ಹಿಂದೂ ಎಂದರೆ ಹೆಮ್ಮೆ ಪಡುವ ಸ್ಥಿತಿ ನಿರ್ಮಾಣ

ರಾಷ್ಟಿçÃಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಪ್ರಮುಖ ನಾಗರಿಕ ಗೋಷ್ಠಿಯಲ್ಲಿ ಆರ್‌ಎಸ್‌ಎಸ್‌ನ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೆಸ್ವಾಮಿ ಮಾತನಾಡಿದರು. ಚಕ್ಕೇರ ಮನು ಕಾವೇರಪ್ಪ ಇದ್ದರು
ರಾಷ್ಟಿçÃಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಪ್ರಮುಖ ನಾಗರಿಕ ಗೋಷ್ಠಿಯಲ್ಲಿ ಆರ್‌ಎಸ್‌ಎಸ್‌ನ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೆಸ್ವಾಮಿ ಮಾತನಾಡಿದರು. ಚಕ್ಕೇರ ಮನು ಕಾವೇರಪ್ಪ ಇದ್ದರು
Published on
ಮಡಿಕೇರಿ:
ಸಾಮಾನ್ಯ ವ್ಯಕ್ತಿಗಳಲ್ಲೂ ದೇಶದ ಬಗ್ಗೆ ಗೌರವ ಇದ್ದರೆ ಆ ದೇಶ ಬಲಾಢ್ಯ ಆಗುತ್ತದೆ ಎಂದು ಆರ್‌ಎಸ್‌ಎಸ್‌ನ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೆಸ್ವಾಮಿ ಹೇಳಿದರು. ರಾಷ್ಟಿçÃಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಮುಖ ನಾಗರಿಕ ಗೋಷ್ಠಿಯಲ್ಲಿ ಮಾತನಾಡಿದರು.
ಆರ್‌ಎಸ್‌ಎಸ್ ಸ್ಥಾಪನೆಯಾಗುವ ಪೂರ್ವದಲ್ಲಿ ಹಿಂದೂಗಳು ಸಂಘಟಿತರಾಗುವ ವಿಶ್ವಾಸ ಯಾರಲ್ಲೂ ಇರಲಿಲ್ಲ. ಆದರೆ ಈಗ ಹಿಂದೂ ಎಂದರೆ ಹೆಮ್ಮೆ ಪಡುವ ಸ್ಥಿತಿ ನಿರ್ಮಾಣ ಆಗಿದೆ. ಹಿಂದೂಗಳು ಕೂಡ ಸಂಘಟಿತರಾಗುತ್ತಿದ್ದಾರೆ. ಮಾನಸಿಕವಾಗಿ ಕುಸಿತ ಕಂಡಿದ್ದವರನ್ನು ಮೇಲೆತ್ತುವಲ್ಲಿ ಆರ್‌ಎಸ್‌ಎಸ್ ಯಶಸ್ವಿಯಾಗಿದೆ. ಹಲವು ಸನ್ನಿವೇಶಗಳಲ್ಲಿ ದೇಶ ಸಂಕಟದಲ್ಲಿ ಇದ್ದ ಸಂದರ್ಭ ಸಮಾಜದ ಸಹಕಾರದೊಂದಿಗೆ ಸಂಘ ಸ್ಪಂದನೆ ನೀಡಿದೆ. ದೇಶ ವಿರೋಧಿ ಚಟುವಟಿಕೆಗಳು ನಡೆದಾಗಲು ಸಮಾಜವನ್ನು ಜಾಗೃತಿಗೊಳಿಸಿದೆ.
ವ್ಯಕ್ತಿತ್ವ ನಿರ್ಮಾಣದಿಂದ ರಾಷ್ಟ್ರದ ನಿರ್ಮಾಣ ಸಾಧ್ಯ ಎನ್ನುವ ಪರಿಕಲ್ಪನೆಯಲ್ಲಿ ಆರ್‌ಎಸ್‌ಎಸ್ ಸ್ಥಾಪನೆಯಾಗಿದ್ದು ಕಳೆದ ನೂರು ವರ್ಷಗಳಲ್ಲಿ ಇದರಲ್ಲಿ ಯಶಸ್ಸು ಸಾಧಿಸಿದೆ. ಪ್ರಾಮಾಣಿಕತೆ, ನಿಸ್ವಾರ್ಥದಿಂದ ದೇಶದ ಕೆಲಸ ಮಾಡಬೇಕು ಎನ್ನುವ ಚಿಂತನೆ ಹುಟ್ಟುಹಾಕಲು ದಿನಕ್ಕೆ ಒಂದು ಗಂಟೆಯ ಕಾರ್ಯತಂತ್ರವಾಗಿ ಶಾಖೆಗಳನ್ನು ನಡೆಸಲಾಗುತ್ತದೆ. ಬಾಲಕರಿಂದ ಹಿಡಿದು ಹಿರಿ ವಯೋಮಾನದವರಿಗೆ ಎಲ್ಲರೂ ಇಲ್ಲಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ವ್ಯಕ್ತಿಗಳನ್ನು ಸಮಾಜಕ್ಕೋಸ್ಕರ ಸಿದ್ಧ ಮಾಡಲು ಶಾಖೆಗಳ ಮೂಲಕ ವೇದಿಕೆ ಕಲ್ಪಿಸಲಾಗುತ್ತದೆ. ದೇಶದಲ್ಲಿ ಪ್ರತಿದಿನ ಇಂಥ 1.40 ಲಕ್ಷ ಚಟುವಟಿಕೆಗಳು ನಡೆಯುತ್ತದೆ.
