ವಿರಾಜಪೇಟೆಯಲ್ಲಿ ಗಮನ ಸೆಳೆದ ಸೌಂದರ್ಯ ಸ್ಪರ್ಧೆ

ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು.
ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು.
Published on

ಪ್ರಮುಖ ಮುಖ್ಯಾಂಶಗಳು

  • ವಿರಾಜಪೇಟೆಯಲ್ಲಿ ಗಮನ ಸೆಳೆದ ಸೌಂದರ್ಯ ಸ್ಪರ್ಧೆ
ಮಡಿಕೇರಿ: ಪ್ರತೀಶ್ ಪೂವಯ್ಯ ಕಾಸ್ಟಿಂಗ್ ಏಜೆನ್ಸಿ ಮತ್ತು ಪಾತಕ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ವಿರಾಜಪೇಟೆಯ ಶಾನ್‌ಭಾಗ್ ಸೆಂಟರ್ ರೂಫ್ ಟಾಪ್‌ನಲ್ಲಿ ಮಿಸೆಸ್, ಮಿಸ್, ಮಿಸ್ಟರ್, ಟೀನ್ ಬಾಯ್, ಟೀನ್ ಗರ್ಲ್, ಪ್ರಿನ್ಸ್ ಹಾಗೂ ಪ್ರಿನ್ಸೆಸ್ ೨೦೨೬ ಸ್ಪರ್ಧೆ ನಡೆಯಿತು.
ಸ್ಪರ್ಧಿಗಳು ಆತ್ಮವಿಶ್ವಾಸ, ಪ್ರತಿಭೆ ಮತ್ತು ವ್ಯಕ್ತಿತ್ವದ ಮೂಲಕ ತೀರ್ಪುಗಾರರು ಹಾಗೂ ಪ್ರೇಕ್ಷಕರ ಮನಗೆದ್ದರು. ಎಲ್ಲಾ ವಿಭಾಗಗಳಲ್ಲಿಯೂ ತೀವ್ರ ಪೈಪೋಟಿ ಕಂಡು ಬಂದಿತು. ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಹಾಗೂ ಸಮಾಜಸೇವಕಿ ಕಾಣತಂಡ ಬೀನಾ ಜಗದೀಶ್, ಮಿಸ್ ಸೌತ್ ಇಂಡಿಯಾ ಮಾಡೆಲ್ ೨೦೨೬ರ ಮೊಳ್ಳೆರ ನಿಶಿ ಅಪ್ಪಣ್ಣ ಹಾಗೂ ಮಿಸ್ಟರ್ ಕೂರ್ಗ್ ೨೦೨೩ರ ತಿತ್ತಿರ ಕುಟ್ಟಪ್ಪ ಭಾಗವಹಿಸಿದ್ದರು. ತಮ್ಮ ಅನುಭವ ಹಾಗೂ ಪರಿಣತಿಯಿಂದ ಸ್ಪರ್ಧೆಯನ್ನು ನ್ಯಾಯಯುತವಾಗಿ ಮೌಲ್ಯಮಾಪನ ಮಾಡಿದರು.
ಕೊಡವ ಚಿತ್ರರಂಗ ಹಾಗೂ ಮನೋರಂಜನಾ ಕ್ಷೇತ್ರದ ಪುಗ್ಗೇರ ಆಕಾಶ್, ಚೇನಂಡ ಗಿರೀಶ್ ಪೂಣಚ್ಚ, ಸೋಮೆಯಂಡ ಬೋಸ್ ಬೆಳ್ಳಿಯಪ್ಪ, ತಾತಂಡ ಮಿನ್ನು, ಕುಪ್ಪಣಮಾಡ ಭೂಮಿಕಾ, ಕುಪ್ಪಣಮಾಡ ಜಾನ್ಸಿ, ಟಿ.ಡಿ.ಮೋಹನ್, ಸಂಕೇತ್ ಶಿವಪ್ಪ, ವಿಷ್ಣು ಸೇರಿದಂತೆ ಅನೇಕ ಕಲಾವಿದರು, ನೃತ್ಯ ನಿರ್ದೇಶಕರು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿತ್ತು. ಇಂಟೋ ಪೀಸ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಮನಮೋಹಕ ನೃತ್ಯ ಪ್ರದರ್ಶನ ನಡೆಯಿತು. ಟಿ.ಡಿ.ಮೋಹನ್, ವಿಷ್ಣು ಮತ್ತಿತರ ಗಾಯಕರು ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕೊಡವ ಚಿತ್ರರಂಗದ ಖ್ಯಾತ ನಟಿ ಮುಂಡಚಾಡಿರ ರಿನಿ ಭರತ್ ಕಾರ್ಯಕ್ರಮ ನಿರೂಪಿಸಿದರು.
