪ್ರಾರ್ಥಿಸಬೇಕು ಎಂದು ಇಸ್ಲಾಮ್ ಆದೇಶಿಸುತ್ತದೆ. ಯಾರ ನೆರೆಹೊರೆಯವರು ತನ್ನ ಉಪಟಳದಿಂದ ಸುರಕ್ಷಿತರಲ್ಲವೋ ಆತ ಎಂದಿಗೂ ಓರ್ವ ನೈಜ ವಿಶ್ವಾಸಿಯಾಗಲು ಖಂಡಿತಾ ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರಾದ್ಯಾಂದ ಅಭಿಯಾನಗಳನ್ನು ಆಯೋಜಿಸಿದೆ ಎಂದು ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಸ್ಜಿದುರಹ್ಮಾದ ಧರ್ಮಗುರು ಉಮ್ಮರ್ ಮೌಲವಿ ಕುರ್ ಆನ್ ಪಠಿಸಿದರು, ಕೊಡಗು ಜಿಲ್ಲಾ ಸದಸ್ಯ ಮೊಹಮ್ಮದ್ ಮುಸ್ತಫಾ, ಎಂ. ಅಬ್ದುಲ್ಲಾ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net