ಭತ್ತದ ಕೃಷಿ ನಮ್ಮ ಸಂಸ್ಕೃತಿಯ ಭಾಗ

ಬೇಗೂರು ಗ್ರಾಮ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದ ಹಗ್ಗ ಜಗ್ಗಾಟ ಸ್ಪರ್ಧೆ ಪುರುಷರ ವಿಭಾದಲ್ಲಿ ಪ್ರಥಮ ಸ್ಥಾನ ಪಡೆದ ಮಹಾವಿಷ್ಣು ತಂಡ.
ಬೇಗೂರು ಗ್ರಾಮ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದ ಹಗ್ಗ ಜಗ್ಗಾಟ ಸ್ಪರ್ಧೆ ಪುರುಷರ ವಿಭಾದಲ್ಲಿ ಪ್ರಥಮ ಸ್ಥಾನ ಪಡೆದ ಮಹಾವಿಷ್ಣು ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಭತ್ತದ ಕೃಷಿ ನಮ್ಮ ಸಂಸ್ಕೃತಿಯ ಭಾಗ
  • ಬೇಗೂರು ಗ್ರಾಮ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮತ್ರಂಡ ಪೂಣಚ್ಚ
ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಪಟ್ಟಕೇರಿ ಅಂಬಲ ಒಕ್ಕೂಟದ ವತಿಯಿಂದ ಬೇಗೂರಿನ ಬೆಂಜಂಡ ಪ್ರೇಮಾ ರಾಮು ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ, ೧೦ನೇ ವರ್ಷದ ಬೇಗೂರು ಗ್ರಾಮ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಬೇಗೂರು ಗಾಮಸ್ಥರು ಹಾಗೂ ಚಿಣ್ಣರು ಕೆಸರು ಗದ್ದೆಯಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹುದಿಕೇರಿ ಪ್ಯಾಕ್ಸ್ ಅಧ್ಯಕ್ಷ ಅಜ್ಜಿಕುಟ್ಟಿರ ಮುತ್ತಪ್ಪ ಅವರು ಹೂ ಕುಂಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬೇಗೂರು ಗ್ರಾಮಸ್ಥರು ಪ್ರತಿ ವರ್ಷ ತಮ್ಮ ಗ್ರಾಮಮಟ್ಟದಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸುವ ಮೂಲಕ ಭತ್ತದ ಕೃಷಿಯತ್ತ ಯುವಕರು ಒಲವು ತೋರುವಂತೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬೇಗೂರಿನ ಗ್ರಾಮಸ್ಥರು ಅನೇಕ ಸವಾಲುಗಳ ನಡುವೆಯೂ ಭತ್ತದ ಕೃಷಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಬೇಗೂರು ಪೂಳೆಮಾಡು ಈಶ್ವರ ದೇವಸ್ಥಾನದ ದೇವತಕ್ಕರು ಹಾಗೂ ಮಾಜಿ ಸೈನಿಕರಾದ ಮತ್ರಂಡ ಪೂಣಚ್ಚ ಮಾತನಾಡಿ, ಭತ್ತದ ಕೃಷಿ ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಇದರಿಂದ ಭೂಮಿಯಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಅಂತರ್ಜಲ ಹೆಚ್ಚಾದರೆ, ಕೆರೆ ಕಟ್ಟೆಗಳು ತುಂಬುತ್ತವೆ. ಆದ್ದರಿಂದ ಗದ್ದೆಯನ್ನು ಹೊಂದಿರುವ ಪ್ರತಿಯೊಬ್ಬರೂ ಗದ್ದೆಯನ್ನು ಪಾಳು ಬಿಡದೇ ಪ್ರತಿವರ್ಷ ಭತ್ತ ನಾಟಿ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಟ್ಟಕೇರಿ ಅಂಬಲ ಒಕ್ಕೂಟದ ಅಧ್ಯಕ್ಷ ಅರಮಣಮಾಡ ಕೆ.ವಿಜಯ ಅವರು, ಒಕ್ಕೂಟ ಪ್ರಾರಂಭವಾದಾಗಿನಿಂದಲೂ ಗ್ರಾಮದಲ್ಲಿ ಕೃಷಿ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭತ್ತ ಬೆಳೆಯಲು ಪ್ರೇರೇಪಿಸಲಾಗುತ್ತಿದೆ. ಲಾಭ ನಷ್ಟದ ಲೆಕ್ಕಾಚಾರ ಹಾಕದೆ, ಗದ್ದೆಯೊಂದಿಗಿರುವ ಭಾವನಾತ್ಮಕ ಸಂಬಂಧದ ಕುರುಹಾಗಿ ಯುವಕರೂ ಕೂಡ ಭತ್ತ ಬೆಳೆಯತ್ತ ಆಕರ್ಷೀತರಾಗಿರುವುದು ಹೆಮ್ಮೆ ತಂದಿದೆ ಎಂದರು.