ಸಮಾಜ ಚೆನ್ನಾಗಿ ಇರಬೇಕು, ಸುರಕ್ಷಿತವಾಗಿ ಇರಬೇಕು ಎನ್ನುವುದರ ಜತೆಗೆ ದೇಶದ ಮೌಲ್ಯಗಳನ್ನು ವೃದ್ಧಿ ಮಾಡುವುದು ಹೇಗೆ ಎಂಬ ಚಿಂತನೆ ಎಲ್ಲರಲ್ಲೂ ಇರಬೇಕು. ವ್ಯಕ್ತಿಗೆ ಬೇಕಾದ ಸಂಸ್ಕಾರ, ಸಂಸ್ಕೃತಿ, ಮೌಲ್ಯ ಕಲಿಸುವ ಮನೆಗಳು ಈಗ ಹಿಂದೂ ಮನೆಗಳಾಗಿ ಉಳಿದಿವೆಯಾ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಕುಟಂಬದಲ್ಲೂ ಕನಿಷ್ಠ ವಾರಕ್ಕೆ ಒಮ್ಮೆ ಒಟ್ಟಿಗೆ ಊಟ ಮಾಡಬೇಕು. ಸಮಾಜಕ್ಕಾಗಿ ಏನು ಮಾಡಬೇಕು ಎನ್ನುವುದು ಇಲ್ಲಿ ಚರ್ಚೆ ಆಗಬೇಕು. ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೆ ಕೊಡುವ ಜವಾಬ್ದಾರಿ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮತ್ತು ಪರಿಸರ ಬೆಳೆಸುವ ಬಗ್ಗೆ ಚಿಂತನೆ ನಡೆಸಬೇಕು.
ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮೂಡಬೇಕು. ಅನೇಕರು ಅಸ್ಪೃಸ್ಪೃಶ್ಯತೆ ಅಳಿಸಲು ಕೆಲಸ ಮಾಡಿದರು. ಈ ಅನಿಷ್ಠ ಇನ್ನೂ ಸಂಪೂರ್ಣ ಅಳಿದಿಲ್ಲವಾದರೂ ತೀವ್ರತೆ ಕಡಿಮೆ ಆಗಿದೆ. ಆರ್‌ಎಸ್‌ಎಸ್ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅಸ್ಪೃಶ್ಯತೆ ನಿರ್ಮೂಲನೆ ಮಾಡುವಲ್ಲಿ ನಾವು ಏನು ಮಾಡಬೇಕು ಎನ್ನುವುದರ ಚಿಂತನೆ ಆಗಬೇಕು. ಸ್ವದೇಶಿ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಇದರಿಂದ ದೇಶ ಸ್ವಾವಲಂಬನೆ ಆಗುತ್ತದೆ. ಸ್ವಾಭಿಮಾನ ಬೆಳೆದಾಗ ದೇಶ ಸದೃಢವಾಗುತ್ತದೆ. ನಮ್ಮ ಸಂಸ್ಕೃತಿಯ ಹಿರಿಮೆ ದೃಷ್ಟಿಯಲ್ಲಿ ವಸ್ತ್ರ ಬಳಕೆ ಇರಬೇಕು. ಭಾಷೆಯೂ ಒಂದು ಸಂಸ್ಕೃತಿ ಆಗಿದ್ದು ಭಾಷೆ ಉಪಯೋಗ ಪರಿಶುದ್ಧವಾಗಿರಬೇಕು.
ನಾಗರಿಕ ಕರ್ತವ್ಯ ರೂಢಿಸಿಕೊಳ್ಳಬೇಕು. ಎಲ್ಲರ ಹಿತದೃಷ್ಟಿಯ ಗುಣ ನಡತೆ ನಮ್ಮದಾಗಬೇಕು. ಸಾರ್ವಜನಿಕ ಹಿತದ ನಿಯಮಗಳನ್ನು ಪಾಲಿಸಬೇಕು. ಸದೃಢ, ಜಾಗೃತ ಸಮಾಜ ನಿರ್ಮಾಣ ಮಾಡುವುದರ ಜತೆಗೆ ಹಿಂದುತ್ವದ ವಿಚಾರಗಳಿಗೆ ಶಕ್ತಿ ತುಂಬಬೇಕು. ಸಮಾಜದಲ್ಲಿ ಮೌಲ್ಯ ರೂಪಿಸುವ ಕೊರತೆ ಸರಿಪಡಿಸುವ ಕೆಲಸ ಮಾಡಬೇಕು. ಈ ಎಲ್ಲಾ ವಿಷಯಗಳಲ್ಲೂ ಸಂಘ ಮುಂಚೂಣಿಯಲ್ಲಿ ಇರುತ್ತದೆ ಎಂದರು.
ಕೊಡಗು ಜಿಲ್ಲಾ ಸಂಘಚಾಲಕ ಚಕ್ಕೇರ ಮನು ಕಾವೇರಪ್ಪ, ಜಿಲ್ಲಾ ಕಾರ್ಯವಾಹ ಡಿ.ಕೆ. ರವಿ, ಜಿಲ್ಲಾ ಪ್ರಚಾರ ಪ್ರಮುಖ್ ಬಿ.ಎ. ಭಾಸ್ಕರ್ ಹಾಗೂ ಸಂಪರ್ಕ ಪ್ರಮುಖ್ ನಂದಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net