ಮಿಸೆಸ್ ವಿಭಾಗದಲ್ಲಿ ಶಯನ್ ಕಾರ್ಯಪ್ಪ ಕಲ್ಲೆಂಗಡ(ಪ್ರ), ಅಮ್ಮಂಡ ಪಲ್ಲವಿ ಅಶ್ವತ್ ದ್ವಿತೀಯ ಸ್ಥಾನ ಪಡೆದರು. ಮಿಸ್ ವಿಭಾಗದಲ್ಲಿ ಮೋಕ್ಷಾ ಅಪ್ಪಾರಂಡ(ಪ್ರ), ಪುಗ್ಗೇರ ಪಾಯಲ್ ಪೊನ್ನಮ್ಮ ದ್ವಿತೀಯ ಸ್ಥಾನ ಪಡೆದರು. ಟೀನ್ ಗರ್ಲ್ ವಿಭಾಗದಲ್ಲಿ ಶ್ರಾವಣಿ ರಾಜೇಶ್(ಪ್ರ), ಸಿಯಲ್ ಗಂಗಮ್ಮ(ದ್ವಿ), ದಿತಿ ದೇಚಮ್ಮ ತೃತೀಯ ಸ್ಥಾನ ಪಡೆದರು. ಟೀನ್ ಬಾಯ್ ವಿಭಾಗದಲ್ಲಿ ವೃಷಭ್ ಉತ್ತಪ್ಪ(ಪ್ರ), ಧಿವಿತ್(ದ್ವಿ), ಭವೀಶ್ ತೃತೀಯ ಸ್ಥಾನ ಪಡೆದರೆ, ಮಿಸ್ಟರ್ ವಿಭಾಗದಲ್ಲಿ ಕಿಲನ್ ನಾಚಪ್ಪ(ಪ್ರ), ಎ.ಆರ್.ಪ್ರೀತಂ ದ್ವಿತೀಯ ಸ್ಥಾನ ಪಡೆದರು. ಪ್ರಿನ್ಸ್ ವಿಭಾಗದಲ್ಲಿ ಮೋಕ್ಷಿತ್(ಪ್ರ), ಮಯುಕ್ ಮಾದಪ್ಪ ದ್ವಿತೀಯ ಸ್ಥಾನ ಪಡೆದರು. ಪ್ರಿನ್ಸೆಸ್ ವಿಭಾಗದಲ್ಲಿ ಯಶ್ಮಿಕಾ ಪೊನ್ನಮ್ಮ ಕುಂದ್ರಂಡ(ಪ್ರ), ಶ್ರುನಿಖಾ ಭುವನ್ ಕನತಂಡ(ದ್ವಿ), ನಿರ್ವೇದ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮವನ್ನು ಕೊಡವ ಚಲನಚಿತ್ರರಂಗದ ನಿರ್ದೇಶಕ ಪ್ರತೀಶ್ ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯು ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಹಾಗೂ ಫ್ಯಾಷನ್, ಮಾಡೆಲಿಂಗ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಒದಗಿಸಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ತೀರ್ಪುಗಾರರು, ಅತಿಥಿಗಳು, ಕಲಾವಿದರು, ಪ್ರೇಕ್ಷಕರು ಹಾಗೂ ಎಲ್ಲಾ ಸ್ಪರ್ಧಾರ್ಥಿಗಳಿಗೆ ಆಯೋಜಕರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮ ಪ್ರತಿಭೆ, ಸೌಂದರ್ಯ, ಆತ್ಮವಿಶ್ವಾಸ ಹಾಗೂ ಕೊಡವ ಸಮುದಾಯದ ಸಾಂಸ್ಕೃತಿಕ ವೈಭವವನ್ನು ಸಂಭ್ರಮಿಸುವ ಮೂಲಕ ಜನಸಮೂಹ, ಕುಟುಂಬದ ಸದಸ್ಯರು, ಅಭಿಮಾನಿಗಳು ಹಾಗೂ ಕೊಡಗು ಕಲಾವಿದರ ಸಂಘದ ಸದಸ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮುಕ್ತಾಯಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net