ಇದೇ ಸಂದರ್ಭ ಬೇಗೂರು ಗ್ರಾಮದ ಪ್ರಗತಿಪರ ಕೃಷಿಕರಾದ ಮತ್ರಂಡ ಮಣಿ ನಂಜಪ್ಪ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಸ್ಪರ್ಧೆಯ ವಿಜೇತರು: ಹಗ್ಗ ಜಗ್ಗಾಟ ಸ್ಪರ್ಧೆ ಪುರುಷರ ವಿಭಾದಲ್ಲಿ ಮಹಾವಿಷ್ಣು ತಂಡ ಪ್ರಥಮ, ಕುಂದೂರು ಭಗವತಿ ದ್ವಿತೀಯ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಮಹಾವಿಷ್ಣು ತಂಡ(ಪ್ರ), ಓಣಿಯಲ್ ಅಯ್ಯಪ್ಪ ತಂಡ(ದ್ವಿ) , ೧೮ ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಪುಳೆಮಾಡು ಈಶ್ವರ ತಂಡ(ಪ್ರ), ಕೂರ್ಗ್ ಫಾಲ್ಕನ್(ದ್ವಿ), ೧೪ ವರ್ಷ ಒಳಗಿನ ಮಕ್ಕಳವಿಭಾಗದಲ್ಲಿ ಗಾನವಿ ತಂಡ(ಪ್ರ), ಕಾವೇರಪ್ಪ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ವಾಲಿಬಾಲ್ನಲ್ಲಿ ಮಹಾವಿಷ್ಣು ತಂಡ(ಪ್ರ), ಪಟ್ಟಗೇರಿ ಒಕ್ಕೂಟ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕೆಸರುಗದ್ದೆ ಓಟದ ಸ್ಪರ್ಧೆ ಪುರುಷರ ವಿಭಾಗದಲ್ಲಿ ದೀಪಕ್(ಪ್ರ), ಚಂಗಪ್ಪ(ದ್ವಿ), ಮಹಿಳೆಯರ ವಿಭಾಗದಲ್ಲಿ ನವ್ಯ(ಪ್ರ), ಪೂಜಾ ದ್ವಿತೀಯ ಸ್ಥಾನ ಪಡೆದುಕೊಂಡರು.
ವಿಷದ ಚೆಂಡು ಸ್ಪರ್ಧೆ ಪುರುಷರ ವಿಭಾಗದಲ್ಲಿ ಶರಣು ತಮ್ಮಯ್ಯ(ಪ್ರ), ಉತ್ತಪ್ಪ(ದ್ವಿ), ಮಹಿಳೆಯರ ವಿಭಾಗದಲ್ಲಿ ನಿತ್ಯಾ ಪ್ರಥಮ, ನವ್ಯ ದ್ವಿತೀಯ ಸ್ಥಾನ ಪಡೆದುಕೊಂಡರು.
ಮಕ್ಕಳ ಓಟ ೧೦ರಿಂದ ೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಿವಂ(ಪ್ರ), ಲೂಥನ್ ಸೋಮಯ್ಯ(ದ್ವಿ), ಬಾಲಕಿಯರ ವಿಭಾಗದಲ್ಲಿ ಗಾನವಿ(ಪ್ರ), ಶಾನ್ವಿ(ದ್ವಿ), ೧೫ ರಿಂದ ೧೮ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೃತಿಕ್(ಪ್ರ), ಮನೋಜ್(ದ್ವಿ), ಬಾಲಕಿಯರ ವಿಭಾಗದಲ್ಲಿ ನವ್ಯ(ಪ್ರ), ಗಾನವಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಬೇಗೂರು ಪಟ್ಟಕೇರಿ ಅಂಬಲ ಒಕ್ಕೂಟದ ಸದಸ್ಯರಿಗಾಗಿ ನಡೆದ ವಿಷದ ಚೆಂಡು ಸ್ಪರ್ಧೆಯಲ್ಲಿ ಅಂಬಿಕ(ಪ್ರ), ಸುಶೀಲ(ದ್ವಿ), ಮಕ್ಕಳ ವಿಭಾಗದಲ್ಲಿ ಬಿಪಾಶ(ಪ್ರ), ಪುಣ್ಯ(ದ್ವಿ), ಒಕ್ಕೂಟದ ಬಾಲಕರ ಓಟದಲ್ಲಿ ಲೂಥನ್(ಪ್ರ), ಬೋಪಣ್ಣ(ದ್ವಿ), ಒಕ್ಕೂಟದ ಬಾಲಕಿಯರ ಓಟದಲ್ಲಿ ಗಾನವಿ(ಪ್ರ), ಯಶಿಕ ದ್ವಿತೀಯ ಸ್ಥಾನ ಪಡೆದುಕೊಂಡರು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಕೇಚೆಟ್ಟಿರ ಶರಣು ತಮ್ಮಯ್ಯ, ಕಾರ್ಯದರ್ಶಿ ಮತ್ರಂಡ ವೀಟು ಉತ್ತಪ್ಪ, ಮಾಜಿ ಅಧ್ಯಕ್ಷ ಮತ್ರಂಡ ರಾಜ ಮುತ್ತಪ್ಪ, ಮಾಜಿ ಕಾರ್ಯದರ್ಶಿ ಚೋಡುಮಾಡ ಅಪ್ಪು ಸುಬ್ಬಯ್ಯ, ಮತ್ರಂಡ ಮನೋಜ್ ಬಿದ್ದಪ್ಪ, ಮತ್ರಂಡ ಅರ್ಜುನ, ಮತ್ರಂಡ ವೀಸು ತಮ್ಮಯ್ಯ, ಅರಮಣಮಾಡ ನಾಚಪ್ಪ, ಒಕ್ಕೂಟದ ಸದಸ್ಯರು ಹಾಗೂ ಬೇಗೂರು ಗ್ರಾಮಸ್ಥರು ಇದ್ದರು. ಮತ್ರಂಡ ಗಾನವಿ ದೇಚಮ್ಮ ಪ್ರಾರ್ಥಿಸಿ, ಮತ್ರಂಡ ಬೋಪಣ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net